ನಟಿ ರಮ್ಯಾ ಮನೆ ಕಾಂಪೌಡ್​​ನಲ್ಲಿ ‘ಹೆಬ್ಬಾವು’…

ನಟಿ ರಮ್ಯಾ ಮನೆ ಕಾಂಪೌಡ್​​ನಲ್ಲಿ ‘ಹೆಬ್ಬಾವು’…

ದೂರದ ಮುಂಬೈ ನಗರಿಯಲ್ಲಿ ಯಾರಿಗೂ ಗೊತ್ತಾಗದೆ ಮನೆ ಮಾಡ್ಕೊಂಡು ಜೀವ್ನು ಮಾಡ್ತೌವ್ರೇ ಮಂಡ್ಯದ ಮಾಜಿ ಸಂಸದೆ ಮೋಹಕ ತಾರೆ ರಮ್ಯಾ.. ರಮ್ಯಾ ಅವರನ್ನ ಹುಡ್ಕೊಂಡು ಅಭಿಮಾನಿಗಳು ಮುಂಬೈ ನಗರಿಯಲ್ಲ ಸುತ್ತಿದ್ರು ಅವರ್ ಮನೆ ಅಡ್ರೇಸ್ ಗೊತ್ತಾಗಿಲ್ಲ.. ಆದ್ರೆ ಆ ವಿಶೇಷ ಅಭಿಮಾನಿಗೆ ಗೊತ್ತಾಗಿದೆ.. ರಮ್ಯಾ ಅವರ ದರುಶನವು ಸಿಕ್ಕಿದೆ.

ಸಿನಿಮಾವೂ ಬೇಡ, ರಾಜಕೀಯ ಸಾಮಾಜಿಕ ಬದುಕು ಬವಣೆಯೂ ಬೇಡ.. ಪ್ರೀತಿಯೂ ಬೇಡ ಸಂಸಾರ ಸಾಗರವಂತು ಬೇಡವೇ ಬೇಡ ಎಂದು ಡಿಸೈಡ್ ಆಗಿ ದೂರದ ಮುಂಬೈನಗರಿಯ ಸಮುದ್ರ ತೀರ ದಡದಲ್ಲಿ ಮನೆ ಮಾಡ್ಕೊಂಡು, ಯಾರಿಗೂ ಕಾಣದೆ, ತನಗೆ ಬೇಕಾದಗ ಎಲ್ಲರನ್ನೂ ದೂರದಿಂದಲೇ ನೋಡುತ್ತಾ ಕಾಲ ಕಳೆಯುತ್ತಿರೋರು ಮೋಹಕ ತಾರೆ ರಮ್ಯಾ..

ಇದನ್ನೂ ಓದಿ: ಅಕ್ಕೋ..ಮನೆ ಮಂದಿಯೆಲ್ಲಾ ನೋಡ್ತಾವ್ರೆ.. ಅದೇನ್ ತಿಂತೌನೆ ಬಾವ?

ಮೇಡಂ ನೀವು ಮತ್ತೆ ಸಿನಿಮಾ ರಂಗಕ್ಕೆ ಬರಬೇಕು ಎಂದು ಅಭಿಮಾನಿಗಳ ಕೆಲ ವರ್ಷದಿಂದ ಕರೆದು ಕನವರಿಸಿ ಬೇಡಿದ್ರು; ಒಂದೇ ಮಾತಿಗೆ ನಾನು ಬರೋದಲ್ಲ, ನಾನು ಮತ್ತೆ ಬಣ್ಣ ಹಚ್ಚೋದು ಇಲ್ಲ ಎಂದು ಬಿಟ್ರು ರಮ್ಯಾ.. ಆದ್ರೂ ರಮ್ಯಾ ಅವರ ಕಡೆಯಿಂದ ಸುದ್ದಿ ಸಮಾಚಾರಕೇನು ಕೊರತೆ ಇಲ್ಲ.. ಆಗಾಗ ಸೋಶಿಯಲ್ ಸಮುದ್ರ ದಡದಕ್ಕು ಹಾರೋ ಮೀನಿನಂತೆ ಪ್ರತ್ಯಕ್ಷವಾಗೋ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಮನೆಗೆ ಅಪರಿಚಿತ ಅತಿಥಿ ಒಬ್ರು ಬಂದಿದ್ದಾರೆ.. ಆ ಅತಿಥಿಯನ್ನ ಕಂಡು ರಮ್ಯಾ ಫುಲ್ ಗಾಬ್ರಿ ಪ್ಲಸ್ ಗಲಿಬಿಲಿಯಾಗಿದ್ದಾರೆ.. ಅಷ್ಟಕ್ಕೂ ಯಾರು ಆ ಹೊಸ ಅತಿಥಿ ಅನ್ನೋ ಪ್ರಶ್ನೆ ಉತ್ತರ ನಿಮ್ಮಮುಂದೆ.

ನಾಗರಹಾವು ಸಿನಿಮಾದಲ್ಲಿ ನಾಗದೇವತೆಯಾಗಿ ಮಿಂಚಿದ್ರು ರಮ್ಯಾ.. ಈಗ ರಮ್ಯಾ ಅವರ ಮನೆ ಕಪೌಂಡ್​​ಗೆ ಹಾವೊಂದು ಬಂದಿದೆ.. ಈ ಹಾವು ಯಾವುದು ನೀವು ಬಲ್ಲಿರಾ ಎಂದು ಪ್ರಶ್ನಿಸಿ ಎರಡು ಆಪ್​​​​​​​ಶ್ಯನ್ ಕೊಟ್ಟಿದ್ದಾರೆ.. ಇದು ಗರಗರ ಮಂಡಳ ಹಾವು ಅಥವಾ ಹೆಬ್ಬಾವ ಅಂತ ಅಭಿಮಾನಿಗಳಿಗೆ ಕೇಳಿದ್ದಾರೆ ರಮ್ಮು..

ಇದನ್ನೂ ಓದಿ: ಸಲ್ಮಾನ್ ಖಾನ್ ಹೃದಯ ಟಚ್ ಮಾಡಿದ ‘ವಿಕ್ರಾಂತ್ ರೋಣ’

ಆ ಹಾವು ನಾಗರಹಾವು ಸಿನಿಮಾದ ಹೀರೋಯಿನ್ ಮನೆ ಮುಂದೆ ಬಂದು ಏನ್ ಮಾಡ್ತು ಎಲ್ಲಿಗೆ ಹೋಯ್ತು ಅನ್ನೋ ಮಾಹಿತಿ ನಮಗಿಲ್ಲ.. ಆದ್ರೆ ರಮ್ಯಾ ಏನೇ ಮಾಡಿದ್ರು ಸೋಶಿಯಲ್ ಮೀಡಿಯಾದಲ್ಲಿ ಹಲ್​ಚೆಲ್ ಆಗುತ್ತೆ.. ಒಟ್ಟಿನಲ್ಲಿ ಆ ಹಾವನ್ನ ಕಂಡು ರಮ್ಯಾ ಥ್ರಿಲ್ ಆಗಿದ್ದಾರೆ..

Source: newsfirstlive.com Source link