S.N​.ಸಂತಾನರಾಮನ್​​ಗೆ ಒಲಿದ ಉತ್ತಮ ಶಿಕ್ಷಕ ಪ್ರಶಸ್ತಿ

S.N​.ಸಂತಾನರಾಮನ್​​ಗೆ ಒಲಿದ ಉತ್ತಮ ಶಿಕ್ಷಕ ಪ್ರಶಸ್ತಿ

ಮಂಡ್ಯ: ನಾಳೆ ಶಿಕ್ಷಕರ ದಿನಾಚರಣೆ. ಮಂಡ್ಯ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಕೊಡಲ್ಪಡುವ ಜಿಲ್ಲಾ ಮಟ್ಟ ಉತ್ತಮ ಶಿಕ್ಷರ ಪ್ರಶಸ್ತಿ ಪ್ರಕಟವಾಗಿದೆ.

blank

ವಿಶೇಷ ಅಂದ್ರೆ ಶತಮಾನದ ಶಾಲೆಯ ಉಳಿವಿಗೆ ಶ್ರಮಿಸುತ್ತಿರುವ ಎಸ್​.ಎನ್​.ಸಂತಾನರಾಮನ್ ಅವರು ಈ ಬಾರಿಯ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

blank

ಹಿರಿಯ ಮತ್ತು ಪ್ರಾಥಮಿಕ ಶಾಲಾ ವಿಭಾಗದಲ್ಲಿ ಉತ್ತಮ ಶಿಕ್ಷಕರ ಪ್ರಶಸ್ತಿ ಸಂತಾನರಾಮನ್​ಗೆ ಒಲಿದು ಬಂದಿದೆ. ಈ ಹಿನ್ನೆಲೆಯಲ್ಲಿ ಅವರ ಸ್ನೇಹಿತರು ಹಾಗೂ ಗಣ್ಯರು ಶಿಕ್ಷಕ ಸಂತಾನರಾಮನ್​ಗೆ ಶುಭಾಶಯಗಳನ್ನ ತಿಳಿಸುತ್ತಿದ್ದಾರೆ.

blank

ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಕಿರಿಯ ಪ್ರಥಮಿಕ ಶಾಲಾ ವಿಭಾಗದಲ್ಲಿ ಒಟ್ಟು 9 ಶಿಕ್ಷಕರಿಗೆ, ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ 9 ಶಿಕ್ಷಕರಿಗೆ ಹಾಗೂ ಪ್ರೌಢ ಶಾಲಾ ವಿಭಾಗದಲ್ಲಿ 8 ಶಿಕ್ಷಕರಿಗೆ ಈ ಬಾರಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

blank

blank

Source: newsfirstlive.com Source link