ಮತ್ತೊಮ್ಮೆ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳಲಿರುವ ಡಾಲಿ ಧನಂಜಯ್​​, ಲೂಸ್​​ ಮಾದ ಯೋಗಿ!

ಮತ್ತೊಮ್ಮೆ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳಲಿರುವ ಡಾಲಿ ಧನಂಜಯ್​​, ಲೂಸ್​​ ಮಾದ ಯೋಗಿ!

ನಟ ರಾಕ್ಷಸ ಡಾಲಿ ಧನಂಜಯ್, ಲೂಸ್ ಮಾದ ಯೋಗಿ ಹಾಗೂ ನೀರ್​ದೋಸೆ ಡೈರೆಕ್ಟರ್ ವಿಜಯ ಪ್ರಸಾದ್. ಈ ಮೂವರು ಒಂದೇ ದಿನ ಒಂದೇ ಕ್ಷಣ ಒಂದೇ ಸ್ಥಳದಲ್ಲಿ ಭೇಟಿಯಾಗಿದ್ದಾರೆ. ಇದಂತೂ ಸುಮ್ನೇ ಟೀ ಕುಡಿದು ಖಾರ ಮಂಡಕ್ಕಿ ಮಿರ್ಚಿ ತಿನ್ನೋ ಭೇಟಿ ಅಲ್ವೇ ಅಲ್ಲ ಅನ್ನುತ್ತಿದೆ ರಿಪೋರ್ಟ್​​. ಲೂಸ್ ಮಾದ ಯೋಗೇಶ್ ಸದ್ಯ ಲಂಕೆ ಸಿನಿಮಾವನ್ನ ರಿಲೀಸ್ ಮಾಡೋ ಪ್ಲಾನ್​​ನಲ್ಲಿ ಇದ್ದಾರೆ.. ಈ ಬಾರಿಯ ಗಣಪತಿ ಹಬ್ಬಕ್ಕೆ ಯೋಗಿ ಅವರ ‘ಲಂಕೆ’ ಸಿರಿಗನ್ನಡ ಪ್ರೇಕ್ಷಕರ ಮುಂದೆ ಬರುತ್ತಿದೆ..  ಯೋಗಿ ಕಥೆ ಇದಾದ್ರೆ ರತ್ನನ್ ಪ್ರಪಂಚ ಸೇರಿರುವ ಡಾಲಿ ಧನಂಜಯ್ ಸಾಲು ಸಿನಿಮಾಗಳಲ್ಲಿ ನಿಂತಿದ್ದಾರೆ.. ಯಾವ್ ಸಿನಿಮಾ ಫಸ್ಟು ಯಾವ ಸಿನಿಮಾ ನೆಕ್ಸ್ಟ್ ಅನ್ನೋದೆ ಕಲರ್​ಫುಲ್ ಕನ್​ಫ್ಯೂಸ್​​.

ಇನ್ನು ನೀರ್​​ ದೋಸೆ ಖ್ಯಾತಿಯ ನಿರ್ದೇಶಕ ವಿಜಯ ಪ್ರಸಾದ್ ಎರಡ್ ಎರಡು ಭಾಗದಲ್ಲಿ ತೋತಾಪುರಿ ಸಿನಿಮಾವನ್ನ ಮಾಡಿ ನೀನಾಸಂ ಸತೀಶ್ ಜೊತೆ ಪೇಟ್ರೋಮ್ಯಾಕ್ಸ್ ಬೆಳಕಿನಲ್ಲಿ ಸಿನಿಮಾ ಮಾಡಿ ಹೊಸ ಸಿನಿಮಾದ ಸ್ಕೆಚ್​​ನಲ್ಲಿ ಇದ್ದಾರೆ. ಈ ರೈಟ್ ಟೈಮ್​​ನಲ್ಲಿ ಡಾಲಿ-ಯೋಗಿ ಹಾಗೂ ವಿಜಯ ಪ್ರಸಾದ್ ಭೇಟಿಯಾಗಿದ್ದಾರೆ.

blank

ಸಿದ್ಲಿಂಗು ಡೈರೆಕ್ಟರ್ ಚಿತ್ರದಲ್ಲಿ ಡಾಲಿ ಮತ್ತು ಯೋಗಿ..!

ಡೈರೆಕ್ಟರ್ ವಿಜಯ ಪ್ರಸಾದ್ ಸೆಪ್ಟೆಂಬರ್ 1ನೇ ತಾರೀಖ್ ಒಂದು ಸೆಲ್ಫಿ ಫೋಟೋವನ್ನ ಸೋಶಿಯಲ್ ಮಿಡಿಯಾ ಸಾಗರದಲ್ಲಿ ತೇಲಿ ಬಿಡ್ತಾರೆ. ಒಂದೇ ದಿನ ಡಾಲಿ ಧನಂಜಯ್ ಜೊತೆ ಹಾಗೂ ಲೂಸ್ ಮಾದ ಯೋಗಿ ಜೊತೆ ಸೆಲ್ಫಿ ಕ್ಲಿಕಿಸಿಕೊಂಡು ಅಭಿಮಾನಿಗಳ ಮನದೊಳಗೆ ಕುಲ್ಫಿ ಕೊಶ್ಚನ್ ಮೂಡುವಂತೆ ಮಾಡ್ತಾರೆ..

‘‘ವಾಯುವಿಹಾರದಲ್ಲಿ ಸಿದ್ಲಿಂಗು, ವಿಹಾರದಲ್ಲಿ ನಾರಾಯಣ್ ಪಿಳ್ಳೈ.. ಒಂದೇ ದಿನ, ಎರಡು ಭೇಟಿ. ಹೊಸ ಪ್ರಯಾಣ.. — feeling motivated. ಎಂದು ಬರೆದು ಸೆಲ್ಫಿ ಫೋಟೋವನ್ನ ಪೋಸ್ಟ್​ ಮಾಡಿರುತ್ತಾರೆ ನಿರ್ದೇಶಕ ವಿಜಯ ಪ್ರಸಾದ್​.. ಯಾಕೆ ಇಬ್ಬರ ಜೊತೆಗಿದ್ದ ಸೆಲ್ಫಿ ಫೋಟೋವನ್ನ ಹಾಕಿ ಈ ರೀತಿ ಬರೆದಿದ್ದಾರೆ ಎಂದು ಪ್ರಶ್ನೆ ಉದ್ಭವಾಗಿ ಗಾಂಧಿನಗರದಲ್ಲಿ ಉತ್ತರಕ್ಕಾಗಿ ಹುಡುಕುತ್ತಿದ್ದಾಗ ಸಿಕ್ಕ ಉತ್ತರ ಸಿದ್ಲಿಂಗು-2..

ಡಾಲಿ-ಯೋಗಿ ಜೊತೆ ಸಿದ್ಲಿಂಗು-2 ಚಿತ್ರಕ್ಕೆ ಸ್ಕೇಚ್​​..!
ಅಂದಿನ ವಿಜಯ ಪ್ರಸಾದ್ ಸೆಲ್ಫಿ ರಹಸ್ಯ ಇದೇನಾ..?

ಸಿದ್ಲಿಂಗು.. 2012ರಲ್ಲಿ ತೆರೆಕಂಡ ಸಿನಿಮಾ.. ಮಂಗಳ ಟೀಚರ್ ಆಗಿ ಮೋಹಕ ತಾರೆ ರಮ್ಯಾ , ಬ್ಯಾಚುಲರ್ ಸಿದ್ಲಿಂಗು ಆಗಿ ಯೋಗೇಶ್ , ಅಂಡಳಮ್ಮನಾಗಿ ಸುಮನ್ ರಂಗನಾಥ್ , ರಂಗಮ್ಮನಾಗಿ ಗಿರಿಜಾ ಲೋಕೇಶ್ ಕಾಣಿಸಿಕೊಂಡಿದ್ದ ಸಿನಿಮಾ ಸಿದ್ಲಿಂಗು.. ಇವತ್ತಿಗೂ ಸಿದ್ಲಿಂಗು ಚಿತ್ರದ ಹಾಡು ಮತ್ತು ಕಾಮಿಡಿ ಜನಪ್ರಿಯ.. ಈಗ ಇದರ ಮುಂದುವರೆ ಭಾಗವನ್ನ ಯೋಚಿಸಿದ್ದಾರಂತೆ ವಿಜಯ ಪ್ರಸಾದ್​..

 

ಸಿರಿಯಲ್ ಲೋಕದಲ್ಲಿ ನೂರಾರು ಹಾಸ್ಯ ಸಂಚಿಕೆಗಳನ್ನ ಡೈರೆಕ್ಷನ್ ಮಾಡಿ ಸೈ ಅನ್ನಿಸಿಕೊಂಡಿದ್ದ ವಿಜಯ ಪ್ರಸಾದ್ ಸಿದ್ಲಿಂಗು ಚಿತ್ರದ ನಂತರ ನೀರ್ ದೋಸೆ ಮಾಡಿ ನಾಲ್ಕು ನಾಲ್ಕು ವರ್ಷ ಸಮಯ ಕಳೆದ್ರು.. ಹಂಗು ಹಿಂಗು ನೀರ್ ದೋಸೆ ಸಿನಿಮಾವನ್ನ ಮುಗಿಸಿ ಈಗ ಎರಡೇರಡು ಭಾಗಗಲ್ಲಿ ಬರಲಿರೋ ತೋತಾಪುರಿ ಸಿನಿಮಾದ ಜೊತೆಗೆ 30 ದಿನದಲ್ಲಿ ಪೆಟ್ರೋಮ್ಯಾಕ್ಸ್ ಸಿನಿಮಾವನ್ನು ಮಾಡಿ ಮುಗಿಸಿದ್ದಾರೆ.. ಈಗ ಹೊಸ ಸಿನಿಮಾದ ಬಗ್ಗೆ ಆಲೋಚಿಸಿರುವ ವಿಜಯ ಪ್ರಸಾದ್ ಸಿದ್ಲಿಂಗು ಸಿನಿಮಾದ ಸೀಕ್ವೇನ್ಸ್ ಬಗ್ಗೆ ಯೋಚಿಸಿದ್ದಾರಂತೆ..blank

ಸಿದ್ಲಿಂಗು ಸಿನಿಮಾದಲ್ಲಿ ಹಾಗೂ ಪರಿಮಳ ಲಾಡ್ಜ್ ಚಿತ್ರದಲ್ಲಿ ಯೋಗಿ ಜೊತೆ ಕೆಲ ಮಾಡಿದಾರೆ ವಿಜಯ ಪ್ರಸಾದ್.. ಜೊತೆಗೆ ತೋತಾಪುರಿ ಸಿನಿಮಾದಲ್ಲಿ ಡಾಲಿ ಧನಂಜಯ್ ಜೊತೆಗೂ ಕೆಲಸ ಮಾಡಿದ್ದಾರೆ.. ಈ ಯೋಗಿ ಮತ್ತು ಡಾಲಿಯನ್ನ ಸೇರಿಸಿಕೊಂಡು ಸಿದ್ಲಿಂಗು -2 ಚಿತ್ರವನ್ನ ಮಾಡೋ ಯೋಚನೆ ವಿಜಯ ಪ್ರಸಾದ್ ಅವರದಂತೆ. ಡಿಸೆಂಬರ್ ತಿಂಗಳಿನಿಂದ ಸಿದ್ಲಿಂಗು 2 ಸಿನಿಮಾ ಸೆಟ್ಟೇರೋ ಸಾಧ್ಯತೆ ಇದೆ.. ಈಗಾಗಲೇ ಹೆಡ್ ಬುಷ್ ಸಿನಿಮಾದಲ್ಲಿ ಡಾಲಿ ಜೊತೆ ಸ್ಕ್ರೀನ್ ಶೇರ್ ಮಾಡಿರೋ ಯೋಗಿ ಎರಡನೇ ಬಾರಿಗೆ ಒಟ್ಟಿಗೆ ನಟಿಸೋ ಚಾನ್ಸ್ ಸಿಕ್ಕರು ಸಿಗಬಹುದು.

blank

Source: newsfirstlive.com Source link