ತಾಲಿಬಾನ್​​ ವಿರುದ್ಧ ತೊಡೆ ತಟ್ಟಿದ ಪಂಜ್​ಶೀರ್​​ ಸಿಂಹಗಳು; 450 ಉಗ್ರರು ಉಡೀಸ್

ತಾಲಿಬಾನ್​​ ವಿರುದ್ಧ ತೊಡೆ ತಟ್ಟಿದ ಪಂಜ್​ಶೀರ್​​ ಸಿಂಹಗಳು; 450 ಉಗ್ರರು ಉಡೀಸ್

ತಾಲಿಬಾನ್​​ಗಳ ವಿರುದ್ಧ ಪಂಜ್​ಶೀರ್​ ಫೈಟ್​​ ಜೋರಾಗಿದೆ. ತಮ್ಮ ತಂಟೆಗೆ ಬಂದ ಉಗ್ರರಿಗೆ ಪಂಜ್​​ ಶೀರ್​​ ಜನರು ತಕ್ಕ ಶಾಸ್ತಿ ಮಾಡಿದ್ದಾರೆ. ಒಂದು ಕಡೆ ತಾಲಿಬಾನ್​ಗಳು ಪಂಜ್​ಶೀರನ್ನು ಗೆದ್ದಿದ್ದೇವೆಂದು ಬೀಗುತ್ತಿದ್ರೆ, ತಾಲಿಬಾನ್​​ಗಳಿಗೆ ಶರಣಾಗುವ ಮಾತೆ ಇಲ್ಲ ಎಂದು ತಾಲಿಬಾನ್​ ವಿರೋಧಿ ಪಡೆ ಹೇಳಿದೆ. ಅಷ್ಟಕ್ಕೂ ಏನಿದು ಪಂಜ್​ಶೀರ್​ ಫೈಟ್​​ ಇನ್​​ಸೈಡ್​ ಕಹಾನಿ ಅನ್ನೋದನ್ನ ಹೇಳ್ತೀವಿ.

ತಾಲಿಬಾನ್​ಗಳ ಬಂದೂಕಿಗೂ ಬಗ್ಗುತ್ತಿಲ್ಲ, ಉಗ್ರರ ಗನ್​ಗಳಿಗೂ ಜಗ್ಗುತ್ತಿಲ್ಲ. ಎಷ್ಟೇ ಗುಂಡು ಹಾರಿಸಿದ್ರೂ ಗಟ್ಟಿ ಗುಂಡಿಗೆ ಅಂಜುತ್ತಿಲ್ಲ. ಗುಂಡಿನ ಮಳೆಗೆರೆದ್ರೂ ಅಷ್ಟೇ, ರಾಕೆಟ್​ ದಾಳಿ ನಡೆಸಿದ್ರೂ ಅಷ್ಟೇ.ಎಷ್ಟೇ ಹೆಣಗಳು ಉರುಳಿಸಿದ್ರೂ ಪಂಜ್​ಶೀರ್​ ಹೋರಾಟಗಾರರು ಮಾತ್ರ ತಾಲಿಬಾನ್​​ಗಳಿಗೆ ತಲೆಬಾಗ್ತಿಲ್ಲ. ತಾಲಿಬಾನ್​ ಸಮರದಿಂದ ಒಂದು ಹೆಜ್ಜೆ ಕೂಡ ಹಿಂದೆ ಇಡ್ತಿಲ್ಲ..

ಅಫ್ಘಾನ್​ ಅಧ್ಯಕ್ಷನೇ ತಾಲಿಬಾನ್​ ಬಂದೂಕಿಗೆ ಹೆದರಿ ಓಡಿ ಹೋದಾಗ, ದೊಡ್ಡಣ್ಣನ ಸೇನೆ ಡೆಡ್​ ಲೈನ್​​ಗೆ ಒಂದು ದಿನ ಮೊದಲೇ ಜಾಗ ಖಾಲಿ ಮಾಡಿದಾಗಲೂ,ಈ ಪಂಜ್​ಶೀರ್ ಜನರ ಹೋರಾಟದ ಕಿಚ್ಚು ಕಿಂಚಿತ್ತು ಕಡ್ಮೆಯಾಗಿಲ್ಲ. ತಾಲಿಬಾನ್​​ಗಳ ತೆಕ್ಕೆಗೆ ಜಾರದ ಏಕೈಕ ಪ್ರಾಂತ್ಯ ಅಂದ್ರೆ ಅದು ಪಂಜ್ ಶೀರ್,ಒನ್​ ಆ್ಯಂಡ್​ ಓನ್ಲಿ ಪಂಜ್​ಶೀರ್.

ಮುಗಿಲೆತ್ತರದ ಬೆಟ್ಟಗಳು, ದಟ್ಟ ಕಾನನಗಳೂ, ಹಾಲಿನ ನೊರೆಯಂತೆ ಹರಿಯುವ ನದಿಯ ಸೊಬಗನ್ನ ಮೈತುಂಬಿಕೊಂಡಿರುವ ಇದೇ ಪಂಜ್​ಶೀರ್​​ ಕಣ್ಣಿವೆಯತ್ತಾ ಇಡೀ ಜಗತ್ತಿನ ಚಿತ್ತ ನೆಟ್ಟಿದೆ. ಅಫ್ಘಾನ್​ ರಾಜಧಾನಿ ಕಾಬೂಲ್​ನಿಂದ ಕೇವಲ 80 ರಿಂದ 100 ಮೀಟರ್ ದೂರದಲ್ಲಿರುವ ಪಂಚ್​ಶೀರನ್ನ ವಶಪಡಿಸಿಕೊಳ್ಳಲು ಇನ್ನೂ ಕೂಡ ತಾಲಿಬಾನ್​​ಗ​​ಳಿಗೆ ಸಾಧ್ಯವಾಗಿಲ್ಲ.

blank

ತಾಲಿಬಾನ್ ವಿರುದ್ಧ ತೊಡೆ ತಟ್ಟಿದ ಪಂಜ್​ಶೀರ್​ ಸಿಂಹಗಳು
ಬಂದೂಕಿಗೆ ಎದೆ ಕೊಟ್ಟು ಹೋರಾಡಿದ ಪಂಜ್​​​​ಶೀರ್​ ಜನರು

ಈ ದೃಶ್ಯವನ್ನೊಮ್ಮೆ ನೋಡಿ..ಬಂದೂಕು ಸಿಡಿಯುತ್ತಿದೆ, ಗನ್​ಗಳು ಘರ್ಜಿಸುತ್ತಿದೆ.. ಗುಂಡಿನ ಸದ್ದು ರಾತ್ರಿಯ ಮೌನವನ್ನ ಛೇದಿಸಿದೆ. ಏಟಿಗೆ ಎದಿರೇಟು, ಸೇಡಿಗೆ ಸೇಡು, ಗುಂಡಿಗೆ ಪ್ರತಿ ಗುಂಡು. ಎಸ್​​.. ಇದು ನಿನ್ನೆ ರಾತ್ರಿ ತಾಲಿಬಾನ್​ಗಳು ಹಾಗೂ ಪಂಜ್​ಶೀರ್​ ಹೋರಾಟಗಾರರ ನಡುವೆ ನಡೆದ ಗುಂಡಿನ ಕಾಳಗದ ದೃಶ್ಯ.

ಈ ನಿಜಕ್ಕೂ ನಿನ್ನೆ ರಾತ್ರಿ ನಡೆದ ಈ ಗುಂಡಿನ ಯುದ್ಧದ ದೃಶ್ಯಗಳು ಎದೆ ಜಲ್​ ಅನ್ನಿಸುವಂತ್ತಿದೆ. ತಾಲಿಬಾನ್​​ಗಳು ಕಾಲ್ಕೆರೆದು ಜಗಳಕ್ಕೆ ಬರ್ತಿರುವುದರಿಂದ ಪಂಜ್​ಶೀರ್​ ಜನರ ಸಹನೆಯ ಕಟ್ಟೆ ಹೊಡೆದು ಹೋಗಿದೆ. ರಕ್ತಗತವಾಗಿ ಬಂದಿದ್ದ ತಾಲಿಬಾನ್​​ಗಳ ವಿರುದ್ರ್ಧ ಹೋರಾಟದ ಕಿಚ್ಚು ಮುಗಿಲು ಮುಟ್ಟಿದೆ. ಪಂಜ್​ಶೀರ್​ ನೆಲದಲ್ಲಿ ತಾಲಿಬಾನ್​​ಗಳ ವಿರುದ್ಧ ದಂಗೆಯ ರಣಕಹಳೆ ಮತ್ತೊಮ್ಮೆ ಮೊಳಗಿದ್ದು,

ತಾಲಿಬಾನ್​ಗಳ ರಕ್ಕಸರಿಗೆ ನಿನ್ನೆ ನರಕ ತೋರಿಸಿದ್ದಾರೆ.
ಪಂಜ್​ಶೀರ್​​ನಲ್ಲಿ 450 ತಾಲಿಬಾನ್​ಗಳು ಮಟಾಷ್?
ಪಂಜ್​​​ಶೀರ್​​ ಪ್ರಾಂತ್ಯದಲ್ಲಿ ಬಿತ್ತು ತಾಲಿಬಾನ್​ಗಳ ಹೆಣ
ಭೀಕರ ಗುಂಡಿನ ಕಾಳಗಕ್ಕೆ ಬೆಚ್ಚಿ ಬಿದ್ದ ಪಂಜ್​ಶೀರ್​ ಜನ

ಇಡೀ ಅಫ್ಘಾನನ್ನೆ ತನ್ನ ಹಿಡಿತಕ್ಕೆ ತೆಗೆದುಕೊಂಡಿದ್ದೇವೆಂದು ಬೀಗುತ್ತಿರುವ ತಾಲಿಬಾನ್​ಗಳಿಗೆ ಪಂಚ್​ಶೀರ್​ ಕಣಿವೆಯ ಕಡೆ ತಲೆ ಹಾಕಿ ಮಲಗೋಕು ಹಾಕ್ತಿಲ್ಲ. ತಮ್ಮ ತೆಕ್ಕೆಗೆ ಬೀಳದ ಏಕೈಕ ಪ್ರಾಂತ್ಯ ಪಂಜ್​ಶೀರನ್ನ ವಶಪಡಿಸಿಕೊಳ್ಳಲು ತಾಲಿಬಾನ್​ಗಳ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ರೆ, ಪಂಜ್​​ಶೀರ್​ ಜನರು ಪೆಟ್ಟು ತಿಂದ ಸಿಂಹದಂತೆ ತಮ್ಮ ನೆಲಕ್ಕಾಗಿ ಹೋರಾಡುತ್ತಿದ್ದಾರೆ. ಪಂಜ್​ಶೀರನ್ನ ವಶಪಡಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ತಾಲಿಬಾನ್​ಗಳು ನಿನ್ನೆ ಪಂಜ್​ಶೀರ್ ಜನರ ಮೇಲೆ ಗುಂಡಿನ ಮಳೆಗೆರೆದಿದ್ದಾರೆ..

ಪಂಜ್‌ಶೀರ್‌ ಕಣಿವೆಯ ತಂಟೆಗೆ ಹೋದ ತಾಲಿಬಾನ್​ಗಳಿಗೆ ನಿನ್ನೆ ತಕ್ಕ ಶಾಸ್ತಿ ಮಾಡಿದ್ದಾರೆ. ನಿನ್ನೆ ರಾತ್ರಿ ನಡೆದ ಗುಂಡಿನ ಕಾಳಗದಲ್ಲಿ 450 ತಾಲಿಬಾನ್​ಗಳನ್ನ ಪಂಜ್​ಶೀರ್​ ಹೋರಾಟಗಾರರು ಹೊಡೆದುರುಳಿಸಿದ್ದಾರೆ. ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ಗುಂಡಿನ ಕಾಳಗದಲ್ಲಿ 450 ತಾಲಿಬಾನ್​​ ಉಗ್ರರ ಹೆಣಗಳು ಉರುಳಿವೆ ಎನ್ನಲಾಗಿದೆ.

ಕೆಳಗಡೆ ಬಿದ್ದು ಮಣ್ಣು ಮುಕ್ಕಿದ್ರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ, ತಾಲಿಬಾನ್​​ಗಳು ಮಾತ್ರ ಪಂಜ್​ಶೀರ್ ನಮ್ಮ ಹಿಡಿತಲ್ಲಿದೆ ಎಂದಿದೆ. ಪಂಜ್​ಶೀರ್​ನಲ್ಲಿ ಕೂಡ ಮೇಲುಗೈ ಸಾಧಿಸಿದ್ದೇವೆಂದು ಬೀಗುತ್ತಿದೆ..

ಪಂಜ್​ಶೀರ್​ ವಶಪಡಿಸಿಕೊಂಡಿದ್ದೇವೆಂದ ತಾಲಿಬಾನ್
ಹೋರಾಟಗಾರರ ಆತ್ಮಸ್ಥೆರ್ಯ ಕುಗ್ಗಿಸಲು ಉಗ್ರರ ಪ್ಲಾನ್

ಪಂಜ್‌ಶೀರ್ ಪ್ರಾಂತ್ಯವನ್ನು ಶುಕ್ರವಾರ ವಶಕ್ಕೆ ಪಡೆದುಕೊಂಡಿರುವುದಾಗಿ ತಾಲಿಬಾನ್ ಹೇಳುತ್ತಿವೆ.
ನಮಗೆ ತೊಂದರೆ ಕೊಟ್ಟವರನ್ನ ಸೋಲಿಸಿ, ಪಂಜ್​ಶೀರನ್ನ ನಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದೇವೆ.ನಮ್ಮ ಆಡಳಿತಕ್ಕೆ ಅಡೆತಡೆಗಳಂತ್ತಿದ್ದ ಎಲ್ಲಾ ಶತ್ರಗಳನ್ನ ಸೋಲಿಸಿದ್ದೇವೆ. ಇನ್ಮುಂದೆ ಪಂಜ್​ಶೀರ್​ ಕೂಡ ನಮ್ಮದೇ..

ಆದ್ರೆ ತಾಲಿಬಾನ್​ ಗಳ ಈ ಮಾತನ್ನ ವಿರೋಧಿ ಪಡೆ ಅಲ್ಲಗೆಳೆದಿದೆ. ಯಾವುದೇ ಕಾರಣಕ್ಕೂ ಪಂಜ್​ಶೀರ್​ರನ್ನ ತಾಲಿಬಾನ್​ಗಳಿಗೆ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎನ್ನುವ ಮೂಲಕ ತಾಲಿಬಾನ್​ ವಿರುದ್ಧ ಮತ್ತೆ ಸವಾಲು ಎಸೆದಿದ್ದಾರೆ. ಹೆಜ್ಜೆ ಹೆಜ್ಜೆಗೂ ತಾಲಿಬಾನ್​ಗಳ ಕ್ರೌರ್ಯ ಮೆರೆದ್ರೂ ಕಿಂಚಿತ್ತು ಅಂಜದ ಪಂಜ್​ಶೀರ್​​ ಜನರ ಆತ್ಮ ವಿಶ್ವಾಸ ನೋಡಿ ಸ್ವತಃ ತಾಲಿಬಾನ್​ಗಳೇ ಪತರುಗುಟ್ಟಿ ಹೋಗಿದ್ದಾರೆ. ಇದೀಗ ಪಂಜ್​ಶೀರ್​ ಜನರ ಆತ್ಮ ಸ್ಥೆರ್ಯವನ್ನ ಕುಗ್ಗಿಸಲು ಉಗ್ರರು ಹೊಸ ಕುತಂತ್ರ ಮಾಡಿದ್ದಾರೆ.

blank

ತಾಲಿಬಾನ್​ಗಳು ಪಂಜ್​​ಶೀರ್​ಗೆ ಹೊರಜಗತ್ತಿನ ಸಂಪರ್ಕ ಸಿಗದಂತೆ ಮಾಡಿದ್ದಾರೆ. ಇಂಟರ್​ನೆಟ್​ ಸ್ಥಗಿತಗೊಂಡಿದ್ದು, ದೂರವಾಣಿ ಸಂಪರ್ಕವನ್ನ ಕಟ್​ ಮಾಡಿದ್ದಾರೆ. ಅಲ್ಲದೆ ವಿದ್ಯುತ್, ಔಷಧಿಗಳಿಗೂ ತಾಲಿಬಾನ್​ ಹೇಡಿಗಳು ತಡೆವೊಡಿದ್ದಾರೆ. ಪಂಜ್​​ಶೀರ್​ ಜನರಿಗೆ ಹೊರ ಜಗತ್ತಿನ ನೆಟ್​ವರ್ಕ್​ ಸಿಗದಂತೆ ಮಾಡಿ, ಹೋರಾಟಗಾರರ ಆತ್ಮಸ್ಥೆರ್ಯವನ್ನ ಕುಗ್ಗಿಸುವ ಪ್ಲಾನ್ ಹಾಕೊಂಡಿದ್ದಾರೆ. ಆದ್ರೆ ತಾಲಿಬಾನ್​ಗಳು ಎಷ್ಟೇ ಕುತಂತ್ರ ಬುದ್ದಿ ತೋರಿಸಿದ್ರೂ ಕೂಡ ಪಂಜ್​ಶೀರ್​​ ಜನರು ಮಾತ್ರ ತಾಲಿಬಾನ್​ಗಳ ವಿರುದ್ಧದ ಹೋರಾಟದಿಂದ ಒಂದು ಹೆಜ್ಜೆನೂ ಹಿಂದಿಟ್ಟಿಲ್ಲ ಎನ್ನಲಾಗಿದೆ.ಅಫ್ಘಾನ್​​ ಉಪಾಧ್ಯಕ್ಷರಾಗಿದ್ದ ಅಮರುಲ್ಲಾ ಸಲೇಹ್​ ಹಾಗೂ ಅಹಮದ್ ಮಸೂದ್​​ ಇಬ್ಬರು ಪಂಜ್​​ಶೀರ್​​ ನಲ್ಲಿ ನಿಂತು ತಾಲಿಬಾನ್​ಗಳ ವಿರುದ್ಧ ಫೈಟ್​ ಮಾಡ್ತಿದ್ದಾರೆ.

ಆದ್ರೆ ತಾಲಿಬಾನ್​ ಮಾತ್ರ ಪಂಜ್​ಶೀರನ್ನ ಕೂಡ ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದೇವೆಂದು ಹೇಳುತ್ತಿದೆ. ನಮ್ಮನ್ನು ಫೇಸ್ ಮಾಡಲಾಗದೆ, ಅಫ್ಘಾನ್​ ಉ​​​​ಪಾಧ್ಯಕ್ಷ ಅಮರುಲ್ಲಾ ಸಲೇಹ್, ಪಂಜ್​​​ಶೀರ್​​​ ಕಮಾಂಡರ್​​ಗಳ ಜೊತೆಗೂಡಿ ಪಲಾಯನ ಮಾಡಿದ್ದಾರೆ ಎಂದು ತಾಲಿಬಾನ್ ಹೇಳಿದೆ. ಆದ್ರೆ ಇವೆಲ್ಲ ತಾಲಿಬಾನ್​ಗಳ ಹಬ್ಬಿಸಿರುವ ಗಾಳಿ ಸುದ್ದಿ ಎಂದು ಸ್ವತಃ ಅಮರುಲ್ಲಾ ಸಲೇಹ್​ ಸ್ಪಷ್ಟನೆ ಕೊಟ್ಟಿದ್ದಾರೆ.

ತಾಲಿಬಾನ್​​ಗಳಿಗೆ ವಿಡಿಯೋ ಮೂಲಕ ಗುಮ್ಮಿದ ಸಲೇಹ್​
ನಾನು ದೇಶ ತೊರೆಯಲ್ಲ, ಶರಣಾಗುವ ಮಾತೆ ಇಲ್ಲ
ವಿಡಿಯೋ ಹರಿಬಿಟ್ಟು ಅಮರುಲ್ಲಾ ಸಲೇಹ್ ತಿರುಗೇಟು

ಸಲೇಹ್ ಹೆದರಿ ಆಫ್ಘಾನಿಸ್ತಾನ ತೊರೆದಿದ್ದಾರೆ, ತಜಕಿಸ್ತಾನಕ್ಕೆ ಪರಾರಿಯಾಗಿದ್ದಾರೆನ್ನುವ ಮಾತಿನ ಜೊತೆಗೆ ಕೆಲ ಉಪಕಥೆಗಳು ಕೂಡ ಪಂಜ್​​ಶೀರ್​​ನ ಗಾಳಿಯಲ್ಲಿ ನಿನ್ನೆ ಹಾರಾಡುತ್ತಿದ್ದವು. ಈ ಎಲ್ಲಾ ಅಂತೆ ಕಂತೆ ಮಾತುಗಳಿಗೆ ಸ್ವತಃ ಸಲೇಹ್​ ಸ್ಪಷ್ಟನೆ ಕೊಟ್ಟಿದ್ದಾರೆ. ವಿಡಿಯೋ ಮೂಲಕ ತಾಲಿಬಾನ್​​ಗಳಿಗೆ ಮತ್ತೆ ಸವಾಲು ಹಾಕಿದ್ದಾರೆ.

ನಾನು ಅಫ್ಘಾನಿಸ್ತಾನದಿಂದ ಪಲಾಯನಗೈದಿದ್ದೇನೆ ಎಂಬುವುದು ಕೇವಲ ವದಂತಿ ಅಷ್ಟೇ. ನಾನು ಪಂಜ್​​ಶೀರ್​ನಲ್ಲೇ ಇದ್ದು, ಈಗ ಅಲ್ಲಿಂದಲೇ ಮಾತನಾಡುತ್ತಿದ್ದೇನೆ. ಪಾಕಿಸ್ತಾನದ ಅಲ್​​-ಖೈದಾಸೇರಿದಂತೆ ಇತರ ಉಗ್ರ ಸಂಘಟನೆಗಳು ತಾಲಿಬಾನ್​​​​​​​ಗಳ ಜೊತೆ ಕೈ ಕೈಜೋಡಿಸಿವೆ. ಆದ್ರೆ ನಾವು ಮಾತ್ರ ತಾಲಿಬಾನ್​​ಗಳ ಯಾವುದೇ ಬೆದರಿಕೆಗೆ ಹೆದರುವುದಿಲ್ಲ, ತಾಲಿಬಾನ್​​ಗಳಿಗೆ ಶರಣಾಗುವ ಮಾತೇ ಇಲ್ಲ.
-ಅಮರುಲ್ಲಾ ಸಲೇಹ್​, ಅಫ್ಘಾನ್ ಉಪಾಧ್ಯಕ್ಷ

ಯಾವುದೇ ಕಾರಣಕ್ಕೂ ತಾಲಿಬಾನ್​ಗಳ ವಿರುದ್ಧ ಸೋಲೊಪ್ಪಿಕೊಳ್ಳಲು ಸಾಧ್ಯವಿಲ್ಲವೆಂದು, ಅಮರುಲ್ಲಾ ಸಲೇಹ್​ ಹೇಳಿದ್ರೆ, ನನ್ನ ತಲೆ ಹೋದ್ರೂ, ನಾನು ತಾಲಿಬಾನ್​ಗಳಿಗೆ ಶರಣಾಗುವ ಪ್ರಶ್ನೆಯೇ ಇಲ್ಲ ಎಂದು ಅಹಮದ್ ಮಸೂದ್ ಹೇಳಿದ್ದಾರೆ. ಇಬ್ಬರು ನಾಯಕರು ಇದೀಗ ಪಂಜ್​ಶೀರ್​​ನಲ್ಲೇ ಕೂತು ತಾಲಿಬಾನ್​ಗಳಿಗೆ ಕಠಿಣ ಸವಾಲೊಡ್ಡುತ್ತಿರುವುದು, ಉಗ್ರರ ಪಾಲಿಗೆ ಮಗ್ಗುಲ್ಲಲೇ ಇರುವ ಮುಳ್ಳಾಗಿ ಪರಿಣಮಿಸಿದೆ.

ಆದ್ರೂ ಪಟ್ಟು ಬಿಡದ ತಾಲಿಬಾನ್​, ಪಂಜ್‌ಶೀರ್‌ ಮೇಲೆ ಅಧಿಪತ್ಯ ಸಾಧಿಸಲು ಹೊಂಚು ಹಾಕಿ ಸಂಚು ರೂಪಿಸುತ್ತಿದೆ. ತಾಲಿಬಾನ್​ಗಳು ಇದೀಗ ಮತ್ತೊಂದು ಕುತಂತ್ರ ಮಾಡಿದ್ದಾರೆ. ಇತರೆ ಉಗ್ರ ಸಂಘಟನೆಯ ಬಲದೊಂದಿಗೆ ಪಂಜ್​ಶೀರ್​​ಗೆ ನುಗ್ಗಲ್ಲು ಪ್ಲಾನ್ ಹಾಕಿಕೊಂಡಿದ್ದಾರೆ.

blank

ತಾಲಿಬಾನ್​​ಗಳ ಜೊತೆ ಕೈ ಜೋಡಿಸಿತಾ ಅಲ್​ಖೈದಾ?

ಅಫ್ಘಾನ್​​ ತಾಲಿಬಾನ್​ ವಶವಾಗ್ತಿದ್ದಂತೆ ಪಾಪಿ ಪಾಕಿಸ್ತಾನ ತನ್ನ ಬಾರ್ಡರ್​ ಕೂಡ ಮರೆತಿದೆ ಅನ್ಸುತ್ತೆ. ಯಾಕಂದ್ರೆ ಅಫ್ಘಾನ್​ನಿಂದ ಪಾಕಿಸ್ತಾನಕ್ಕೆ, ಪಾಕಿಸ್ತಾನದಿಂದ ಅಫ್ಘಾನ್​ಗೆ ಉಗ್ರರು, ನೆರೆ ಮನೆಗೆ ಹೋದಷ್ಟು ಸುಲಭವಾಗಿ ಓಡಾಡುತ್ತಿದ್ದಾರೆ. ಇದ್ರ ನಡುವೆ ಪಂಜ್​ಶೀರ್​​​ ವಶಪಡಿಸಿಕೊಳ್ಳಲು ಕಸರತ್ತು ನಡೆಸುತ್ತಿರುವ ತಾಲಿಬಾನ್​​ಗಳಿಗೆ ಇದೀಗ ಪಾಕ್​ ಭಯೋತ್ಪಾದಕ ಸಂಘಟನೆ ಅಲ್​​ಖೈದಾ ಹೆಗಲು ಕೊಟ್ಟಿದೆ. ಅಲ್​ಖೈದಾ ಜೊತೆಗೆ ಇತರೆ ಉಗ್ರ ಸಂಘಟನೆಗಳೂ ಕೂಡ ಪಂಜ್​ಶೀರ್​ ವಿರುದ್ಧದ ಯುದ್ಧದಲ್ಲಿ ತಾಲಿಬಾನ್​ಗಳ ಜೊತೆ ಕೈ ಜೋಡಿಸಿದ್ದಾರೆ ಎನ್ನಲಾಗಿದೆ.

ಅಫ್ಘಾನ್​ ವಶಪಡಿಸಿಕೊಳ್ಳಲು ತಾಲಿಬಾನ್​ಗಳಿಗೆ ಪಾಕಿಸ್ತಾನದ ಉಗ್ರ ಸಂಘಟನೆಗಳು ಸಪೋರ್ಟ್​ ಮಾಡಿತ್ತು ಅನ್ನೋ ಮಾತುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ಹೊತ್ತಲ್ಲೆ, ಪಾಕ್​ ಉಗ್ರ ಸಂಘಟನೆ ಅಲ್​ಖೈದಾ ತಾಲಿಬಾನ್​ಗಳಿಗೆ ಹೆಗಲು ಕೊಡಲು ಮುಂದಾಗಿದೆ. ಇದು ಸಹಜವಾಗಿಯೇ ಕುತಂತ್ರ ಪಾಕಿಸ್ತಾನದ ಬುದ್ಧಿಯನ್ನ ಮತ್ತೊಮ್ಮೆ ಜಗತ್ತೆನೆದುರು ಬೆತ್ತಲು ಮಾಡಿದೆ. ಒಂದು ವೇಳೇ ಈ ತಾಲಿಬಾನ್​​ ಉಗ್ರರ ಜೊತೆ ಪಾಕ್​​​​ ಉಗ್ರರು ಕೂಡ ಜೈ ಕೋಡಿಸಿದ್ರೆ, ಅಫ್ಘಾನ್​​ನಲ್ಲಿ ಮತ್ತಷ್ಟು ಸಾವು ನೋವುಗಳು ಸಂಭವಿಸುವ ಸಾಧ್ಯತೆ ಇದೆ.

ಪಂಜ್​ಶೀರ್​ ಕಣಿವೆಯಲ್ಲಿ ಠಿಕಾಣಿ ಹೂಡಿರುವ ತಾಲಿಬಾನ್​​ಗಳು
ತಾಲಿಬಾನ್​​ ವಿರೋಧಿಗಳನ್ನ ಹತ್ಯೆಗೈಯುತ್ತಿರುವ ಉಗ್ರರು?

ಹೇಗಾದ್ರೂ ಮಾಡಿ ಪಂಜ್​ಶೀರನ್ನ ವಶಪಡಿಸಿಕೊಳ್ಳಬೇಕೆಂದು ಹಠಕ್ಕೆ ಬಿದ್ದಿರುವ ಈ ಉಗ್ರರು ಪಂಜ್​ಶೀರ್​ ಕಣಿವೆಯಲ್ಲಿ ಠಿಕಾಣಿ ಹೂಡಿದ್ದಾರೆ . ಹಿಂದಿನ ಪ್ರಜಾಪ್ರಭುತ್ವ ಸರ್ಕಾರದಲ್ಲಿ ಕೆಲಸ ಮಾಡಿದ ಕೆಲ ಹಿರಿಯ ಅಧಿಕಾರಿಗಳನ್ನು, ಅಮೆರಿಕ ಸೇನೆ ಆಫ್ಘಾನ್​ನಲ್ಲಿರುವ ಸಂದರ್ಭದಲ್ಲಿ ಅಮೆರಿಕ ಸೇನೆಯ ಪರ ಕೆಲಸ ಮಾಡಿದವರನ್ನೂ ತಾಲಿಬಾನ್​​ಗಳು ಹತ್ಯೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಮೂಲಕ ಪಂಜ್​ಶೀರ್ ಜನರ ಆತ್ಮಸ್ಥೆರ್ಯ ಕುಗ್ಗಿಸಿ, ಅಲ್ಲಿ ಭಯದ ವಾತಾವರಣ ಮೂಡಿಸಿಲು ಪ್ಲಾನ್ ಹಾಕ್ಕೊಂಡಿದೆ.. ಎಷ್ಟೇ ಅಟ್ಟಹಾಸ ಮೆರೆದ್ರೂ ಕೂಡ ತಾಲಿಬಾನ್​ಗಳಿಗೆ ಮಾತ್ರ ಪಂಜ್​ಶೀರ್​​ ಮೇಲೆ ಇಲ್ಲಿಯವರೆಗೆ ಹಿಡಿತ ಸಾಧಿಸಲು ಸಾಧ್ಯವಾಗಿಲ್ಲ. ಇಂತಹ ಸಂದರ್ಭದಲ್ಲಿಯೇ ಅಫ್ಘಾನಿಸ್ತಾದನ ಸೈನಿಕರ ಪಡೆಯೊಂದು ತಾಲಿಬಾನ್​ಗಳಿಗೆ ಸೆಡ್ಡು ಹೊಡೆಯುತ್ತಿರುವುದು ತಾಲಿಬಾನ್​ಗಳ ತಲೆನೋವು ಹೆಚ್ಚಿಸಿದೆ.

ತಾಲಿಬಾನ್​ಗಳಿಗೆ ಸೆಡ್ಡು ಹೊಡೆದ ರಾಷ್ಟ್ರೀಯ ಪ್ರತಿರೋಧ ಪಡೆ..!
ಉಗ್ರರಿಗೆ ಸವಾಲಾಗಿ ಪರಿಣಮಿಸಿದ ಎನ್​ಆರ್​​ಎಫ್​ ನಡೆ

NRF, ಇದು ಅಫ್ಘಾನಿಸ್ತಾನದ ರಾಷ್ಟ್ರೀಯ ಪ್ರತಿರೋಧ ಪಡೆ. ಪಂಜ್​ಶೀರ್ ಹೋರಾಟಗಾರ ಅಹಮದ್​ ಮಸೂದ್​​ ಸಂಘಟಿಸಿರುವ ಬುಡಕಟ್ಟು ಸೈನಿಕರು ಇವರು.. ಸರಿ ಸುಮಾರು 10 ರಿಂದ 15 ಸಾವಿರದಷ್ಟಿರುವ ಈ ಎನ್​ಆರ್​ಎಫ್ ಇದೀಗ ತಾಲಿಬಾನ್​​ಗ​​ಳಿಗೆ ಕಠಿಣ ಸವಾಲೊಡ್ಡುತ್ತಿದೆ. ಅಮರುಲ್ಲಾ ಸಲೇಹ್, ಅಹಮದ್ ಮಸೂದ್​ ಮಾತ್ರವಲ್ಲದೇ ಹಲವು ಬುಡಕಟ್ಟು ನಾಯಕರು ಈ ಎನ್​.ಆರ್.ಎಫ್​ನಲ್ಲಿದ್ದಾರೆ. ಇದೀಗ ರಾಷ್ಟ್ರೀಯ ಪ್ರತಿರೋಧ ಪಡೆಗೆ ಪಂಜ್​ಶೀರ್​​ನ ಜನರು ಕೂಡ ಬೆಂಬಲ ಕೊಟ್ಟಿದ್ದು, ಇದು ತಾಲಿಬಾನ್​​ಗಳ ತಲೆನೋವು ಹೆಚ್ಚಲು ಕಾರಣವಾಗಿದೆ.

ಒಂದು ಕಡೆ ತಾಲಿಬಾನ್​ಗಳು ಪಂಜ್​ಶೀರ್​​ ವಶಪಡಿಸಿಕೊಳ್ಳಲು ಟ್ರೈ ಮಾಡ್ತಿದ್ರೆ, ಮತ್ತೊಂದು ಕಡೆಯಲ್ಲಿ ತಾಲಿಬಾನ್​​ಗಳು ಹೆಜ್ಜೆ ಹೆಜ್ಜೆಗೂ ಹಿಂಸಾಚಾರ ನಡೆಸಿ ಅಮಾಯಕ ಜನರ ಜೀನವದ ಜೊತೆ ಚೆಲ್ಲಾಟವಾಡ್ತಿದ್ದಾರೆ. ತಾಲಿಬಾನ್​​ಗಳ ಕೈಗೆ ಪವರ್​ಫುಲ್ ಬಂದೂಕು ಸಿಕ್ಕಿದ್ದು, ಮಂಗನ ಕೈಗೆ ಮಾಣಿಕ್ಯ ಸಿಕ್ಕಿದ್ದಂತ್ತಾಗಿದ್ದು, ಸಿಕ್ಕ ಸಿಕ್ಕಲ್ಲಿ ಗುಂಡು ಹಾರಿಸಿ ಅಮಾಯಕ ಹತ್ಯೆ ಮಾಡುತ್ತಿದ್ದಾರೆ.

ಅಮಾಯಕರ ಜೀವದ ಜೊತೆ ಉಗ್ರರ ಚೆಲ್ಲಾಟ
ಗಾಳಿಯಲ್ಲಿ ಗುಂಡು ಹಾರಿಸಿ ತಾಲಿಬಾನ್ ಹುಚ್ಚಾಟ
ತಾಲಿಬಾನ್​ ಅಟ್ಟಹಾಸಕ್ಕೆ ಹದಿನೇಳು ಜನರು ಬಲಿ

ಅಫ್ಘಾನ್​​ನಲ್ಲಿ ತಾಲಿಬಾನ್​ ಸರ್ಕಾರ ರಚನೆ ಮಾಡಲು ಕೌಂಟ್​ ಡೌನ್​ ಶುರುವಾಗಿದ್ದು, ಪರಿಣಾಮ ಅಫ್ಘಾನ್​​​ ರಾಜಧಾನಿ ತಾಲಿಬಾನ್​ ಉಗ್ರರು ಹುಚ್ಚಾಟ ಮೆರೆದಿದ್ದಾರೆ. ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಾಚರಣೆ ನಡೆಸಿದ್ದಾರೆ. ಉಗ್ರರು ಸಿಕ್ಕ ಸಿಕ್ಕ ಕಡೆ ಗುಂಡು ಹಾರಿಸಿ ಸೆಲೆಬ್ರೇಷನ್ ನಡೆಸಿದ್ದು, ಪರಿಣಾಮ ಹದಿನೇಳು ಅಮಾಯಕರು ಉಗ್ರರ ಗುಂಡು ತಗುಲಿ ಬಲಿಯಾಗಿದ್ದು 40ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ ತಾಲಿಬಾನ್​ಗಳ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅಫ್ಘಾನ್​ನಲ್ಲಿ ಬೀದಿ ಬೀದಿಯಲ್ಲಿ ಅಮಾಯಕರ ಜನರ ಹೆಣಗಳು ಉರುಳುತ್ತಿವೆ. ಸಾವಿನ ಊರಲ್ಲಿ ಶವಗಳಿಗೆ ಲೆಕ್ಕ ಹಾಕುವವರು ಯಾರು? ಎನ್ನುವಂತ್ತಾಗಿದೆ ಸದ್ಯಕ್ಕೆ ಅಫ್ಘಾನ್ ಸ್ಥಿತಿ. ಪಂಜ್​ಶೀರ್ ವಶಪಡಿಸಿಕೊಳ್ಳಲೇ ಬೇಕೆಂದು ಹಠಕ್ಕೆ ಬಿದ್ದಿರುವ ತಾಲಿಬಾನ್​ಗಳು ಇನ್ಯಾವ ಉಗ್ರ ರೂಪ ತಾಳ್ತಾರೋ ಅನ್ನೋದನ್ನ ಕಾದು ನೋಡಬೇಕಾಗಿದೆ.

ಪಂಜ್​ಶೀರನ್ನ ತಮ್ಮ ತೆಕ್ಕೆಗೆ ಹಾಕಿಕೊಳ್ಳಲು ತಾಲಿಬಾನ್​​ಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಪಂಜ್​​ಶೀರ್ ಕಣಿಯವೆಲ್ಲಿ ಠಿಕಾಣಿ ಹೂಡಿರುವ ಈ ತಾಲಿಬಾನ್​​ ಉಗ್ರರ ಜೊತೆ ಇದೀಗ ಪಾಕ್​ ಉಗ್ರರು ಕೂಡ ಕೈಜೋಡಿಸಿದ್ದಾರೆ. ಅಫ್ಘಾನ್​ ಅಧ್ಯಕ್ಷ ಓಡಿ ಹೋದ್ಮೇಲೂ, ಅಮೆರಿಕ ಸೇನೆ ಜಾಗ ಖಾಲಿ ಮಾಡಿದ್ಮೇಲೂ , ತಾಲಿಬಾನ್​​ಗಳ ವಿರುದ್ಧ ಹೋರಾಟ ಮುಂದುವರೆಸಿರುವ ಈ ಪಂಜ್​ಶೀರ್​ ಜನರ ಧೈರ್ಯ ನಿಜಕ್ಕೂ ಮೆಚ್ಚುವಂತಹದ್ದು.

Source: newsfirstlive.com Source link