ಬೆಚ್ಚಿಬಿದ್ದ ರಾಯಚೂರು; ಕಣ್ಣಿಗೆ ಖಾರದಪುಡಿ ಎರಚಿ ಯುವಕನ ಬರ್ಬರ ಹತ್ಯೆ

ಬೆಚ್ಚಿಬಿದ್ದ ರಾಯಚೂರು; ಕಣ್ಣಿಗೆ ಖಾರದಪುಡಿ ಎರಚಿ ಯುವಕನ ಬರ್ಬರ ಹತ್ಯೆ

ರಾಯಚೂರು: ಕಣ್ಣಿಗೆ ಖಾರದಪುಡಿ ಎರಚಿ ಯುವಕನೋರ್ವನನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಪಟ್ಟಣದಲ್ಲಿ ನಡೆದಿದೆ.

ಹಾಡಹಗಲೇ ಪಟ್ಟಣದ ನಡುಬೀದಿಯಲ್ಲಿ ಈ ಕೊಲೆ ನಡೆದಿದೆ. ಹಟ್ಟಿ ಚಿನ್ನದ ಗಣಿಯ ಹೊಸ ಬಸ್ ನಿಲ್ದಾಣದ ಹತ್ತಿರ ಬರ್ಬರ ಹತ್ಯೆ ನಡೆದಿದ್ದು ಸಾವನ್ನಪ್ಪಿದವನನ್ನ ದಿಲ್​ಬರ್​ (30) ಎಂದು ಗುರುತಿಸಲಾಗಿದೆ. ಘಟನಾ‌ ಸ್ಥಳಕ್ಕೆ ಸಿಪಿಐ ಮಹಾಂತೇಶ್ ಸಜ್ಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Source: newsfirstlive.com Source link