ರನ್‍ನಂತೆ ಏರುತ್ತಿದೆ ವಿರಾಟ್ ಕೊಹ್ಲಿ ಫಾಲೋವರ್ಸ್ ಸಂಖ್ಯೆ

ಮುಂಬೈ: ಭಾರತ ಕ್ರಿಕೆಟ್ ತಂಡದ ರನ್ ಮಿಷನ್ ವಿರಾಟ್ ಕೊಹ್ಲಿ ಇತ್ತೀಚೆಗಷ್ಟೆ ವೇಗವಾಗಿ 23 ಸಾವಿರ ರನ್‍ಗಳ ಸಾಧನೆ ಮಾಡಿದ್ದಾರೆ. ಇದೀಗ ಕೊಹ್ಲಿ ಅವರ ರನ್ ಸಾಧನೆಯಂತೆ ಅವರ ಇನ್‍ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆ ಕೂಡ ಏರಿಕೆ ಕಂಡಿದೆ.

ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ತನ್ನ ಅದ್ಭುತ ಬ್ಯಾಟಿಂಗ್ ಮೂಲಕ ರನ್ ಶಿಖರವೇರುತ್ತಿದ್ದಾರೆ. ಇದರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹಿಂಬಾಲಕರ ಸಂಖ್ಯೆಯು ಏರಿಕೆ ಕಾಣುತ್ತಿದ್ದು, ಇದೀಗ ವಿರಾಟ್ ಇನ್‍ಸ್ಟಾಗ್ರಾಂನಲ್ಲಿ 150 ದಶಲಕ್ಷ ಫಾಲೋವರ್ಸ್‍ಗಳನ್ನು ಹೊಂದಿದ್ದು, ಈ ಮೂಲಕ ಭಾರತ ಮತ್ತು ಏಷ್ಯಾದಲ್ಲಿ 150 ದಶಲಕ್ಷ ಹಿಂಬಾಲಕರನ್ನು ಹೊಂದಿದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಸಿಕ್ಸರ್‌ನೊಂದಿಗೆ ಅರ್ಧಶತಕ – ಭಾರತದ ಪರ ವಿಶೇಷ ಸಾಧನೆಗೈದ ಶಾರ್ದೂಲ್

ವಿರಾಟ್ ಅತೀ ಹೆಚ್ಚು ಹಿಂಬಾಲಕರನ್ನು ಹೊಂದಿದ ಕ್ರೀಡಾಪಟುಗಳಲ್ಲಿ 4ನೇ ಸ್ಥಾನ ಸಂಪಾದಿಸಿದ್ದು, ಫುಟ್‍ಬಾಲ್ ತಾರೆಗಳಾದ ಕ್ರಿಶ್ಚಿಯಾನೊ ರೊನಾಲ್ಡ್ 337 ದಶಲಕ್ಷ, ಲಿಯೋನೆಲ್ ಮೆಸ್ಸಿ 260 ದಶಲಕ್ಷ, ನೇಮರ್ 160 ದಶಲಕ್ಷ ಫಾಲೋವರ್ಸ್ ಹೊಂದಿದ್ದಾರೆ. ಇದನ್ನೂ ಓದಿ : ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟ ಸ್ಮಾರ್ಟ್ ಬಾಲ್

Source: publictv.in Source link