ಅಂಗಡಿ ಉದ್ಘಾಟನೆ ವೇಳೆ ಹಲ್ಲಿನಿಂದ ಕಚ್ಚಿ ರಿಬ್ಬನ್ ಕಟ್ ಮಾಡಿದ ಪಾಕ್ ಸಚಿವ -ನೆಟ್ಟಿಗರು ಏನಂದ್ರು..?

ಅಂಗಡಿ ಉದ್ಘಾಟನೆ ವೇಳೆ ಹಲ್ಲಿನಿಂದ ಕಚ್ಚಿ ರಿಬ್ಬನ್ ಕಟ್ ಮಾಡಿದ ಪಾಕ್ ಸಚಿವ -ನೆಟ್ಟಿಗರು ಏನಂದ್ರು..?

ಇಮ್ರಾನ್ ಖಾನ್ ಹಾಗೂ ಆತನ ಸರ್ಕಾರದ ಅನೇಕ ಮಂತ್ರಿಗಳು ಆಗಾಗ ಕೆಲವೊಂದು ಫನ್ನಿ ವಿಚಾರಕ್ಕೆ ಸುದ್ದಿಯಲ್ಲಿರ್ತಾರೆ. ಹೋದಲೆಲ್ಲಾ ಒಂದೆಲ್ಲಾ ಒಂದು ಯಡವಟ್ಟು ಮಾಡಿಕೊಂಡು ಸುದ್ದಿಯಾಗ್ತಾರೆ. ಇದೀಗ ಸೋಶಿಯಲ್ ಮಿಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ.

ಸದಾ ಗನ್, ಬಂದೂಕುಗಳಿಂದ ಸುದ್ದಿಯಾಗುತ್ತಿರುವ ಪಾಕಿಸ್ತಾನಕ್ಕೆ ಒಂದೊಳ್ಳೆ ಕತ್ತರಿ ಕೂಡ ಸಿಗಲ್ವಾ ಅನ್ನೋ ಪ್ರಶ್ನೆ ಶುರುವಾಗಿದೆ. ವಿಷಯ ಏನಪ್ಪ ಅಂದ್ರೆ, ಸೆಪ್ಟೆಂಬರ್ 2 ರಂದು, ಇಮ್ರಾನ್ ಸರ್ಕಾರದ ಮಂತ್ರಿ ಫಯಾಜ್-ಉಲ್-ಹಸನ್ ಚೋಹಾನ್ ಅವರನ್ನ ರಾವಲ್ಪಿಂಡಿಯಲ್ಲಿರುವ ಅಂಗಡಿ ಉದ್ಘಾಟನೆಗೆ ಆಹ್ವಾನ ಮಾಡಲಾಗಿತ್ತು.

ಉದ್ಘಾಟನೆ ಮಾಡುವ ವೇಳೆ ಸಚಿವರು ರಿಬ್ಬನ್ ಕಟ್ ಮಾಡಬೇಕಿತ್ತು. ಅದರಂತೆ ಅವರಿಗೆ ಕತ್ತರಿಯನ್ನ ನೀಡಲಾಗಿತ್ತು. ಆದರೆ ಆ ಕತ್ತರಿಯಿಂದ ರಿಬ್ಬನ್ ಕಟ್ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಅಲ್ಲಿದ್ದ ಸಭಿಕರೆಲ್ಲ ನಗಾಡಲು ಶುರು ಮಾಡಿದರು. ಇದರಿಂದ ವಿಚಲಿತರಾದ ಸಚಿವರು ಹಲ್ಲಿನಿಂದ ರಿಬ್ಬನ್ ಕಚ್ಚಿ ಕಟ್ ಮಾಡಿ ಉದ್ಘಾಟನೆ ಮಾಡಿದ್ದಾರೆ.

Source: newsfirstlive.com Source link