ವಿಷ ಅಲ್ಲ.. ಔಷಧ..! ಭಯಂಕರ ವಿಷದ ಹಾವಿನಲ್ಲಿದೆ ಕೊರೊನಾಗೆ ಮದ್ದು..!

ವಿಷ ಅಲ್ಲ.. ಔಷಧ..! ಭಯಂಕರ ವಿಷದ ಹಾವಿನಲ್ಲಿದೆ ಕೊರೊನಾಗೆ ಮದ್ದು..!

ಕೊರೊನಾ ಸೋಂಕಿಗೆ ಇಡೀ ಜಗತ್ತೇ ಹೈರಾಣವಾಗಿ ಬಿಟ್ಟಿದೆ. ವ್ಯಾಕ್ಸಿನ್‌ ತಗೊಂಡವರನ್ನು ಈ ಸೋಂಕು ಬಿಡುತ್ತಿಲ್ಲ. ಈ ನಡುವೆ ಬ್ರೆಜಿಲ್‌ ವಿಶ್ವವಿದ್ಯಾಲಯದಲ್ಲಿ ನಡೆದಿರೋ ಸಂಶೋಧನೆಯೊಂದು ಭಾರೀ ಭರವಸೆ ಮೂಡಿಸಿದೆ. ಅದನ್ನು ಕೇಳಿದ್ರೆ ಅಚ್ಚರಿಗೊಳ್ಳುತ್ತೀರಿ, ಅಷ್ಟೇ ಖುಷಿಗೊಳ್ಳುತ್ತೀರಿ.

ಅದು, 2019 ಡಿಸೆಂಬರ್‌, ಚೀನಾದಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತದೆ. ಅದು ಜಗತ್ತಿನಲ್ಲಿಯೇ ದಾಖಲಾದ ಮೊದಲ ಕೊರೊನಾ ಸೋಂಕಾಗಿರುತ್ತದೆ. ಅನಂತರ ನಡೆದಿರುವುದೆಲ್ಲಾ ಇತಿಹಾಸವಾಗಿ ನಿರ್ಮಾಣವಾಗಿ ಬಿಡ್ತು. ವಿಮಾನ ಹಾರಟ, ಬಸ್‌ ಸಂಚಾರ, ರೈಲ್ವೆ ಸಂಚಾರ. ಎಲ್ಲವೂ ಬಂದ್‌ ಬಂದ್‌!

ಅದೆಷ್ಟೋ ಜನ ಸೋಂಕಿನಿಂದ ತಂದೆ-ತಾಯಿ ಕಳೆದುಕೊಂಡ್ರು, ಅದೆಷ್ಟೋ ತಂದೆ ತಾಯಿಯರು ಮಕ್ಕಳನ್ನು ಕಳೆದುಕೊಂಡ್ರು, ಅದೆಷ್ಟೊ ಜನ ತಮ್ಮ ಬಂಧು ಬಳಗದವರನ್ನು ಕಳೆದುಕೊಂಡು ಕಣ್ಣೀರು ಹಾಕಿದ್ರು. ಹಾಗಂತ ವಿಜ್ಞಾನಿಗಳೇನು ಕೈಕಟ್ಟಿಕೊಳಿತುಕೊಂಡಿಲ್ಲ. ಸೋಂಕು ನಿಯಂತ್ರಣಕ್ಕೆ ವ್ಯಾಕ್ಸಿನ್‌ ಕಂಡು ಹಿಡಿದ್ರು. ಆದ್ರೆ, ಸೋಂಕು ರೂಪಾಂತರ ಪಡೆದು ಮತ್ತೆ ಮತ್ತೆ ಅಟ್ಯಾಕ್‌ ಮಾಡುತ್ತಿದೆ. ವ್ಯಾಕ್ಸಿನ್‌ ತೆಗೆದುಕೊಂಡವರಲ್ಲಿಯೂ ಸೋಂಕು ಪತ್ತೆಯಾಗುತ್ತಿದೆ. ಹಾಗಾದ್ರೆ ಕೊರೊನಾ ಸೋಂಕು ಹರಡೋದನ್ನ ತಡೆಯುವಂತ ರಾಮಬಾಣವಾಗಿ ಯಾವುದು ಇಲ್ವಾ? ಯಾವುದೇ ಔಷಧಿ ರಾಮಬಾಣವಾಗಿ ಬರೋದಿಲ್ವಾ? ಖಂಡಿತ ಬರುತ್ತೆ. ಅಂತಹವೊಂದು ಆಶಾಭಾವನೆಯನ್ನು ಬ್ರೆಜಿಲ್‌ ವಿಶ್ವವಿದ್ಯಾಲಯದ ಸಂಶೋಧನೆ ಹುಟ್ಟು ಹಾಕಿದೆ.

ಹಾವಿನ ವಿಷದಲ್ಲಿದೇ ಕೋವಿಡ್‌ಗೆ ಮದ್ದು
ಬ್ರೆಜಿಲ್‌ನ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ

ಹಾವು ಕಂಡ್ರೆ ಸಾಕು ಮಾರು ದೂರು ಓಡಿ ಹೋಗುತ್ತೇವೆ. ಕನಸಲ್ಲಿ ಹಾವು ಕಂಡ್ರೂ ಬೆಚ್ಚಿ ಬೀಳುತ್ತೇವೆ. ಅದರಲ್ಲಿಯೂ ವಿಷದ ಕಾವು ಕಣ್ಣ ಮುಂದೆ ಬಂದ್ರೆ ಮುಗಿದೇ ಹೋಯ್ತು. ಎದೆ ಒಂದು ಸಾರಿ ಜಲ್‌ ಅಂದು ಬಿಡುತ್ತದೆ. ಆದ್ರೆ, ಇದೇ ಹಾವಿನಲ್ಲಿರೋ ವಿಷದಲ್ಲಿ ಕೊರೊನಾಗೆ ಮದ್ದು ಇದೆ. ಇದು ಅಚ್ಚರಿಯಾದ್ರೂ ಸತ್ಯ. ಅದನ್ನು ಬ್ರೆಜಿಲ್‌ನ ಸಾವೋ ಪೌಲೋ ವಿಶ್ವ ವಿದ್ಯಾಲಯದ ವಿಜ್ಞಾನಿಗಳು ಸಂಶೋಧನೆ ನಡೆಸಿದ್ದಾರೆ. ಮುಂದೊಂದು ದಿನ ಕೊರೊನಾಗೆ ಇದೇ ಮದ್ದಾಗಿ ಬಿಟ್ರೂ ಅಚ್ಚರಿಯಿಲ್ಲ. ಯಾಕಂದ್ರೆ, ವಿಶ್ವವಿದ್ಯಾಲಯವರು ನಡೆಸಿರೋ ಸಂಶೋಧನೆಯಲ್ಲಿ ಯಶಸ್ವಿಯಾಗಿದ್ದಾರೆ.

ಹಾವು ಹಿಡಿದು ತಂದು ವಿಷ ತೆಗೆದ್ರು
ಕೊರೊನಾಗೆ ಔಷಧವಾಗಿ ಪರಿವರ್ತಿಸಿದ್ರು

ವಿಶ್ವ ವಿದ್ಯಾಲಯದ ವಿಜ್ಞಾನಿಗಳಿಗೆ ಹಾವಿನ ವಿಷದಲ್ಲಿ ಔಷಧಿಯ ಗುಣವಿದೆ ಅನ್ನೋದು ಗೊತ್ತಾಗಿದೆ. ಹೀಗಾಗಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಯಾಕೆ ಹಾವಿನ ವಿಷ ಬಳಸಬಾರದು. ಅದನ್ನು ತೆಗೆದು ಯಾಕೆ ಪ್ರಯೋಗ ನಡೆಸಬಾರದು ಅನಿಸಿದೆ. ಹೀಗಾಗಿಯೇ ಬ್ರೆಜಿಲ್‌ನ ಕಾಡುಗಳಲ್ಲಿ ಸಿಗೋ ವಿಷಕಾರಿ ಜರಾರಕುಸು ಹಾವನ್ನು ಹಿಡಿದುಕೊಂಡು ಪ್ರಯೋಗಾಲಯಕ್ಕೆ ತಂದಿದ್ದಾರೆ. ಹಾಗೇ ಪ್ರಯೋಗಾಲಯದಲ್ಲಿ ಹಾವಿನ ವಿಷ ತೆಗೆದಿದ್ದಾರೆ. ಆ ವಿಷಕ್ಕೆ ಬೇರೆ ಬೇರೆ ವೈಜ್ಞಾವಿಕ ಉಪಕರಣ ಬಳಸಿ, ರಾಸಾಯನಿಕ ಸೇರಿಸಿ ಔಷಧಿ ತಯಾರಿಸಿದ್ದಾರೆ. ವೈರಸ್‌ ಕೊಲ್ಲುವ ಔಷಧ ಇದಾಗಿದೆ. ಆದ್ರೆ, ಔಷಧ ಸಿದ್ಧಪಡಿಸಿದ ಮೇಲೆ ವಿಶ್ವ ವಿದ್ಯಾಲಯದ ವಿಜ್ಞಾನಿಗಳು ಮೊದಲು ಪ್ರಯೋಗ ಮಾಡಿದ್ದು ಯಾವ ಪ್ರಾಣಿಗಳ ಮೇಲೆ ಗೊತ್ತಾ?

ಮಂಗ, ಕತ್ತೆಗಳ ಮೇಲೆ ಪ್ರಯೋಗ ಮಾಡಲಾಗಿತ್ತು
ಮಂಗಗಳ ಮೇಲಿನ ಪ್ರಯೋಗ ಶೇ.75 ರಷ್ಟು ಯಶಸ್ವಿ

ಯಾವುದೇ ಔಷಧವಾಗಿದ್ರೂ ಅದನ್ನು ಮೊದಲು ಪ್ರಯೋಗ ಮಾಡುವುದು ಪ್ರಾಣಿಗಳ ಮೇಲೆ. ಹಾಗೇ ಬ್ರೆಜಿಲ್‌ ವಿಶ್ವವಿದ್ಯಾಲಯದವರು ಸಂಶೋಧಿಸಿದ ಔಷಧವನ್ನು ಸೋಂಕು ಬಂದ ಮಂಗ ಮತ್ತು ಕತ್ತೆಗಳ ಮೇಲೆ ಪ್ರಯೋಗ ಮಾಡಿದ್ದಾರೆ. ಇದರಲ್ಲಿ ಮಂಗಗಳ ಮೇಲೆ ಮಾಡಿರೋ ಪ್ರಯೋಗ ಯಶಸ್ವಿಯಾಗಿದೆ. ಶೇಕಡಾ 75 ರಷ್ಟು ಪ್ರತಿಫಲ ಸಿಕ್ಕಿದೆ. ಅಂದ್ರೆ, ಈ ಔಷಧ ನೀಡಿದ ಮೇಲೆ ಮಂಗಗಳಲ್ಲಿ ಸೋಂಕು ವಾಸಿಯಾಗಿದೆ. ಅಷ್ಟೇ ಅಲ್ಲ, ಸೋಂಕು ಬಂದಿರೋ ಮಂಗಗಳಿಂದ ಇತರೆ ಮಂಗಗಳಿಗೆ ಸೋಂಕು ಹಬ್ಬಿಲ್ಲ. ಹೀಗಾಗಿ ಇದೊಂದು ಆಶಾದಾಯಕ ಸಂಶೋಧನೆಯಾಗಿದೆ. ಇನ್ನು ಕತ್ತೆಗಳ ಮೇಲೆ ಮಾಡಿರೋ ಸಂಶೋಧನೆ ಹೊರಬರಬೇಕಿದೆ. ಅದರಲ್ಲಿಯೂ ಯಶಸ್ವಿಯಾದ್ರೆ, ಮುಂದೆ ಮನುಷ್ಯರ ಮೇಲೆ ಕ್ಲಿನಿಕಲ್‌ ಟ್ರಯಲ್‌ಗಳು ನಡೆಯಲಿವೆ.

ಮನುಷ್ಯರ ಮೇಲೂ ನಡೆಯುತ್ತೆ ಕ್ಲಿನಿಕಲ್‌ ಟ್ರಯಲ್‌
ಮಂಗಗಳ ಮೇಲೆ ನಡೆದಿರೋ ಟ್ರಯಲ್‌ನಲ್ಲಿ ಶೇಕಡ 75 ರಷ್ಟು ಯಶಸ್ವಿಯಾಗಿರುವುದು ಸಂಶೋಧಕರಲ್ಲಿ ಉತ್ಸಾಹ ತಂದಿದೆ. ಹೀಗಾಗಿ ಇನ್ನಷ್ಟು ಪ್ರಯೋಗಗಳನ್ನು ಮಾಡಲು ಮುಂದಾಗಿದ್ದಾರೆ. ಆ ಎಲ್ಲಾ ಟ್ರಯಲ್‌ನಲ್ಲಿ ಯಶಸ್ವಿಯಾದ ಮೇಲೆ ಮನುಷ್ಯರ ಮೇಲೆ ಟ್ರಯಲ್‌ ಮಾಡಲು ವಿಶ್ವ ಆರೋಗ್ಯ ಸಂಸ್ಥೆಯಿಂದ ಒಪ್ಪಿಗೆ ಸಿಗಲಿದೆ. ಅನಂತರ ಮನುಷ್ಯರ ಮೇಲೆ ಕ್ಲಿನಿಕಲ್‌ ಟ್ರಯಲ್‌ ನಡೆಯಲಿದೆ. ಹಾವಿನ ವಿಷದಲ್ಲಿ ಸೋಂಕು ಕೊಲ್ಲುವ ಗುಣವಿದೆ. ಹೀಗಾಗಿ ಇದು ಇಡೀ ವಿಶ್ವಕ್ಕೆ ಆಶಾದಾಯಕ ಸಂಶೋಧನೆಯಾಗಿ ಬಿಟ್ಟಿದೆ. ಆದಷ್ಟು ಬೇಗ ಸಂಶೋಧನೆ ಯಶಸ್ವಿಯಾಗುವ ಅಗತ್ಯವಿದೆ.

ಪ್ರಯೋಗಾಲಯದಲ್ಲಿಯೇ ವಿಷ ಉತ್ಪತಿ
ಹಾವು ಹಿಡಿದು ವಿಷ ತೆಗೆಯುವ ಅಗತ್ಯವೂ ಇಲ್ಲ

ಕೊರೊನಾ ಇಡೀ ವಿಶ್ವದಲ್ಲಿ ಯಾವ ಪ್ರಮಾಣದಲ್ಲಿದೆ ಅನ್ನೋದು ಗೊತ್ತು. ಸೋಂಕು ಪೀಡಿತರಿಗೆ ಹಾವಿನ ವಿಷದಲ್ಲಿಯೇ ಔಷಧ ನೀಡಲು ಸಾಧ್ಯವೂ ಇಲ್ಲ. ಅಷ್ಟೇ ಅಲ್ಲ, ವಿಷ ತೆಗೆದ ಹಾವು ನಿಶಕ್ತವಾಗುತ್ತದೆ. ಹಾವಿಗೆ ತನ್ನ ಬೇಟೆಯನ್ನು ಆಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಹಾವಿನ ಪ್ರಭೇದ ನಾಶವಾಗುವ ಸಾಧ್ಯತೆಯೂ ಇರುತ್ತದೆ. ಆದರೆ ಈ ಸಂಶೋಧನೆಯಲ್ಲಿ ಆ ಚಿಂತೆ, ಆತಂಕ ಬೇಡವೇ ಬೇಡ, ಯಾಕಂದ್ರೆ, ಹಾವಿನ ವಿಷವನ್ನು ಪ್ರಯೋಗಾಲಯದ ಲ್ಯಾಬ್‌ನಲ್ಲಿಯೇ ಉತ್ಪತಿ ಮಾಡಬಹುದಂತೆ. ಇದನ್ನು ಸಂಶೋಧಕರೇ ಹೇಳಿದ್ದಾರೆ. ಅಂದರೆ ಲ್ಯಾಬ್‌ನಲ್ಲಿ ಕೃತವಾಗಿ ಕಾವಿನ ವಿಷ ಉತ್ಪತಿ ಮಾಡುತ್ತಾರೆ. ಅದನ್ನು ನಿರ್ದಿಷ್ಟ ಪ್ರಮಾಣದಲ್ಲಿ ಕೋವಿಡ್‌ ಔಷಧಿಗೆ ಬಳಕೆ ಮಾಡುತ್ತಾರೆ. ನಿಜಕ್ಕೂ ಇದು ತುಂಬಾ ಅಚ್ಚರಿ ಮತ್ತು ಸಂತೋಷದ ವಿಷಯವಾಗಿದೆ.

ವಿಷದಿಂದ ತಯಾರಾದ ಔಷಧದಿಂದ ದೇಹಕ್ಕೆ ತೊಂದರೆಯಿಲ್ಲ
ಹಾವಿನ ವಿಷ ಮನುಷ್ಯನ ದೇಹ ಸೇರಿದ್ರೆ ಏನಾಗುತ್ತದೆ ಅನ್ನೋದು ಎಲ್ಲರಿಗೂ ಗೊತ್ತು. ಪ್ರತಿ ವರ್ಷ ಅದೆಷ್ಟೋ ಲಕ್ಷ ಜನ ಹಾವು ಹಚ್ಚಿ ಸಾಯುತ್ತಾರೆ. ಹೊಲಕ್ಕೆ ಹೋದಾಗ ಹಾವು ಕಚ್ಚಿ ವ್ಯಕ್ತಿ ಸಾವು, ರಸ್ತೆಯಲ್ಲಿ ಹೋಗುವಾಗ ಹಾವು ಕಚ್ಚಿ ವ್ಯಕ್ತಿ ಸಾವು, ಆಟ ಆಡುತ್ತಿದ್ದ ಮಗುವಿಗೆ ಹಾವು ಕಚ್ಚಿ ಸಾವು. ಇಂತಹ ನೂರಾರು ಸುದ್ದಿಗಳನ್ನು ಪ್ರತಿದಿನ ನೋಡುತ್ತೇವೆ. ವಿಷಕಾರಿ ಹಾವು ಕಚ್ಚಿದ ಮೇಲೆ ಚಿಕಿತ್ಸೆ ಫಲಕಾರಿ ಆಗುವ ಸಾಧ್ಯತೆ ತುಂಬಾ ಕಡಿಮೆ ಇರುತ್ತದೆ. ಕೊರೊನಾ ಔಷಧಿ ಅಂತ ಹಾವಿನ ವಿಷ ಕೊಟ್ರೆ ಅಪಾಯ ಇಲ್ವಾ ಅನ್ನೋ ಪ್ರಶ್ನೆ ಬರುತ್ತೆ. ಆದರೆ ಸಂಶೋಧಕರು ಹೇಳುವ ಪ್ರಕಾರ ಈ ಔಷಧದಿಂದ ಯಾವುದೇ ಸಮಸ್ಯೆ ಇಲ್ಲ. ಇಲ್ಲಿ ಬರೀ ಹಾವಿನ ವಿಷ ಮಾತ್ರ ಇರುವುದಿಲ್ಲ. ನಾನಾ ರೀತಿಯ ಔಷಧಗಳನ್ನು ಅದಕ್ಕೆ ಸೇರಿಸಲಾಗಿರುತ್ತದೆ. ಔಷಧವೂ ಯಾವುದೇ ಕಾರಣಕ್ಕೂ ದೇಹದ ಇತರೆ ಭಾಗಗಳಿಗೆ ಸಮಸ್ಯೆಯನ್ನು ಉಂಟು ಮಾಡುವುದಿಲ್ಲ.

ಕೋವಿಡ್‌ ಹರಡುವಿಕೆಗೆ ಬ್ರೇಕ್‌ ನೀಡುತ್ತಾ?
ಸೋಂಕಿಗೆ ಇದುವೇ ರಾಮಬಾಣ ವಾಗುತ್ತಾ?

ಇಂದು ಕೊರೊನಾ ಸೋಂಕು ಇಡೀ ವಿಶ್ವವನ್ನು ಯಾವ ರೀತಿ ಕಾಡುತ್ತಿದೆ ಅನ್ನೋದು ಕಣ್ಮುಂದೆ ಇದೆ. ಸೂಪರ್‌ ಪವರ್‌ ಅಂತ ಕರೆಯಿಸಿಕೊಳ್ಳುತ್ತಿದ್ದ ರಾಷ್ಟ್ರಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಬಿಟ್ಟಿವೆ. ಏನೇ ಮಾಡಿದ್ರೂ ಸೋಂಕಿನಿಂದ ಮುಕ್ತಿ ಪಡೆಯಲಾಗದೇ ಒದ್ದಾಡುತ್ತಿವೆ. ವ್ಯಾಕ್ಸಿನ್‌ ಪಡೆದವರಲ್ಲಿಯೂ ಸೋಂಕು ಬರುತ್ತಿರುವುದು ವಿಶ್ವಕ್ಕೆ ತಲೆನೋವು ತಂದಿದೆ. ಹೀಗಾಗಿ ಸೋಂಕಿಗೆ ಸಮರ್ಪಕ ಔಷಧ ಬೇಕಾಗಿದೆ. ಅದು ಬ್ರೆಜಿಲ್‌ ವಿಶ್ವ ವಿದ್ಯಾಲಯದ ವಿಜ್ಞಾನಿಗಳು ಸಂಶೋಧಿಸಿರೋ ಔಷಧದಿಂದ ಮುಕ್ತಿ ಸಿಗುತ್ತಾ? ಅನ್ನೋದನ್ನು ನೋಡಬೇಕಾಗಿದೆ. ಒಮ್ಮೆ ಹಾವಿನ ವಿಷದ ಔಷಧ ಯಶಸ್ವಿಯಾದ್ರೆ ಕೋವಿಡ್‌ ಸೋಂಕಿಗೆ ಇದುವೇ ರಾಮಬಾಣ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕೊರೊನಾ ಸೋಂಕು ನಿಯಂತ್ರಣಕ್ಕೆ ವಿವಿಧ ಸಂಶೋಧನೆಗಳು ನಡೆಯುತ್ತಲೇ ಇವೆ. ಅದರಲ್ಲಿ ಬ್ರೆಜಿಲ್‌ ವಿಶ್ವವಿದ್ಯಾಲಯ ನಡೆಸಿರೋ ಸಂಶೋಧನೆ ಆದಷ್ಟು ಬೇಗ ಯಶಸ್ವಿಯಾಗಲಿ. ಸೋಂಕಿಗೆ ರಾಮಬಾಣವಾಗಲಿ ಅಂತ ಆಶಿಸೋಣ.

Source: newsfirstlive.com Source link