ಸ್ಟಾರ್ ನಿರ್ಮಾಪಕ ಉಮಾಪತಿ ನೆಕ್ಸ್ಟ್​ ಮೂವಿಯ ಡ್ರೀಮ್ ಹೀರೋ ಯಾರು ಗೊತ್ತಾ..?

ಸ್ಟಾರ್ ನಿರ್ಮಾಪಕ ಉಮಾಪತಿ ನೆಕ್ಸ್ಟ್​ ಮೂವಿಯ ಡ್ರೀಮ್ ಹೀರೋ ಯಾರು ಗೊತ್ತಾ..?

ಸ್ಯಾಂಡಲ್​ವುಡ್​ ಸ್ಟಾರ್ ನಟ ನಿರ್ದೇಶಕರಂತೆ ಸ್ಟಾರ್ ನಿರ್ಮಾಪಕರಲ್ಲೊಬ್ಬರು ಉಮಾಪತಿ ಶ್ರೀನಿವಾಸ್​​​.. ಮದಗಜ ಸಿನಿಮಾದ ಶೂಟಿಂಗ್ ಮುಗಿಸಿರೋ ಉಮಾಪತಿ ಶ್ರೀನಿವಾಸ್ ಇಬ್ಬರು ಸ್ಟಾರ್ ನಟರ ಕಾಲ್​ ಶೀಟ್​​​ಗಾಗಿ ಪ್ರಯತ್ನಿಸುತ್ತಿದ್ದಾರೆ.. ಅದ್ರಲೊಬ್ಬ ಪವರ್​​ ಫುಲ್ ಸ್ಟಾರ್ ನಟನ ಜೊತೆ ಕೆಲವೇ ದಿನಗಳಲ್ಲಿ ಪವರ್ ಫುಲ್ ಸಿನಿಮಾ ಅನೌನ್ಸ್ ಮಾಡಲಿದ್ದಾರೆ.

ಸ್ಯಾಂಡಲ್​ವುಡ್​ ರಂಗ ದೊಡ್ಡ ಮಟ್ಟಕ್ಕೆ ಸ್ಪರ್ಧೆಯ ಮಾಡಲು ಘಟ್ಟಿ ನಿರ್ಮಾಪಕರು ಮುಂದೆ ಬೇಕು. ನಿರ್ದೇಶಕರ ಹೊಂಗನಸನ್ನ ನನಸು ಮಾಡೋ ಪ್ರೋಡ್ಯೂಸರ್ಸ್ ಸಿಗ್ಬೇಕು.. ಕನ್ನಡ ನೆಲದಲ್ಲಿ ಈಗ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಪ್ರದರ್ಶಿಸ ಬಹುದಾದ ಸಿನಿಮಾಗಳನ್ನ ನಿರ್ಮಾಣ ಮಾಡೋ ಬಿಗ್ ಪ್ರೋಡಕ್ಷನ್ ಹೌಸಸ್​​​ಗಳು ಉದ್ಭವವಾಗಿವೆ.. ಬಿಗ್ ಬಿಗ್ ಪ್ರೋಡ್ಯೂಸರ್ಸ್ ಸ್ಯಾಂಡಲ್​ವುಡ್​​ನಲ್ಲು ತಲೆ ಎತ್ತಿ ನಿಂತಿದ್ದಾರೆ.. ಇಂತಹ ಬಿಗ್ ಮೂವಿಸ್​ ನಿರ್ಮಾಪಕರಲ್ಲೊಬ್ಬರು ಉಮಾಪತಿ ಶ್ರೀನಿವಾಸ್ ಗೌಡ..

ಡಿಸೆಂಬರ್ ತಿಂಗಳ ಮೇಲೆ ಮದಗಜನ ಕಣ್ಣು..!
ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಮದಗಜ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಮಾಡಿದೆ ಉಮಾಪತಿ ಫಿಲಂಸ್​​.. ಅನೇಕ ಅಡೆತಡೆಗಳನ್ನ ಮೆಟ್ಟಿ ಒಂದು ವರ್ಷ ಆರು ತಿಂಗಳು 19 ದಿನದಲ್ಲಿ 74 ದಿವಸ ಶೂಟಿಂಗ್ ಮಾಡಿ ಮುಗಿಸಿದೆ ಮದಗಜ ಫಿಲ್ಮ್ ಟೀಮ್​.. ಈ ತಿಂಗಳ ಮಧ್ಯಭಾಗದಲ್ಲಿ ಹಾಡೊಂದನ್ನ ಬಿಟ್ಟು ನವೆಂಬರ್ ತಪ್ಪಿದ್ರೆ ಡಿಸೆಂಬರ್ ಅಂತ್ಯಕ್ಕೆ ಮದಗಜ ಸಿನಿಮಾವನ್ನ ಪ್ರೇಕ್ಷಕರ ಮುಂದೆ ತಂದು ನಿಲ್ಲಿಸೋ ಪ್ಲಾನ್​​ನಲ್ಲಿ ಚಿತ್ರತಂಡವಿದೆ.

ಉಮಾಪತಿ ಶ್ರೀನಿವಾಸ್ ಅವರ ಮುಂದಿನ ಸಿನಿಮಾದ ಸ್ಟಾರ್ ಯಾರು ಅನ್ನೋ ಪ್ರಶ್ನೆಗೆ ಉತ್ತರವನ್ನ ಹೇಳ್ತೀವಿ. ಆದ್ರೆ ಅದಕ್ಕೂ ಮೊದಲು ಉಮಾಪತಿ ಅವರ ಕನಸಿನ ದೊಡ್ಡ ಸಿನಿ ಯೋಜನೆ ಸ್ಟುಡಿಯೋ ನಿರ್ಮಾಣ ಯಾವ ಹಂತಕ್ಕೆ ಬಂದಿದೆ.

ಉಮಾಪತಿ ಕನಸಿನ ಸ್ಟುಡಿಯೋ ನಿರ್ಮಾಣ ಯಾವಾಗ..?
ಕೆಲ ದಿನಗಳ ಹಿಂದೆ 25 ಎಕ್ಕರೆ ಜಾಗದಲ್ಲಿ ಸ್ಟುಡಿಯೋ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಿದ್ರು ಉಮಾಪತಿ.. ಈಗ ಸ್ಟುಡಿಯೋ ನಿರ್ಮಾಣದ ಕಾರ್ಯ ಯಾವ ಹಂತದಲ್ಲಿದೆ, ಎಂದಿನಿಂದ ಕನ್ನಡ ಚಿತ್ರೋದ್ಯಮಕ್ಕೆ ಉಮಾಪತಿ ಅವರ ಸ್ಟುಡಿಯೋ ಶೂಟಿಂಗ್​​​​ಗೆ ಸಿಗುತ್ತೆ. ಮೊದ ಮೊದ್ಲೇ ಕನ್ನಡದ ಸ್ಟಾರ್ ನಟರ ಸಿನಿಮಾವನ್ನ ನಿರ್ಮಾಣ ಮಾಡಿ ಸೈ ಅನ್ನಿಸಿಕೊಂಡಿರುವ ಉಮಾಪತಿ ಶ್ರೀನಿವಾಸ್ ಮುಂದಿನ ದಿನಗಳಲ್ಲಿ ಕನ್ನಡದ ಇಬ್ಬರು ದೊಡ್ಡ ಸ್ಟಾರ್ ನಟರ ಸಿನಿಮಾಕ್ಕೆ ಮಾಲೀಕನಾಗೋ ಯೋಜನೆಯಲ್ಲಿದ್ದಾರೆ ಮದಗಜ ಪ್ರೋಡ್ಯೂಸರ್​.

ಹೌದು ಒಬ್ಬ ನಿರ್ಮಾಪಕ ಆ್ಯಕ್ಟಿವ್ ಆಗಿ ಫಿಲ್ಮ್ ಫಿಲ್ಡ್​ಗಿಳಿದ್ರೆ ಅನೇಕ ಕಲಾವಿದರ ದಂಡಿಗೆ ಕೈತುಂಬ ಕೆಲಸ ಸಿಗುತ್ತೆ ಒಳ್ಳೆ ಒಳ್ಳೆ ಸಿನಿಮಾಗಳು ಹೊರ ಬರುತ್ತವೆ.. ಮುಂದಿನ ಸಿನಿಮಾ ಯಾವ ಹೀರೋ ಜೊತೆ ನಿರ್ಮಾಪಕರೇ ಅನ್ನೋ ಪ್ರಶ್ನೆಗೆ ಉತ್ತರವನ್ನ ಹೇಳದೆ ರಹಸ್ಯ ಕಾಪಾಡಿಕೊಂಡರು ಉಮಾಪತಿ.. ಆದ್ರೆ ಚಿತ್ರಪ್ರೇಮಿಗಳೇ ತಂಡ ನಡಿಸಿದ ರಿಸರ್ಚ್ ಪ್ರಕಾರ ಉಮಾಪತಿ ಶ್ರೀನಿವಾಸ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವ್ರಿಗೆ ಸಿನಿಮಾ ಮಾಡೋ ಸಾಧ್ಯತೆ ಇದೆ. ಈ ಬಗ್ಗೆ ಗಾಂಧಿನಗರವು ಗುಟ್ಟಾಗಿ ಮಾತನಾಡಿಕೊಳ್ತಿದೆ.. ಈ ಗುಟ್ಟು ಡಿಸೆಂಬರ್ ಹೊತ್ತಿಗೆ ರಟ್ಟಾದ್ರು ಅಚ್ಚರಿ ಪಡಬೇಕಿಲ್ಲ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಈ ಇಬ್ಬರು ಉಮಾಪತಿ ಶ್ರೀನಿವಾಸ್ ಅವರ ಡ್ರಿಮ್ ಹೀರೋ.. ಇಂದೆಲ್ಲ ನಾಳೆ ಉಮಾಪತಿ ತಮ್ಮ ಬ್ಯಾನರ್​​​​​ನಲ್ಲಿ ಅಪ್ಪು ಮತ್ತು ಯಶ್​ ಅವರಿಗೆ ಸಿನಿಮಾ ಮಾಡೇ ಮಾಡ್ತಾರೆ ಅನ್ನೋದು ಉಮಾಪತಿ ಶ್ರೀನಿವಾಸ್ ಗೌಡ್ರ ಆತ್ಮೀಯ ಬಳಗದ ಮಾತು.

Source: newsfirstlive.com Source link