ಬಿಕಿನಿ ತೊಟ್ಟು, ಮಾಸ್ಕ್​ ಹಾಕಿ ಏರ್​​ಪೋರ್ಟ್​ಗೆ ಬಂದ ಮಹಿಳೆ; ಮುಂದೇನಾಯ್ತು..?

ಬಿಕಿನಿ ತೊಟ್ಟು, ಮಾಸ್ಕ್​ ಹಾಕಿ ಏರ್​​ಪೋರ್ಟ್​ಗೆ ಬಂದ ಮಹಿಳೆ; ಮುಂದೇನಾಯ್ತು..?

ಮಹಿಳೆಯೊಬ್ಬರು ಕೇವಲ ಬಿಕಿನಿ ತೊಟ್ಟು ಏರ್​​​ಪೋರ್ಟ್​ಗೆ ಬಂದಿರುವ ಘಟನೆ ಅಮೆರಿಕಾದಲ್ಲಿ ನಡೆದಿದೆ. ಅಮೆರಿಕಾದ ಮಿಯಾಮಿ ವಿಮಾನ ನಿಲ್ದಾಣಕ್ಕೆ ಬಿಕಿನಿ ತೊಟ್ಟ ಮಹಿಳೆ ಬಂದಿದ್ದು, ಎಲ್ಲರ ಗಮನ ಸೆಳೆದಿದ್ದಾರೆ.

ಗ್ರೀನ್​​ ಬಿಕಿನಿ ತೊಟ್ಟು ಏರ್​​ಪೋರ್ಟ್​ಗೆ ಬಂದಿದ್ದ ಮಹಿಳೆ ಮಾಸ್ಕ್​​​ ಹಾಕುವುದು ಮಾತ್ರ ಮರೆತಿರಲಿಲ್ಲ. ಕೈಯಲ್ಲಿ ಬ್ಯಾಗ್​​ ಹಿಡಿದು ಬಂದಿದ್ದ ಇವರು ಎಲ್ಲಿಗೆ ಹೊರಟಿದ್ದರು ಎಂಬ ಏರ್​​​ಪೋರ್ಟ್​ ಸಿಬ್ಬಂದಿ ಯಾವುದೇ ಮಾಹಿತಿ ನೀಡಿಲ್ಲ.

ಏರ್​​ಪೋರ್ಟ್​ನಲ್ಲಿ ನಡೆದುಕೊಂಡು ಬರುತ್ತಿರುವ ಬಿಕಿನಿ ತೊಟ್ಟ ಮಹಿಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​​ ಆಗಿತ್ತು. ಮೈಮೇಲೆ ಬಟ್ಟೆ ಹಾಕುವುದು ಮರೆತ ಮಹಿಳೆ ಮಾಸ್ಕ್​​ ಮಾತ್ರ ಮರೆತಿಲ್ಲ ಎಂದು ಕೆಲವರು ಕಾಮೆಂಟ್​​ ಮಾಡಿದ್ದಾರೆ. ಇನ್ನು ಹಲವರು ಏನ್​​ ಅರ್ಜೆಂಟ್​​ ಇತ್ತೋ ಎಂದು ಮಹಿಳೆಪರ ಬ್ಯಾಟಿಂಗ್​​ ಮಾಡಿದ್ದಾರೆ.

Source: newsfirstlive.com Source link