ಭಯ ಹುಟ್ಟಿಸ್ತಿದೆ ಹವಾನ ಸಿಂಡ್ರೋಮ್.. ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ ಕೊಟ್ಟ ಆಘಾತಕಾರಿ ವರದಿ

ಭಯ ಹುಟ್ಟಿಸ್ತಿದೆ ಹವಾನ ಸಿಂಡ್ರೋಮ್.. ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ ಕೊಟ್ಟ ಆಘಾತಕಾರಿ ವರದಿ

ಏನದು ಸದ್ದು ? ಯಾರಿಗೂ ಗೊತ್ತಾಗ್ತಾ ಇಲ್ಲ. ಎಲ್ಲಿಂದ ಬರ್ತಾ ಇದೆ, ಅದರ ಸುಳಿವೂ ಸಿಗ್ತಾ ಇಲ್ಲ. ಇದೇನಾದರೂ ಪ್ರಕೃತಿ ಮಾನವನಿಗೆ ಕೊಡಲು ಸಿದ್ದವಾಗ್ತಿರೋ ಹೊಸ ತೊಂದ್ರೆನಾ? ಅಥವಾ ವಿಶ್ವವನ್ನೇ ನಾಶ ಮಾಡಲು ಸಿದ್ದವಾಗಿರುವ ಹೊಸ ಯುದ್ಧ ತಂತ್ರನಾ ? ಇದೇನಾದರೂ ಜಗತ್ತನ್ನೇ ನಾಶ ಮಾಡುವ ಹೊಸ ಕಾಯಿಲೆನಾ? ಯಾವುದಕ್ಕೂ ಉತ್ತರ, ಯಾರಲ್ಲೂ ಇಲ್ಲ. ಆದರೆ ಈ ಅಚ್ಚರಿಯಿಂದ ಹಿಂಸೆಗೊಳಗಾಗಿ ಪ್ರಾಣ ಬಿಡ್ತಾ ಇರೋರು ಹಲವರು. ಮಾನಸಿಕವಾಗಿ ಹಿಂಸೆ ಅನುಭವಿಸುತ್ತಿರುವವರು ಅದೆಷ್ಟೋ ಜನ. ಏನಾಗ್ತಾ ಇದೆ..

ಇದೆ ಆ ಸದ್ದು.. ಹೀಗೆ ನಿಮ್ಮ ಕಿವಿಗೆ ಹಗಲು ರಾತ್ರಿ ಅನ್ನದೆ ಒಂದೇ ಸಮನೇ ಬೀಳ್ತಾ ಇದ್ರೆ ನಿಮಗೆ ಏನಾಗ ಬಹುದು ಊಹಿಸಿ. ಕೆಲುವೊಮ್ಮೆ ನೀವು ಈ ಸದ್ದನ್ನು ಕೇಳಿರುತ್ತಿರ. ಅದು 2 ನಿಮಿಷ ನಿಮ್ಮ ಕಿವಿಗೆ ಬಿದ್ದ ಹೋದ ಮೇಲೆ, ಮಿನಿಮಮ್ 5 ನಿಮಿಷಗಳಾದರೂ ಅದೆ ಗುಂಗಿನಲ್ಲಿರುತ್ತಿರ. ಆ ಕ್ಷಣ ನಿಮ್ಮ ತಲೆಯಲ್ಲಿ ಹಿಂಸೆಯ ಅನುಭವವನ್ನು ನೀವು ಗಮನಿಸಿರಬಹುದು. ಅದೇ ಈ ಸದ್ದು ದಿನವಿಡಿ ಬಿದ್ದರೆ ನಿಮ್ಮ ಕಿವಿಗಳಲ್ಲಿ ಭೀಕರ ನೋವು ಶುರುವಾಗುತ್ತೆ. ಅಲ್ಲಿಂದ ನೇರವಾಗಿ ನಿಮ್ಮ ತಲೆಯಲ್ಲಿ ಇದೆ ಸದ್ದು ಸುತ್ತಲು ಆರಂಭಿಸುತ್ತದೆ. ನಿಧಾನವಾಗಿ ತಲೆ ನೋವು, ಹಾಗೆ ದೇಹವೆಲ್ಲ ಹಿಂಸೆಗೆ ಸಿಲುಕಿ, ಕಣ್ಣುಗಳು ಮಂಜಾಗಿ ಮಂಪರಿನ ಅನುಭವ ಶುರುವಾಗುತ್ತದೆ. ಹಾಗೊಂದು ವೇಳೆ ನಿಮಗೆ ಈ ಅನುಭವ ಆಗ್ತಾ ಇದ್ರೆ ನೀವು ಕಾತರಿ ಮಾಡಿಕೊಳ್ಳಬೇಕು ನೀವು ಹವಾನ ಸಿಂಡ್ರೊಮ್ ನಲ್ಲಿ ಸಿಲುಕಿದ್ದಿರ ಅಂತ.

ಭಯ ಹುಟ್ಟಿಸ್ತಿದೆ ಹಿಂಸಾತ್ಮಕ ಹವಾನ ಸಿಂಡ್ರೋಮ್
ಕ್ಯೂಬಾ ದೇಶದ ಹವಾನದಲ್ಲಿ ಮೊದಲು ಕಾಣಿಸಿಕೊಂಡಿತ್ತು

2016ರಲ್ಲಿ ಅಮೆರಿಕಾದ ಕ್ಯೂಬಾದಲ್ಲಿ ಈ ಒಂದು ವಿಚಿತ್ರ ಅನುಭವ ಹವಾನದ ಕೆಲವು ನಗರವಾಸಿಗಳಲ್ಲಿ ಕಂಡಿದೆ. ಸಣ್ಣ ಮಟ್ಟಗಿನ ಉಲ್ಟಾಸೋನಿಕ್ ಸದ್ದು ಅಲ್ಲಿನ ಕೆಲವರಿಗೆ ದಿನವಿಡಿ ಹಿಂಬಾಲಿಸಿದೆ. ಯಾವುದೋ ವೈರಿಂಗ್ ಕೆಲಸ ನಡೆಯುತ್ತಿರಬೇಕು ಎಂದು ತಿಳಿದ ಅವರೆಲ್ಲ, ಸುಮ್ಮನಾಗಿದ್ದಾರೆ. ಆದರೆ ಅದು ದಿನ ಕಳೆದಂತೆ ಹೆಚ್ಚು ಹೆಚ್ಚು ಕೇಳಿಸಲು ಶುರುವಾಗಿತ್ತು. ವಾರವಾದರೂ ನಿಲ್ಲದೆ ಅಲ್ಲಿನ ಎಷ್ಟೊ ಜನ ತಲೆ ನೋವಿನ ಸಂಕಟಕ್ಕೆ ಒಳಗಾಗಿದ್ದಾರೆ. ಮಾನಸಿಕವಾಗಿ ಹಿಂಸೆಗೊಳಗಾಗಿದ್ದಾರೆ. ಮುಂದುವರೆದಂತೆ ಅದು ಕಿವಿ ಕೇಳದಂತಾಗಿ, ಮಂಪರು ಅನುಭವ ನೀಡಿ, ನಿದ್ದೆ ಗೆಡಿಸಿ ಕೊನೆಗೆ ಮರೆವು ಹೆಚ್ಚಾಗುವಂತೆ ಮಾಡಿದೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಎಷ್ಟೋ ಜನರಿಗೆ ಬ್ರೇನ್ ಡ್ಯಾಮೇಜ್ ಕೂಡ ಆಗಿರೋ ವರದಿ ಇದೆ.

2017 ರಲ್ಲಿ ಬೇಕಿಸ್ತಾನ್ ನಲ್ಲಿ ಕಾಣಿಸಿಕೊಂಡ ಅದೆ ಹವಾನ
2018 ರಲ್ಲಿ ಚೀನಾಗೆ ತಗುಲಿತ್ತು ಇದೆ ಸದ್ದಿನ ಕಾಯಿಲೆ

ಮೊದಲು ಕ್ಯೂಬಾದಲ್ಲಿ ವರದಿ ಆದಾಗ, ಅಲ್ಲಿನ ಪ್ರಜೆಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಅಮೆರಿಕಾದ ಡೊನಾಲ್ಡ್ ಟ್ರಂಪ್ ಅಧಿಕಾರದಲ್ಲಿದ್ದ ವೇಳೆ ಈ ಸದ್ದಿನ ಅನುಭವವಾಗುತ್ತಿದ್ದ ಎಲ್ಲರನ್ನು ಆ ಜಾಗದಿಂದ ತೆರುವು ಗೊಳಿಸಲಾಗಿತ್ತು. ಇದು ಮತ್ತೆ 2017 ರಲ್ಲಿ ಬೇಕಿಸ್ತಾನದಲ್ಲಿ ಅಮೆರಿಕಾದಿಂದ ಬಂದ ದಂಪತಿಯಲ್ಲಿ ಕಾಣಿಸಿಕೊಂಡಿತ್ತು. ಇದಾದ ಬಳಿಕ 2018 ಚೀನಾದಲ್ಲಿ ನೆಲೆಸಿದ್ದ ಅಮೆರಿಕನ್ನರಿಗೆ ಇದೆ ಅನುಭವ ಕಾಡಿದೆ. ಇಲ್ಲದವರಿಗೆ ನೇರವಾಗಿ ಬ್ರೇನ್ ಇಂಜ್ಯುರಿ ವರದಿಯಾಗಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಬೀಜಿಂಗ್ ಸರ್ಕಾರ ಇದು ನಿಜಕ್ಕೂ ಏನು ಎನ್ನುವುದರ ಅರಿವೂ ಕೂಡ ಇಲ್ಲ ಎಂದು ಹೇಳಿ ಕೈ ತೊಳೆದುಕೊಂಡಿತ್ತು. ಇದಾದ ಬಳಿಕ ವಿಶ್ವದಾದ್ಯಂತ 130 ಅಮೆರಿಕನ್ನರಲ್ಲಿ ಇದೆ ಹವಾನ ಸಿಂಡ್ರೋಮ್ ಬೇರೆ ಬೇರೆ ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿದೆ. ಅಲ್ಲದೆ ಕೇವಲ ಅಮೆರಿಕರನ್ನು ಮಾತ್ರವಲ್ಲ ಕ್ಯಾನಡದ ಪ್ರಜೆಗಳನ್ನು ಇದೆ ಸದ್ದು ಎಗ್ಗಿಲ್ಲದಂತೆ ಕಾಡಿದೆ.

ಈಗ ಆಸ್ಟ್ರಿಯಾದಲ್ಲಿ ಅತಿ ಹೆಚ್ಚು ಕೇಸ್‌ಗಳ ವರದಿ
ಜೋ ಬೈಡನ್ ಸರ್ಕಾರಕ್ಕೆ ತಲೆ ನೋವಾದ ಹವಾನ

ಹೌದು, ಇದು ಅಲ್ಲಿ ಇಲ್ಲಿ ಒಬ್ಬೊಬ್ಬರಿಗೆ ಕಾಣಿಸುತ್ತಿದ್ದ ಹವಾನ ಸಿಂಡ್ರೋಮ್, 2021 ರಲ್ಲಿ ಅತಿ ಹೆಚ್ಚು ವರದಿಯಾಗುತ್ತಿದೆ. ಅದರಲ್ಲೂ ಆಸ್ಟ್ರಿಯಾದಲ್ಲಿ ನೆಲೆಸಿದ್ದ ಅಮೆರಿಕನ್ನ ನಾಗರೀಕರಲ್ಲಿ 20 ಹೊಸ ಕೇಸ್ ಗಳು ಕಾಣಿಸಿದ್ದು ಜೊ ಬೈಡನ್ ಅವನ್ನು ಚಿಂತೆ ಗೀಡು ಮಾಡಿದೆ. ಅದರಲ್ಲೂ ಆಸ್ಟ್ರಿಯಾದ ವಿಯನ್ನಾವನ್ನು ಹವಾನ ಸಿಂಡ್ರೋಮ್ ನ ಹೊಸ ಹಾಟ್ ಸ್ಪಾಟ್ ಎನ್ನಾಲಾಗ್ತ ಇದೆ. ಹಾಗಾದ್ರೆ ನಿಜಕ್ಕೂ ಇಲ್ಲಿ ಏನಾಗ್ತಾ ಇದೆ ? ಎಲ್ಲಿಂದ ಬರ್ತಾ ಇರೋ ಸದ್ದು ? ಇವೆಲ್ಲ ಪ್ರಶ್ನೆಗಳು ಅಮೆರಿಕಾದ ತಜ್ಞರಿಗೆ ಕಾಡ್ತಾ ಇದೆ.

ಮಾನಸಿಕವಾಗಿ ಎಲ್ಲರನ್ನು ಕುಗ್ಗಿಸುವ ಹೊಸ ತಂತ್ರನಾ ?
ಈ ಸಿಂಡ್ರೋಮ್ ಆಧುನಿಕ ಯುದ್ಧ ಸಾಮಾಗ್ರಿ ಆಗಿರಬಹುದು

ಆ ಸದ್ದು ನಿಜಕ್ಕೂ ಕಾಡದೆ ಬಿಡದು. ಒಂದೆ ಸಮನೆ ಕೇಳಿ ಕೇಳಿ ಎಲ್ಲರೂ ಮಾನಸಿಕವಾಗಿ ಸೋಲುತ್ತಿದ್ದಾರೆ. ಇದರಿಂದ ದಿನನಿತ್ಯದ ಕೆಲಸಗಳನ್ನು ಸರಿಯಾಗಿ ಮಾಡಲು ಆಗುತ್ತಿಲ್ಲ. ಇದೆ ಸಿಂಡ್ರೋಮ್ ಆಧುನಿಕ ಯುದ್ಧ ತಂತ್ರವಿರ ಬಹುದು, ಒಂದು ದೇಶವನ್ನು ಹೀಗೂ ನಾಶ ಮಾಡಿಬಿಡಬಹುದು ಎನ್ನುವ ಹೊಸ ಪ್ಲಾನ್ ಇರಬಹುದು. ಈ ಯೋಚನೆಗಳೆಲ್ಲ ಹುಟ್ಟಿಕೊಂಡಿದ್ದು ಆಸ್ಟ್ರಿಯಾದ ವಿಯನ್ನಾದಲ್ಲಿ ಅತಿ ಹೆಚ್ಚು ಕೇಸ್ ಗಳು ಕಾಣಿಸಿಕೊಂಡಾಗ. ವಿಯನ್ನಾ ವಿಶ್ವದ ಅತಿ ಹೆಚ್ಚು ಸ್ಪೈಗಳನ್ನು ಹೊಂದಿರುವ ದೇಶ. ಇಲ್ಲಿ ಚೀನಾ ಹಾಗೂ ರಷ್ಯಾದಿಂದ ಹಲವು ಸ್ಪೈಗಳು ನೆಲೆಸಿದ್ದಾರೆ. ಹಲವು ಅಮೆರಿಕನ್ನರು ಟಾರ್ಗೆಟ್ ಆಗುತ್ತಿರುವುದನ್ನು ನೋಡಿದರೆ, ಇದನ್ನು ಯುದ್ಧ ಸಾಮಗ್ರಿಯ ಪ್ರಯೋಗ ಎನ್ನುವ ಅನುಮಾನಗಳು ಅಮೆರಿಕಾದ ವೈಟ್ ಹೌಸ್ ನಲ್ಲಿ ಚರ್ಚೆಯಾಗುತ್ತಿದೆ. ಆದರೆ ಇದಕ್ಕೆ ತಕ್ಕಂತ ಪುರಾವೆಗಳು ಸಿಗುತ್ತಿಲ್ಲ. ಈ ಸಿಂಡ್ರೋಮ್ ಹಿಂದಿನ ವಿಜ್ಞಾನ ಏನು ಹೇಳುತ್ತೆ ಗೊತ್ತಾ ?

ಹಲವು ವಿಶ್ವವಿದ್ಯಾಲಯಗಳಿಂದ ನಿರಂತರ ಅಧ್ಯಯನ
ಅಮೆರಿಕ ಟಾರ್ಗೆಟ್ ಆಗುತ್ತಿದ್ದರೂ ಸುಮ್ಮನಿರುವುದೇಕೆ ?

ಈ ಸದ್ದು ಎಲ್ಲಿಂದ ಬರುತ್ತಿರಬಹುದು, ಇದಕ್ಕೆಲ್ಲ ಕಾರಣ ಏನಾಗಿರಬಹುದು ಎನ್ನುವುದನ್ನು ಹಲವು ವಿಶ್ವವಿದ್ಯಾಲಯದ ಸಂಶೋಧಕರು ಅಧ್ಯಯನ ನಡೆಸುತ್ತಿದ್ದಾರೆ. ಅಲ್ಲಿಂದ ಬಂದ ಯಾವ ವರದಿಗಳು ಕೂಡ ಅಮೆರಿಕ ಅಧ್ಯಕ್ಷನ ಮನವೊಲಿಸಲಿಲ್ಲ. ಅಲ್ಲದೆ ಸಾಲು ಸಾಲಾಗಿ ಅಮೆರಿಕನ್ನರೆ ಈ ಒಂದು ಸಮಸ್ಯೆಗೆ ಹೆಚ್ಚು ತುತ್ತಾಗುತ್ತಿರುವುದು., ಅಲ್ಲಿನ ಜನರಲ್ಲಿ ಗಾಬರಿ ಉಂಟು ಮಾಡಿದೆ. ಈ ವಿಷಯ ಸಂಭಂಧ ಅಮೆರಿಕಾ ಯಾವ ದೇಶವನ್ನು ಬೆರಳು ಮಾಡಿ ತೋರಿಸುತ್ತಿಲ್ಲ. ಎಲ್ಲ ಅಧ್ಯಯನ ಮಾಡುವ ಸಂಶೋದಕರ ಕೈಗೆ ಒಪ್ಪಿಸಿ, ಆದಷ್ಟು ಬೇಗ ಈ ಸಮಸ್ಯೆಗೆ ಉಪಾಯವನ್ನು ಹಾಗೂ ಮೂಲವನ್ನು ತಿಳಿಸಲು ಕೇಳಿದ್ದಾರೆ.

ಯೂನಿವರ್ಸಿಟಿ ಆಫ್ ಮಿಚಿಗನ್ ಹೇಳಿದ ಕಾರಣ !
2018ರಲ್ಲಿ ಯ್ಯುನಿವರ್ಸಿಟಿ ಆಫ್ ಮಿಚಿಗಾನ್ ಕ್ಯೂಬಾದಲ್ಲಿ ಕೇಳಿಸುತ್ತಿರುವ ಸದ್ದು, ಕ್ಯೂಬಾ ದೇಶದ ಕಾವಲು ಪಡೆ ಇಟ್ಟಿರುವ ಕಾವಲಾಸ್ತ್ರಗಳು ಈ ರೀತಿ ಅಲ್ಟ್ರಾ ಸೋನಿಕ್ ಸದ್ದುಗಳು ಹರಿದು ಬಿಡುತ್ತಿದೆ. ಇದೆ ಕಾರಣ ಈ ಸದ್ದು ಕೆಲವು ಸೂಕ್ಷ್ಮ ನಾಗರೀಕರಿಗೆ ಇದು ಕೇಳಿಸುತ್ತಿದೆ ಎಂದಿದ್ದರು. ಆದರೆ ಇದು ಕ್ಯೂಬಾ ದೇಶ ಬಿಟ್ಟು ಹೊರಗೆ ಕಾಣಿಸಿದಾಗ ಈ ವರದಿ ಸುಳ್ಳೆಂದು ಒಪ್ಪುವಂತಾಯ್ತು.

ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯ ಹೇಳಿದ ಕಾರಣ!
ಕ್ಯೂಬಾ ಹಾಗೂ ಇನ್ನಿತರ ದೇಶಗಳಲ್ಲಿ ವರದಿಯಾಗುತ್ತಿರುವ ಈ ಒಂದು ಸದ್ದು ಕೇವಲ ರಾತ್ರಿ ಹೊತ್ತು ಸದ್ದು ಮಾಡುವ ಕಾಡಿನ ಕೀಟದಿಂದ ಬರುತ್ತಿರುವುದು ಎನ್ನುವ ಕಾರಣ ನೀಡಿದೆ. ಆದರೆ ಕೀಟದ ಸದ್ದಿಗೆ ಮಾನಸಿಕವಾಗಿ ಹಿಂಸೆಗೊಳಗಿದ್ದಾರೆ ಎನ್ನುವುದು ವೈಟ್ ಹೌಸ್ ಅಧ್ಯಕ್ಷನಿಗೆ ನಂಬಲಾಗದ ವಿಷಯವಾಗಿತ್ತು. ಇದರಿಂದ ಈ ವರದಿಯನ್ನು ನಿರಾಕರಿಸಿಬಿಟ್ಟರು.

ಯೂನಿವರ್ಸಿಟಿ ಆಫ್ ಕೆನಡಾ ಹೇಳಿದ ಕಾರಣ!
ಕೆನಡಾ ವಿಶ್ವವಿದ್ಯಾಲಯದವರು ಕೊಟ್ಟ ಕಾರಣ ವೈಜ್ಞಾನಿಕವಾಗಿ ಸಾಮ್ಯತೆ ತೊರುತ್ತಿತ್ತು. ಅವರ ಪ್ರಕಾರ ಕ್ಯೂಬಾ ಜೀಕಾ ವೈರಸ್ ಬಂದಾಗ ಇಡೀ ದೇಶಕ್ಕೆ ಕೆಮಿಕಲ್ ಹಾಗೂ ಪೆಸ್ಟಿಸೈಡ್ಸ್ ಗಳನ್ನು ಸಿಂಪಡಿಸಿದ್ದರು. ಈ ಕಾರಣದಿಂದ ಕೆಮಿಕಲ್ ರಿಯಾಕ್ಷನ್ ಗಳಿಂದ ದೇಹದಲ್ಲೆ ಹುಟ್ಟಿಕೊಂಡಿರುವ ತೊಂದರೆ ಇದು ಎಂದಿದ್ದರು. ಮೊದಲ ಹಂತದಲ್ಲಿ ಇದು ನಿಜ ಎನಿಸಿದ್ದರು, ಕಾಲ ಕಳೆದಂತೆ ಈ ವರದಿಯನ್ನು ಹಲವು ವಿಶ್ಲೇಶಕರು ಒಪ್ಪಲಿಲ್ಲ.

ಮಾಸ್ ಹಿಸ್ಟೀರಿಯಾ ಇನ್ನೊಂದು ಕಾರಣ
ಮಾಸ್ ಹಿಸ್ಟೀರಿಯಾ ಅನ್ನೋದು ಇನ್ನೊಂದು ಕಾರಣ. ಏನಿದು ಮಾಸ್ ಹಿಸ್ಟೀರಿಯಾ? ಇದೊಂದು ಮಾನಸಿಕ ರೋಗ. ಅಂದ್ರೆ ಒಬ್ಬ ವ್ಯಕ್ತಿ ತನಗೆ ಏನೋ ಸದ್ದು ಕೇಳಿಸುತ್ತಿದೆ ಎಂದು ಹೇಳಿ ಹೇಳಿ, ಅವನ ಸುತ್ತಮುತ್ತಲಿನ ಗುಂಪಿಗೂ ಹಾಗೊಂದು ಸದ್ದು ಇರಬಹುದು ಎನ್ನುವ ಭಾವನೆ ಮೂಡಿ, ಅದೆ ಭಾವನೆಯನ್ನು ಎಲ್ಲರಿಗೂ ಹರಡುತ್ತಾನೆ. ಇದರಿಂದ ಅಲ್ಲಿ ಯಾವ ಸದ್ದು ಇಲ್ಲದ್ದಿದ್ದರು, ಹಾಗೊಂದು ಸದ್ದು ಇದೆ ಎನ್ನುವ ಊಹೆಯಲ್ಲೆ ಎಲ್ಲರು ಅದನ್ನು ನಿಜ ಎಂದು ನಂಬಿ.. ಹೆದರಿ ಹೌದು ಎಂದು ತಿಳಿದು ಮಾನಸಿಕವಾಗಿ ಹುಚ್ಚಾರಾಗಿ ಬಿಡ್ತಾರೆ. ಹವಾನ ಸಿಂಡ್ರೋಮ್ ಸಹ ಹೀಗೆ ಮಾಸ್ ಹಿಸ್ಟೀರಿಯಾ ಇರಬಹುದು ಎಂದು ಕೆಲ ತಜ್ಞರು ಹೇಳುತ್ತಿದ್ದಾರೆ.

ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ ಕೊಟ್ಟ ಆಘಾತಕಾರಿ ವರದಿ
ಇದು ಯುದ್ಧದ ಸೂಚನೆ ಎಂದು ಎಚ್ಚರಿಕೆ ನೀಡಿರುವ ಸಂಶೋಧಕರು

ಕಳೆದ ವರ್ಷ ನ್ಯಾಷನಲ್ ಅಕ್ಯಾಡಮಿ ಆಫ್ ಸೈನ್ಸ್ ಈ ಹವಾನವನ್ನು ಪರಿಶೀಲಿಸಿದಾಗ ಇದೊಂದು ಹೊಸ ರೀತಿಯ ಯುದ್ಧ ಮಾಡುವ ವಿಧಾನ ಎನ್ನುವ ಆಘಾತಕಾರಿ ಸುದ್ಧಿಯೊಂದನ್ನು ಹೊರಡಿಸಿದ್ದರು. ಇದರಲ್ಲಿ ಮೈಕ್ರೋ ವೇವ್ ಶಸ್ತ್ರಾಸ್ತ್ರಾಗಳನ್ನು ಬಳಸಿ ಇಡಿ ರಾಷ್ಟ್ರಗಳ ಜನರ ತಲೆಯನ್ನು ಕೆಡಿಸಿ, ಬೆಳವಣಿಗೆಯಲ್ಲಿ ಕುಂಟಿತಗೊಳಿಸುವ ಹೊಸ ಯುದ್ಧ ವಿಧಾನವಿದು ಎಂದು ಹೇಳುತ್ತಿದ್ದಾರೆ. ಇದಕ್ಕೆ ಕಾರಣ, ನ್ಯಾಷನಲ್ ಅಕ್ಯಾಡಮಿ ಆಫ್ ಸೈನ್ಸ್ ಅಧ್ಯಯನ ಮಾಡುವಾಗ, ಅಣುಗಳಷ್ಟು ಗಾತ್ರವಿರುವ ಕೆಲವು ಮೈಕ್ರೋ ಲೇಸರ್ ರೀತಿಯ ವೇವ್ ಗಳು ಗೈನೋಮೀಟರ್ ಗಳಲ್ಲಿ ಕಾಣಿಸಿಕೊಂಡಿವೆ. ಇದರಿಂದ ಹವಾನ ಎನ್ನುವುದು ಒಂದು ರಾಷ್ಟ್ರದವನ್ನು ಮಾನಸಿಕವಾಗಿ ನಾಶ ಮಾಡುವ ವೆಪೆನ್ ಎಂದು ಹೇಳುತ್ತಿದ್ದಾರೆ.

ಹೀಗೆ ಮೈಕ್ರೋ ವೇವ್ ವೆಪನ್ ಗಳು ಮೊದಲಿಗೆ ಕಂಡು ಬಂದಿದ್ದು ರಷ್ಯಾದಲ್ಲಿ. ಅಂದರೆ ಎಲ್ಲದಕ್ಕೂ ಮೂಲ ರಷ್ಯಾ ಎನ್ನುವ ಮಾತುಗಳು ಮುಂದಾಗಿವೆ. ಹೀಗೆ ವಿವಿಧ ದೇಶಗಳಲ್ಲಿ ಕೇವಲ ಅಮೆರಿಕನ್ನರನ್ನೆ ಕಾಡುತ್ತಿರುವ ಈ ಸಿಂಡ್ರೋಮ್, ನಿಜಕ್ಕೂ ವೈಜ್ಞಾನಿಕ ಜಗತ್ತಿಗೆ ದೊಡ್ಡ ಪ್ರಶ್ನೆಯಾಗಿ ಉಳಿದಿದೆ. ಅಮೆರಿಕ ಸರ್ಕಾರ ಈ ಕಾಯಿಲೆಯ ಹಿಂದೆ ಬಿದ್ದಿದ್ದಾರೆ. ಇದು ಒಂದು ದೇಶದ ಕುತಂತ್ರ ಎನ್ನುವುದ ತಿಳಿದು ಬಂದರೆ ನಿಜಕ್ಕೂ ಮಾನವೀಯ ಮೌಲ್ಯಗಳನ್ನು ಬಿಟ್ಟ ಯೋಚನೆ ಎಂದು ಜಗತ್ತಿನ ಎದುರು ತಲೆ ಭಾಗಬೇಕಾಗುತ್ತದೆ.
ಹವಾನ ತನ್ನ ಭೀಕರತೆಯನ್ನು ಅಮೆರಿಕನ್ನರನ್ನು ಬಿಡದೆ ಹಿಂಸಿಸುತ್ತಿದೆ. ಇದನ್ನು ಮಟ್ಟ ಹಾಕಲು ಶ್ರಮ ವಹಿಸುತ್ತಿದ್ದರು, ಇದಕ್ಕೆ ಕಾರಣವಾಗಲಿ, ಅಥವ ಪರಿಹಾರವಾಗಿಲಿ ಇನ್ನು ಸಿಕ್ಕಿಲ್ಲ. ಇದರ ಮೂಲ ಹುಡುಕಿದರೇ ಮಾತ್ರ ಎಲ್ಲದಕ್ಕೂ ಉತ್ತರ ಸಿಗುವುದು.

Source: newsfirstlive.com Source link