ಅಡಿಕೆಗೆ ಬಂಪರ್ ಬೆಲೆ- ತೋಟದಲ್ಲಿಯೇ ಕಳ್ಳತನವಾಗುತ್ತಿದೆ ಅಡಿಕೆ

– ಬೆಲೆ ಏರಿಕೆ ನಡುವೆ ಅಡಿಕೆ ಕಾಯುವುದೇ ಬೆಳೆಗಾರರಿಗೆ ಸವಾಲು

ಶಿವಮೊಗ್ಗ: ಒಂದೆಡೆ ಅಡಿಕೆ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೆ ಏರಿಕೆ ಕಾಣುತ್ತಿದ್ದು, ಬೆಳಗಾರರಲ್ಲಿ ಮಂದಹಾಸ ಮೂಡಿಸಿದೆ. ಮತ್ತೊಂದೆಡೆ ತೋಟದಲ್ಲಿ ಮರಗಳಲ್ಲೇ ಅಡಕೆ ಕಳ್ಳತನ ನಡೆಯುತ್ತಿರುವುದು ಬೆಳೆಗಾರರಲ್ಲಿ ಆತಂಕ ಮೂಢಿಸಿದೆ.

ಜಿಲ್ಲೆಯ ಶಿಕಾರಿಪುರ ತಾಲೂಕಿನ ಕೋಡಿಕೊಪ್ಪ ಗ್ರಾಮದ ಜಯಪ್ಪ ಎಂಬುವರ ತೋಟದಲ್ಲಿ ರಾತ್ರೋರಾತ್ರಿ ಕಳ್ಳರು ಅಡಕೆ ಮರದಲ್ಲಿದ್ದ ಅಡಕೆ ಕೊನೆಗಳನ್ನು ಕದ್ದೊಯ್ದಿರುವ ಪ್ರಕರಣ ನಡೆದಿದೆ. ಇದನ್ನೂ ಓದಿ: ಕೊಲೆ ಮಾಡಿ ತಲೆಯೊಂದಿಗೆ ನಾಪತ್ತೆಯಾಗಿದ್ದ ಆರೋಪಿ ಅಂದರ್

ಸುಮಾರು 90 ಸಾವಿರ ಮೌಲ್ಯದ 15 ಕ್ವಿಂಟಾಲ್ ಹಸಿ ಅಡಕೆ ಕಳ್ಳತನವಾಗಿದ್ದು, ಈ ಪ್ರಕರಣ ಇತರೆ ರೈತರು ಹಾಗೂ ಬೆಳೆಗಾರರಲ್ಲಿ ಆತಂಕ ಉಂಟು ಮಾಡಿದೆ. ಅಡಕೆ ಕೊಯ್ಲು ಆರಂಭದಲ್ಲಿಯೇ ಈ ರೀತಿಯಾದರೆ ಇನ್ನು 2-3 ತಿಂಗಳುಗಳ ಕಾಲ ತೋಟದಲ್ಲಿ ಅಡಕೆ ಉಳಿಸಿಕೊಳ್ಳುವುದು ಹೇಗೆ ಎಂಬ ಆತಂಕ ಎದುರಾಗಿದೆ. ಅಡಕೆಗೆ ಹೆಚ್ಚಿನ ದರ ಇರುವುದೇ ಕಳ್ಳತನಕ್ಕೆ ಕಾರಣ ಎಂದು ಶಂಕಿಸಲಾಗಿದೆ. ಘಟನೆ ಕುರಿತು ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Source: publictv.in Source link