ಸಲ್ಮಾನ್ ಖಾನ್ ಹೃದಯ ಟಚ್ ಮಾಡಿದ ‘ವಿಕ್ರಾಂತ್ ರೋಣ’

ಸಲ್ಮಾನ್ ಖಾನ್ ಹೃದಯ ಟಚ್ ಮಾಡಿದ ‘ವಿಕ್ರಾಂತ್ ರೋಣ’

‘ವಿಕ್ರಾಂತ್​ ರೋಣ’ ಸ್ಯಾಂಡಲ್​ವುಡ್​ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಅಭಿನಯದ ಬಹು ನಿರೀಕ್ಷಿತ ಪ್ಯಾನ್​ ಇಂಡಿಯನ್ ಮೂವಿ. ಕಿಚ್ಚ ಸುದೀಪ್​ ಬರ್ತ್​ಡೇ ಪ್ರಯುಕ್ತ ಸೆಪ್ಟೆಂಬರ್​​​ 2ನೇ ತಾರೀಕು ‘ವಿಕ್ರಾಂತ್​ ರೋಣ’ ಚಿತ್ರತಂಡ ಚಿತ್ರದ ಟೀಸರ್ ರಿಲೀಸ್​ ಮಾಡಿತ್ತು. ಇನ್ನು ಚಿತ್ರದ ಟೀಸರ್​ ನೋಡಿದ ಪ್ರೇಕ್ಷಕರು ಫುಲ್​​ ಖುಷ್​​ ಆಗಿದ್ದರು. ಈಗ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಸುದೀಪ್​​​​ ಅಭಿನಯದ ‘ವಿಕ್ರಾಂತ್​ ರೋಣ’ ಟೀಸರನ್ನು ಹೊಗಳಿದ್ದಾರೆ.

ಟೀಸರ್​​​​ ಸಖತ್​​ ಆಗಿದೆ, ಒಳ್ಳೆಯಾದಗಲೀ ಸುದೀಪ್​​ ಎಂದು ಸಲ್ಮಾನ್​ ಖಾನ್​ ಟ್ವೀಟ್​ ಮಾಡಿ ವಿಶ್​​ ಮಾಡಿದ್ದಾರೆ. ಈ ಹಿಂದೆ ಸಲ್ಮಾನ್‌ ಮತ್ತು ಸುದೀಪ್‌ ಕಾಂಬಿನೇಷನ್‌ನ ‘ದಬಾಂಗ್‌ 3’ ರಿಲೀಸ್‌ ಆಗಿತ್ತು. ಶೂಟಿಂಗ್​​ ಬಳಿಕ ಸುದೀಪ್‌ ಅವರಿಗೆ ಸಲ್ಮಾನ್‌ ಹಲವು ಉಡುಗೊರೆಗಳನ್ನೂ ನೀಡಿದ್ದರು.

ತಮ್ಮ ಸ್ನೇಹದ ಬಗ್ಗೆಯೂ ಸುದೀರ್ಘವಾಗಿ ಹಂಚಿಕೊಂಡಿದ್ದರು. ಕಿಚ್ಚ ಸುದೀಪ್‌ ಅವರ ನಟನೆ ಬಗ್ಗೆ ಸಲ್ಮಾನ್‌ ಹಾಡಿಹೊಗಳಿದ್ದರು. ಈ ಸ್ನೇಹಕ್ಕೆ ಸಲ್ಮಾನ್​ ಖಾನ್​ ಬರ್ತಡೇ ಕೂಡ ಸಾಕ್ಷಿಯಾಗಿತ್ತು.

ಇದನ್ನೂ ಓದಿ: ಮಿಡ್ ನೈಟ್ ವಿಡಿಯೋ ಕಾಲ್​ ಮಾಡಿ ಸುದೀಪ್​ಗೆ ಸರ್ಪೈಸ್​ ಕೊಟ್ಟ ಸಲ್ಮಾನ್​ ಖಾನ್

ಸಲ್ಲು ಕಿಚ್ಚನಿಗೆ ಐಷಾರಾಮಿ BMW ಕಾರ್​ನ್ನು ಕೂಡ ಗಿಫ್ಟ್​ ಮಾಡಿದ್ರು. ಸಲ್ಲು ಭಾಯ್​ ರಷ್ಯಾದಲ್ಲಿ ಟೈಗರ್​3 ಚಿತ್ರದ ಶೂಟಿಂಗ್​ನಲ್ಲಿ ಫುಲ್​ ಬ್ಯುಸಿಯಾಗಿದ್ರು ಕೂಡ ತಮ್ಮ ನೆಚ್ಚಿನ ಸ್ನೇಹಿತ ಕಿಚ್ಚನಿಗೆ ಮಿಡ್​ನೈಟ್​ ವಿಡಿಯೋ ಕಾಲ್​ ಮಾಡಿ ಬರ್ತ್​ಡೇ ವಿಶ್​ ತಿಳಿಸಿದ್ದರು.

Source: newsfirstlive.com Source link