ಫಿಲ್ಮ್ಂ ಶೂಟಿಂಗ್​​ಗಾಗಿ ಟರ್ಕಿಗೆ ಹೋಗಿದ್ದ ಸಲ್ಮಾನ್​​​​​ ಖಾನ್​​​ ಮತ್ತು ಕತ್ರಿನಾ ಕೈಫ್ ಮಾಡಿದ್ದೇನು ಗೊತ್ತಾ?

ಫಿಲ್ಮ್ಂ ಶೂಟಿಂಗ್​​ಗಾಗಿ ಟರ್ಕಿಗೆ ಹೋಗಿದ್ದ ಸಲ್ಮಾನ್​​​​​ ಖಾನ್​​​ ಮತ್ತು ಕತ್ರಿನಾ ಕೈಫ್ ಮಾಡಿದ್ದೇನು ಗೊತ್ತಾ?

ಬಾಲಿವುಡ್​ ಬಾಕ್ಸ್​ ಆಫೀಸ್ ಸುಲ್ತಾನ ಸಲ್ಮಾನ್​ ಖಾನ್​ ಮತ್ತು ಬಿಟೌನ್​ ಬೆಡಗಿ ಕತ್ರಿನಾ ಕೈಫ್​ ಇತ್ತಿಚೆಗಷ್ಟೇ ರಷ್ಯಾದಲ್ಲಿ ಟೈಗರ್​-3 ಇತ್ರದ ಶೂಟಿಂಗ್​ ಮುಗಿಸಿದ್ದರು. ಈಗ ಚಿತ್ರದ ಉಳಿದ ಭಾಗದ ಚಿತ್ರೀಕರಣಕ್ಕಾಗಿ ಟರ್ಕಿಗೆ ದೇಶಕ್ಕೆ ಆಗಮಿಸಿದ್ದಾರೆ. ಸದ್ಯ ಇದೀಗ ಟರ್ಕಿಯಲ್ಲಿ ಟೈಗರ್​-3 ಚಿತ್ರದ ಶೂಟಿಂಗ್​ ನಡೆಯುತ್ತಿದು, ಈ ವೇಳೆ ಸಲ್ಲು ಮತ್ತು ಕತ್ರಿನಾ ಟರ್ಕಿ ದೇಶದ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಮೆಹ್ಮೆತ್ ನೂರಿ ಎರ್ಸೊಯ್ ಅವರನ್ನು ಭೇಟಿ ಮಾಡಿದ್ದಾರೆ.

blank

ಹೌದು, ಸಲ್ಮಾನ್​ ಖಾನ್​ ಮತ್ತು ಕತ್ರಿನಾ ಕೈಫ್​ ಚಿತ್ರದ ಶೂಟಿಂಗ್​ ಮಧ್ಯೆ ಸಚಿವ ಮೆಹ್ಮೆತ್ ನೂರಿ ಎರ್ಸೊಯ್ ಅವರನ್ನು ಭೇಟಿ ಮಾಡಿ ಊಟ ಕೂಡ ಮಾಡಿದ್ದಾರೆ. ಇನ್ನು ಈ ಫೋಟೋಗಳನ್ನು ಟರ್ಕಿ ಸಚಿವ ಮೆಹ್ಮೆತ್ ನೂರಿ ಎರ್ಸೊಯ್ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಸಲ್ಲು ಮತ್ತು ಕತ್ರಿನಾ ಟರ್ಕಿ ಸಚಿವರೊಂದಿಗೆ ಇವರ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ಇದನ್ನೂ ಓದಿ: ‘ನನ್ನ ಮೇಲೆ ಎಷ್ಟು ಕೋಪವೋ, ಅಷ್ಟೇ ಪ್ರೀತಿ’ ಸಿದ್ದಾರ್ಥ್​ ನೆನೆದು ಬಿಕ್ಕಿಬಿಕ್ಕಿ ಅತ್ತ ನಟಿ ಸಂಭಾವನ ಸೇಠ್​​​​

Source: newsfirstlive.com Source link