ಆಂಗ್ಲರ ನಾಡಲ್ಲಿ ರೋಹಿತ್ ಶರ್ಮಾ ಸೆಂಚುರಿ.. ಓವೆಲ್​ನಲ್ಲಿ ದಾಖಲೆ ಪುಡಿಗಟ್ಟಿದ ‘ಹಿಟ್​​​ಮ್ಯಾನ್​’

ಆಂಗ್ಲರ ನಾಡಲ್ಲಿ ರೋಹಿತ್ ಶರ್ಮಾ ಸೆಂಚುರಿ.. ಓವೆಲ್​ನಲ್ಲಿ ದಾಖಲೆ ಪುಡಿಗಟ್ಟಿದ ‘ಹಿಟ್​​​ಮ್ಯಾನ್​’

ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ರೋಹಿತ್ ಶರ್ಮಾ ಹೊಸ ಹೊಸ ದಾಖಲೆ ಬರೆಯುತ್ತಿದ್ದಾರೆ. ಅದರಲ್ಲೂ ಇಂಗ್ಲೆಂಡ್ ನೆಲದಲ್ಲಿ ಮೊದಲ ಬಾರಿಗೆ ಟೆಸ್ಟ್​​ನಲ್ಲಿ ಹಿಟ್​ಮ್ಯಾನ್​ ಶತಕ ಸಿಡಿಸಿ ಮಿಂಚಿದ್ದಾರೆ. ಈಗಾಗಲೇ ಇಂಟರ್​ ನ್ಯಾಷನಲ್​​ ಕ್ರಿಕೆಟ್​ನಲ್ಲಿ 15 ಸಾವಿರ ರನ್ ಕಲೆ ಹಾಕಿರೋ ರೋಹಿತ್​ ಮತ್ತಷ್ಟು ದಾಖಲೆಗಳನ್ನು ಪುಡಿಗಟ್ಟಿದ್ದಾರೆ.

ಟೆಸ್ಟ್ ಕ್ರಿಕೆಟ್​​​ನಲ್ಲಿ 8ನೇ ಶತಕ ಸಿಡಿಸಿದ ರೋಹಿತ್​ ಶರ್ಮಾ
ಕ್ರಿಕೆಟ್ ಲೋಕದಲ್ಲಿ ರೋಹಿತ್ ಶರ್ಮಾ ಹೊಸ ಛಾಪು ಮೂಡಿಸ್ತಿದ್ದಾರೆ. ಅದರಲ್ಲೂ ಆರಂಭಕರಾಗಿ ಯಶಸ್ವಿ ಪ್ರದರ್ಶನ ತೋರುತ್ತಿರೋ ಹಿಟ್ ಮ್ಯಾನ್​ ಹೊಸ ಹೊಸ ದಾಖಲೆ ಬರೆಯುತ್ತಿದ್ದಾರೆ. ಸದ್ಯ ಇಂಗ್ಲೆಂಡ್​​ ಓವೆಲ್​ನಲ್ಲಿ ನಡೆಯುತ್ತಿರ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಭರ್ಜರಿ ಶತಕ ಸಿಡಿಸಿದ್ದಾರೆ. 256 ಎಸೆತಗಳಲ್ಲಿ 127 ರನ್ ಕಲೆ ಹಾಕಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದಲ್ಲಿ ಈವರೆಗೂ 8 ಶತಕ ಬಾರಿಸಿ ಮುನ್ನುಗುತ್ತಿದ್ದಾರೆ.

ಅಂದಹಾಗೇ ಕೇವಲ ಒಂದೇ ಒಂದು ವಾರದಲ್ಲಿ ರೋಹಿತ್ ಶರ್ಮಾ ಹೆಸರಿಗೆ ಹಲವು ದಾಖಲೆಗಳು ಸೇರಿಕೊಂಡಿವೆ. ಅದನ್ನ ಒಂದೊಂದಾಗಿ ತೋರಿಸ್ತೀವಿ ನೋಡಿ..

blank

ಹಿಟ್​ಮ್ಯಾನ್​​ ದಾಖಲೆಗಳು..

  1. ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ 15 ಸಾವಿರ ರನ್​ ಪೂರೈಸಿದ ಹಿಟ್​ಮ್ಯಾನ್​
  2. ವಿದೇಶಿ ನೆಲದಲ್ಲಿ ಮೊದಲ ಬಾರಿಗೆ ಟೆಸ್ಟ್​ ಕ್ರಿಕೆಟ್​ನಲ್ಲಿ ರೋಹಿತ್ ಶತಕ
  3. ಇಂಗ್ಲೆಂಡ್​ ನೆಲದಲ್ಲಿ 3 ಫಾರ್ಮ್ಯಾಟ್​ನಲ್ಲಿ ಶತಕ ಬಾಡಿಸಿದ ಮುಂಬೈಕರ್
  4. ಮೂರು ಮಾದರಿಯಲ್ಲೂ ಶತಕ ಬಾರಿಸಿದ ಮೊದಲ ವಿದೇಶಿ ಆಟಗಾರ
  5. ಇಂಗ್ಲೆಂಡ್​ನಲ್ಲಿ 2 ಸಾವಿರ ರನ್​ ಕಲೆ ಹಾಕಿರುವ ರೋಹಿತ್ ಶರ್ಮಾ
  6. ಟೆಸ್ಟ್ ಕ್ರಿಕೆಟ್​ನಲ್ಲಿ 3 ಸಾವಿರ ರನ್​ ಬಾರಿಸಿರುವ ಹಿಟ್​ ಮ್ಯಾನ್​
  7. ಆರಂಭಿಕ ಆಟಗಾರನಾಗಿ 11 ಸಾವಿರ ರನ್ ಕಲೆ ಹಾಕಿದ ರೋಹಿತ್​
  8. 2021ರ ಸಾಲಿನಲ್ಲಿ 1 ಸಾವಿರ ರನ್ ಹೊಡೆದ ರೋಹಿತ್ ಶರ್ಮಾ.

ಸದ್ಯ ಇಂಗ್ಲೆಂಡ್ ವಿರುದ್ಧದ 4 ಟೆಸ್ಟ್​ನಲ್ಲಿ ರೋಹಿತ್ ಶರ್ಮಾ 127 ರನ್​ ಕಲೆ ಹಾಕಿದ್ದಾರೆ. ಅದರೊಂದಿಗೆ 2ನೇ ಇನ್ನಿಂಗ್ಸ್​ನಲ್ಲಿ 3 ವಿಕೆಟ್​ ಕಳೆದುಕೊಂಡಿರೋ ಭಾರತ 270 ಎನ್​ ಬಾರಿಸಿದೆ. ಸದ್ಯ ಕ್ರೀಜ್​ನಲ್ಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ಜಡೇಜಾ ಬ್ಯಾಟಿಂಗ್ ಮಾಡ್ತಿದ್ದು, ಅಂದುಕೊಂಡಂತೆಯಾದ್ರೆ ಭಾರತ, ಇಂಗ್ಲೆಂಡ್​ಗೆ ಬೃಹತ್ ಮೊತ್ತದ ಟಾರ್ಗೆಟ್ ನೀಡುವ ಸಾಧ್ಯತೆಗಳಿವೆ.

Source: newsfirstlive.com Source link