ಕುಡಿದ ಮತ್ತಿನಲ್ಲಿ ಗಲಾಟೆ; ಚಾಕುವಿನಿಂದ ಇರಿದು ವ್ಯಕ್ತಿ ಕೊಲೆ

ಕುಡಿದ ಮತ್ತಿನಲ್ಲಿ ಗಲಾಟೆ; ಚಾಕುವಿನಿಂದ ಇರಿದು ವ್ಯಕ್ತಿ ಕೊಲೆ

ಬೆಂಗಳೂರು: ಕುಡಿದ ಮತ್ತಿನಲ್ಲಿ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಲೋಹಿತ್​​ ಅಲಿಯಾಸ್​​ ಮೀನು ಎಂಬ ರೌಡಿ ಆನಂದ್​​ ಎಂಬಾತನನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ.
ಶ್ರೀರಾಮ್ ಪುರದ ಸನ್ ರೈಸ್ ಸರ್ಕಲ್ ಬಳಿ ಘಟನೆ ನಡೆದಿದೆ. ಲೋಹಿತ್​​ ಮತ್ತು ಆನಂದ್​ ನಡುವೆ ಎಣ್ಣೆ ಮತ್ತಿನಲ್ಲಿ ಗಲಾಟೆ ಶುರುವಾಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಲೋಹಿತ್​​ ಆನಂದ್​​ಗೆ ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ.ಇನ್ನು, ಶ್ರೀರಾಮಪುರ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಹಂತಕ ಲೋಹಿತ್​​ಗಾಗಿ ಶೋಧಕಾರ್ಯ ಮುಂದುವರಿಸಿದ್ದಾರೆ.ಇದನ್ನೂ ಓದಿ: ಬಿಕಿನಿ ತೊಟ್ಟು, ಮಾಸ್ಕ್​ ಹಾಕಿ ಏರ್​​ಪೋರ್ಟ್​ಗೆ ಬಂದ ಮಹಿಳೆ; ಮುಂದೇನಾಯ್ತು..?

Source: newsfirstlive.com Source link