ಕೋಗಿಲೆ ಕಂಠದ ರಾನು ಮಂಡಲ್ ಜೀವನ ಆಧರಿಸಿ ಬರಲಿದೆ ಬಯೋಪಿಕ್

ಮುಂಬೈ: ಸೋಶಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ ಸೃಷ್ಟಿ ಮಾಡಿದ್ದ ಗಾಯಕಿ ರಾನು ಮಂಡಲ್ ಅವರ ಜೀವನಾಧರಿತ ಸಿನಿಮಾವೊಂದು ಬಾಲಿವುಡ್‍ನಲ್ಲಿ ಬರಲಿದೆ.

ರಾನು ಮಂಡಲ್ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ಏಕ್ ಪ್ಯಾರ್ ಕಾ ನಗ್ಮಾ ಹೈ.. ಹಾಡನ್ನು ರೈಲು ನಿಲ್ದಾಣದಲ್ಲಿ ಹಾಡಿದ್ದರು. ಇದನ್ನು ಕೆಲವರು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದರು. ಇದು ಕೆಲವೇ ದಿನಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಅನೇಕರು ರಾನು ಗಾಯನವನ್ನು ಕೊಂಡಾಡಿದ್ದರು. ರಾನು ರಾತ್ರಿ ಬೆಳಗಾಗುವುದರೊಳಗೆ ಸೋಶಿಯಲ್ ಮೀಡಿಯಾ ಸ್ಟಾರ್ ಆದರು. ಇದೀ ಅವರ ಜೀವ ಕಥೆಯಾಧರಿತ ಸಿನಿಮಾವೊಂದು ತೆರೆ ಮೇಲೆ ಬರಲಿದೆ ಎನ್ನುವ ಸುದ್ದಿ ಹರಿದಾಡುತ್ತೀದೆ. ಇದನ್ನೂ ಓದಿ: ಹೆದ್ದಾರಿ ಯೋಜನೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕಟೀಲ್ ಸೂಚನೆ

ಹಿಮೇಶ್ ಅವರು ತೇರಿ ಮೇರಿ ಕಹಾನಿ. ಹಾಡು ಹೇಳೋಕೆ ರಾನುಗೆ ಅವಕಾಶ ನೀಡಿದ್ದರು. ಇದಾದ ನಂತರದಲ್ಲಿ ಸಾಕಷ್ಟು ಶೋಗಳಿಗೆ ಅತಿಥಿ ಆಗುವ ಅವಕಾಶ ಅವರಿಗೆ ಸಿಕ್ಕಿತ್ತು. ಇದೆಲ್ಲವನ್ನೂ ಅವರು ಬೇಡ ಎನ್ನಲೇ ಇಲ್ಲ. ಈಗ ರಾನು ಜೀವನದ ಕಥೆ ಬಯೋಪಿಕ್ ಆಗುತ್ತಿದೆ. ರಿಶಿಕೇಶ್ ಮಂಡಲ್ ಅವರು ಈ ಬಯೋಪಿಕ್ ನಿರ್ದೇಶನ ಮಾಡುತ್ತಿದ್ದಾರೆ. ಇಶಿಕಾ ಡೇ ಅವರು ರಾನು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಿಸ್ ರಾನು ಮರಿಯಾ ಎಂದು ಸಿನಿಮಾಗೆ ಟೈಟಲ್ ಫಿಕ್ಸ್ ಮಾಡಲಾಗಿದೆ. ಇದನ್ನೂ ಓದಿ: ಡಿಸೆಂಬರ್‌ನಲ್ಲಿ ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆ ಡೌಟ್

blank

ರಾನು ಪಶ್ಚಿಮ ಬಂಗಾಳದವರು. ಹೀಗಾಗಿ ಬೆಂಗಾಲಿ ಭಾಷೆಯಲ್ಲಿ ಮಾತ್ರ ಈ ಸಿನಿಮಾ ಮಾಡುವ ಆಲೋಚನೆ ಚಿತ್ರತಂಡದ್ದಾಗಿತ್ತು. ಆದರೆ ರಾನುಗೆ ದೇಶಾದ್ಯಂತ ಪ್ರಚಾರ ಸಿಕ್ಕಿದೆ. ಈ ಕಾರಣಕ್ಕೆ ಹಿಂದಿ ಭಾಷೆಯಲ್ಲೂ ಸಿನಿಮಾ ಮಾಡುವ ಆಲೋಚನೆ ಚಿತ್ರತಂಡಕ್ಕೆ ಬಂದಿದೆ. ಹಿಮೇಶ್ ಕೂಡ ಈ ಸಿನಿಮಾಗಾಗಿ ಕೆಲಸ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಮುಂದಿನ ಮಾರ್ಚ್ ಅಥವಾ ಏಪ್ರಿಲ್ ವೇಳೆಗೆ ಸಿನಿಮಾ ರಿಲೀಸ್ ಆಗುವ ನಿರೀಕ್ಷೆ ಇದೆ. ಈ ಬಯೋಪಿಕ್ ವಿಚಾರ ಅನೇಕರಲ್ಲಿ ಅಚ್ಚರಿ ಮೂಡಿಸಿದೆ. ಈ ಸಿನಿಮಾ ಹೇಗಿರಬಹುದು ಎನ್ನುವ ಪ್ರಶ್ನೆ ಪ್ರೇಕ್ಷಕರನ್ನು ಕೊರೆಯೋಕೆ ಆರಂಭಿಸಿದೆ.

Source: publictv.in Source link