‘IAS​​ ಅಧಿಕಾರಿ ಮನೀಷ್ ಮೌದ್ಗಿಲ್ ಮತ್ತು ಸಿಂಧೂರಿ ಬಹಳ ಹತ್ತಿರ’- ಸಾ.ರಾ ಮಹೇಶ್​​ ವಾಗ್ದಾಳಿ

‘IAS​​ ಅಧಿಕಾರಿ ಮನೀಷ್ ಮೌದ್ಗಿಲ್ ಮತ್ತು ಸಿಂಧೂರಿ ಬಹಳ ಹತ್ತಿರ’- ಸಾ.ರಾ ಮಹೇಶ್​​ ವಾಗ್ದಾಳಿ

ಮೈಸೂರು: ಜಿಲ್ಲೆಯ ಭೂ-ಅಕ್ರಮ ಹಗರಣ ಆರೋಪಕ್ಕೆ ಮತ್ತೆ ಮರುಜೀವ ಬಂದಂತಾಗಿದ್ದು, ಸಾ.ರಾ.ಮಹೇಶ್ ವಿರುದ್ಧ IAS ಅಧಿಕಾರಿ ರೋಹಿಣಿ ಸಿಂಧೂರಿ ಮಾಡಿದ್ದ ಆರೋಪದ ವಿಚಾರವಾಗಿ ಪುನರ್ ಸರ್ವೇ ಮಾಡಲು ಭೂ-ದಾಖಲೆಗಳ ಇಲಾಖೆ ಆಯುಕ್ತ ಮುನೀಷ್ ಮೌದ್ಗಿಲ್ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ರೋಹಿಣಿ ಸಿಂಧೂರಿ ವಿರುದ್ಧ CMಗೆ ದೂರು ನೀಡಿದ ಸಾರಾ ಮಹೇಶ್

ಈ ವಿಚಾರಕ್ಕೆ ಕಿಡಿಕಾರಿರುವ ಸಾ.ರಾ ಮಹೇಶ್ ಅವರ ಕಮಿಟಿಯನ್ನ ನಾನು ಸ್ವಾಗತಿಸುತ್ತೇನೆ, ಎಷ್ಟು ಕಮಿಟಿಯನ್ನ ರಚನೆ ಮಾಡಿ ರೈತರಿಗೆ ನ್ಯಾಯ ನೀಡಿದ್ರಿ? ರಾತ್ರೋರಾತ್ರಿ ತಳ್ಳು ಬಿಡೋಕೆ ಆಯ್ತದಾ? ಮುನಿಷ್ ಮೌದ್ಗಿಲ್ ಅವ್ರೇ ನೀವು.. ಐಎಎಸ್ ಓದಿದ್ದೀರಲ್ಲ.. ನೀವು ಆದೇಶ ಮಾಡುವ ಮೊದಲು ಹೇಳಿದ್ದಿರಿ.. ಅದೇನಂದರೆ.. ಸರ್ಕಾರಿ ಜಾಗಗಳನ್ನ ಸಂರಕ್ಷಣೆ ಮಾಡಬೇಕು ಅಂತಾ. ಸರ್ಕಾರಿ ಜಾಗ ಎಲ್ಲಿವೆ ಅಂತಾ ಮೊದಲು ಖಚಿತಪಡಿಸಿಕೊಳ್ಳಿ ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ: 14 ಲಕ್ಷ ಬ್ಯಾಗ್​​ ಖರೀದಿಯಲ್ಲಿ 6 ಕೋಟಿ ಭ್ರಷ್ಟಾಚಾರ’- ರೋಹಿಣಿ ಸಿಂಧೂರಿ ವಿರುದ್ಧ ಸಾ.ರಾ ಮಹೇಶ್​ ಗಂಭೀರ ಆರೋಪ

ಟ್ರಾಲಿ ತಗೊಂಡು ಎಳೆಯೋಕೆ ಆಯ್ತದಾ..?
ನಂತರ ರೋಹಿಣಿ ಸಿಂದೂರಿ ಹೆಸರನ್ನ ಹೇಳದೇ ಟಾಂಗ್ ಕೊಟ್ಟ ಸಾರಾ ಮಹೇಶ್​.. ಮುನಿಷ್ ಮೌದ್ಗಿಲ್ ತ್ತು ಇವ್ರು ಭಾರೀ ಹತ್ತಿರ.. ಅವ್ರು-ಇವ್ರು ಬಾರಿ ಹತ್ತಿರ ಅಂತಾ ಕೈ-ಸನ್ನೆ ಮಾಡಿ ತೊರಿಸಿದರು. ತನಿಖೆ ಆದೇಶಕ್ಕೂ ಮುನ್ನ ಡಿಸಿಯಿಂದ ಮಾಹಿತಿ ಪಡೆಯಬೇಕಿತ್ತು. ನಾನು ಯಾವುದೇ ಭೂ-ಒತ್ತುವರಿ ಮಾಡಿಲ್ಲ. ಈ ಹಿಂದೆ ತನಿಖೆ ಮಾಡಿ ಒತ್ತುವರಿ ಆಗಿಲ್ಲ ಅಂತ ಅಧಿಕಾರಿಗಳು ಹೇಳಿದ್ದಾರೆ. ನಾನೀಗ ಭೂಮಿನ ಟ್ರಾಲಿ  ತೆಗೆದುಕೊಂಡು ಎಳೆಯೋಕೆ ಆಯ್ತದಾ?

blank

ನನ್ನದರಲ್ಲಿ ಯಾವುದೆ ಸರ್ಕಾರಿ ಗೋಮಾಳ ಇಲ್ಲ ಅಂತಾ ಹೇಳಿದ್ದಾರಲ್ಲ. ಅಕ್ಕ-ಪಕ್ಕದ ಒತ್ತುವರಿಯಾದ್ರೆ ನಾವು ಅರ್ಜಿಕೊಡಬೇಕು ಅಂತಾ ತನಿಖಾ ಆದೇಶದ ವಿರುದ್ಧ ಶಾಸಕ ಸಾ.ರಾ.ಮಹೇಶ್ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಭೂ ಒತ್ತುವರಿ ಕೇಸ್​: ಪುನರ್​ ಸರ್ವೇ ನಡೆಸುವಂತೆ ಆದೇಶ.. ಸಾರಾ ಹಣಿಯಲು ಸಜ್ಜಾದ್ರಾ ಐಎಎಸ್ ಅಧಿಕಾರಿಗಳು?

Source: newsfirstlive.com Source link