ನೀರು ಶುದ್ಧೀಕರಣಕ್ಕೆ ಗೋವಿನ ಉಪಾಯ..!

ನೀರು ಶುದ್ಧೀಕರಣಕ್ಕೆ ಗೋವಿನ ಉಪಾಯ..!

ಜಗತ್ತಿನಲ್ಲಿ ಯಾವುದೆ ತೊಂದರೆ ಇರಲಿ, ಪ್ರಾಕೃತಿಕವಾಗಿ ಆ ತೊಂದರೆಗೆ ಪರಿಹಾರ ಇರುತ್ತೆ ಅನ್ನೋದು ನಿಮಗೆ ಗೊತ್ತಾ ? ಹೌದು, ನೀವು ಇದನ್ನು ಯೋಚಿಸಿ ನೋಡಿ. ಈದಕ್ಕೆ ಪೂರಕವಾಗುವಂತೆ ನಾವೊಂದು ವಿಷಯದ ಬಗ್ಗೆ ಹೇಳ್ತಿವಿ. ಕಲುಷಿತ ನೀರಿನ ಶುದ್ಧಿಕರಣ. ಬೆಂಗಳೂರಿನಲ್ಲಿ ಈ ಒಂದು ಸಮಸ್ಯೆ ಹೆಚ್ಚಾಗೆ ಇದೆ. ಆದ್ರೆ ಅದಕ್ಕೆ ಪರಿಹಾರವಾಗಿ ಸಿಕ್ಕಿರುವ ಪ್ರಾಕೃತಿಕ ರೂಪ ಹಸು.

ಇಟ್ಟರೆ ಸಗಣಿ ಆದೆ, ತಟ್ಟಿದರೇ ಕುರುಳಾದೆ, ಸುಟ್ಟರೆ ನುಸುಳಿಗೆ ವಿಭೂತಿ ಆದೆ ಅನ್ನುವ ಈ ಪದ್ಯ ಒಂದು ಹಸುವಿನ ತ್ಯಾಗಮಯಿ ಜೀವನವನ್ನು ಹೇಳುತ್ತೆ. ಹಸು ಬದುಕಿದ್ದಾಗಲೂ ಸತ್ತ ನಂತರವೂ ಮನುಷ್ಯನಿಗೆ ಅತಿಹೆಚ್ಚು ಉಪಯೋಗ ಕೊಡುವಂತ ಪ್ರಾಣಿ. ಇದೇ ಹಸುವಿನ ಜೀವನ ಶೈಲಿಯನ್ನು ಅನುಕರಣೆ ಮಾಡಿದರೆ ನಾವು ಅದೆಷ್ಟೋ ಪಾಠಗಳನ್ನು ಕಲಿಯೋಕೆ ಸಾಧ್ಯವಿದೆ. ಗೋವು ಆರೋಗ್ಯವಾಗಿರಲು ಹಾಲು ನೀಡುತ್ತೆ ಅನ್ನೋದು ಮೇಲ್ನೋಟಕ್ಕೆ ಸರಿ. ಆದರೆ ಗೋವಿನ ಪ್ರತಿ ಅಂಶವೂ ಜಗತ್ತಿಗೆ ಆ ಜೀವಿ ನೀಡುತ್ತಿರುವ ಕೊಡುಗೆ. ಹಸುವಿನಿಂದ ಹೋರಬರುವ ಹಾಲಾಗಲಿ, ಸಗಣಿಯಾಗಲಿ ಗಂಜಲವಾಗಲಿ ನೈಸರ್ಗಿಕವಾಗಿ ಅದು ಆರೋಗ್ಯಕರ. ಹಾಗೆ ಹಸುವಿನಿಂದ ಇನ್ನೋಂದು ಅಂಶವನ್ನು ನಾವು ಅಳವಡಿಸಿಕೊಂಡರೇ.. ಜಗತ್ತು ಯಾವ ವಿಷಯದಿಂದ ಹೆಚ್ಚು ತೊಂದರೆ ಅನುಭವಿಸುತ್ತಿದೆಯೋ, ಅದನ್ನು ಸುಲಭವಾಗಿ ನಿವಾರಿಸಿಕೊಳ್ಳಬಹುದು.

ಒಂದು ಸುಂದರ ನಗರ ಅಂದ್ರೆ ನಮಗೆ ಏನೆಲ್ಲ ನೆನಪಾಗುತ್ತೆ ? ಸುಸಜ್ಜಿತ ರಸ್ತೆ, ಸ್ವಚ್ಚಾವಾಗಿರುವ ಸ್ಥಳಗಳು, ರಸ್ತೆ ಉದ್ದಕ್ಕೂ ಗಿಡ ಮರಗಳು ಇವೆಲ್ಲದಕ್ಕೂ ಇನ್ನಷ್ಟು ಆಕರ್ಷಣೆ ನೀಡುವಂತೆ ಊರಿನ ಉದ್ದಗಲಕ್ಕೂ ಹರಿಯುವ ನದಿ ಇದ್ದರೆ ಹೇಗಿರುತ್ತೆ? ಊಹಿಸಿ. ನಮ್ಮ ಬೆಂಗಳೂರು ನಗರ ಹೀಗೆ ಇತ್ತು. ರಸ್ತೆಗಳೆಲ್ಲ ಅಚ್ಚುಕಟ್ಟಾಗಿತ್ತು, ಹಾಗೆ ಇಡಿ ಬೆಂಗಳೂರು ನಗರವನ್ನು ಸುತ್ತುವರೆದ ವೃಷಾಭವತಿ ನದಿ ಸ್ಪಟಿಕದ ಹರಳಂತೆ ಹೊಳೆಯುವ ನದಿಯಾಗಿತ್ತು. ಬೆಂಗಳೂರಿನ ದೊಡ್ಡ ಗಣೇಶನ ದೇವಸ್ಥಾನದ ಹಿಂದಿನಿಂದ ಹೊರಡುತ್ತಿದ್ದ ವೃಷಭಾವತಿ ನದಿ ಬೆಂಗಳೂರಿಗರ ದಾಹಾ ಆರಿಸಿ, ಮೈಸೂರು ರಸ್ತೆ ಮೂಲಕ ಹಾದು ಹೋಗಿ ಕಾವೇರಿಯಲ್ಲಿ ಸಂಗಮವಾಗುತ್ತಿತ್ತು. ಆದರೆ ಈಗ ಆ ನದಿಯ ಪರಿಸ್ಥಿತಿ ಹೇಳ ತೀರದಾಗಿದೆ. ಇಡಿ ನಗರದ ಎಲ್ಲ ವಿಷಪೂರಿತ ನೀರು ಆ ವೃಷಾಭತಿಯ ಒಡಲಿಗೆ ಸೇರಿ ಸಂಪೂರ್ಣ ಅಪವಿತ್ರವಾಗಿ ಹೋಗಿದೆ.

ಹಾಗೆ ಒಮ್ಮೆ ಯೋಚಿಸಿ ನೋಡಿ, ಆಫ್ರಿಕದಲ್ಲಿ ಹರಿಯುವ ವಿಶ್ವದ ಬಹುದೊಡ್ಡ ನದಿ ನೈಲ್. ಇದು ಹಲವು ನಗರಗಳನ್ನು ಹಾದು ಹೋಗಿ ಸಮುದ್ರ ಸೇರುತ್ತದೆ. ಈ ನದಿ ಹರಿಯುವ ನಗರಗಳು ಎಷ್ಟೂ ಸುಂದರವಾಗಿ, ಆಕರ್ಷಿತವಾಗಿ, ಕಣ್ಮನ ಸೆಳೆಯುತ್ತದೆ. ಈ ನದಿಯ ತಟದಲ್ಲಿ ಮಕ್ಕಳು ಆಡುವುದು ಇದೆ. ಇಂದು ವೃಷಾಭವತಿ ನದಿ ಜೀವಂತವಾಗಿದ್ದಿದ್ದರೆ ಬೆಂಗಳೂರಿನಲ್ಲೂ ಸಹ ಒಂದು ಸುಂದರ ನದಿಯ ದಂಡೆ ಕಾಣಬಹುದಿತ್ತು. ಈ ಜಂಜಾಟದ ನಡುವೆಯೂ ವೃಷಾಭವತಿ ನದಿಯ ಕಲರವ ನಮ್ಮನ್ನು ತನ್ಮಯಗೊಳಿಸುತ್ತಿತ್ತು. ಆದರೆ ಇಂದು ಆ ನದಿ ಹರಿಯುವ ಜಾಗದಲ್ಲೆಲ್ಲ, ಕೆಟ್ಟ ವಾಸನೆ ಸೂಸುವ ಕೆಂಗೇರಿ ಮೋರಿ ಎಂದೆ ಹೆಸರುವಾಸಿ ಆಗಿರುವ ಕಲುಷಿತ ನೀರು ಭೋರ್ಗರೆದು ಹರಿಯುತ್ತಿದೆ. ಇನ್ನು ಕೆಲುವು ಕಡೆ ಈ ನೀರು ಸಂಸ್ಕರಣೆ ಆಗದೆ ನೊರೆ ಹುಟ್ಟಿ ನಿಂತಿರುವುದು ನೋಡಿದ್ದೆವೆ. ಇದೆ ಮುಂದುವರೆದರೆ, ಈ ನೀರಿನಲ್ಲಿ ಬೆಂಕಿ ಹತ್ತಿ ಇನ್ನೊಂದು ಅವಗಢ ಸಂಭವಿಸಬಹುದು.

ಒಂದು ನಗರದಿಂದ ಅದೆಷ್ಟೇ ಕಲುಷಿತ ನೀರು ಹಾದು ಹೋದರು, ಅದನ್ನು ಶುದ್ಧಿಕರಣ ಮಾಡಿ ಬಿಡುವುದು ಸರ್ಕಾರದ ಜವಾಬ್ದಾರಿ. ಅದರಂತೆ ಬೆಂಗಳೂರಿನ ಈ ನದಿಯನ್ನು ಮರು ಶುದ್ಧಿಕರಣ ಮಾಡಲ ಒಂದು ಶುದ್ಧಿಕರಣ ಘಟಕ ಇದೆ. ಇಡಿ ನಗರದ ಅಶುದ್ಧ ನೀರು ಒಮ್ಮೆಲೇ ರಚ್ಚನ್ನು ಬೇರ್ಪಡಿಸಿ, ಕೆಮಕಲ್ಸ್ ಬಳಸಿ ಶುದ್ಧ ಮಾಡುವುದು. ಎಷ್ಟು ಕಷ್ಟದ ಕೆಲಸವಿರ ಬಹುದು ಯೋಚಿಸಿ. ಇನ್ನು ಬೇರೆ ಬೇರೆ ನಗರಗಳಲ್ಲಿ ಹೀಗೆ ಸ್ವಚ್ಚವಿರುವ ನೀರಿಗೂ ವೃಷಾಭವತಿಗೆ ಬಂದೊದಗೊದ ಪರಿಸ್ಥಿತಿ ಬರಬಹುದಲ್ಲಾವೇ ? . ಹಾಗಾದರೆ ಇದಕ್ಕೆ ಪರಿಹಾರವೇ ಇಲ್ವಾ ? ಇದೆ… ಈ ಒಂದು ತೊಂದರೆಗೆ ಪ್ರಕೃತಿಯ ಬಳಿಯೇ ಪರಿಹಾರವಿದೆ. ನಮಗೆ ಹಸಿದಾಗ ಹಾಲನ್ನು ಕೊಟ್ಟು ಪೋಷಿಸಿದ ಗೋವು ಶುದ್ಧಿಕರಣದ ಬಗ್ಗೆಯೂ ಪಾಠ ಹೇಳುತ್ತೆ. ಅದನ್ನು ಅನುಕರಣೆ ಮಾಡಿದರೆ ಸಾಕು, ಈ ತೊಂದರೆಯಿಂದ ಮುಕ್ತರಾಗ ಬಹುದು. ಇದನ್ನೆ ಜೈವಿಕ ಅನುಕರಣೆ ಅನ್ನಬಹುದು.

ಜೈವಿಕ ಅನುಕರಣೆ ಅಂದರೇನು ?

ನಾವು ಈಗಾಗಲೇ ಹೇಳಿದಂತೆ ಪ್ರಪಂಚದ ಎಲ್ಲ ತೊಂದರೆಗೂ ನೈಸರ್ಗಿಕವಾದ ಸೆಲ್ಯೂಷನ್ ಇದೆ. ಅಂದ್ರೆ ಮಾನವ ಅರಿಯದೆ ಮಾಡಿರುವ ತಪ್ಪನ್ನು, ತಿದ್ದಿಕೊಳ್ಳಲು ಪ್ರಕೃತಿ ತನ್ನೋಳಗೆ ಪಾಠವನ್ನು ಅಡಗಿಸಿಟ್ಟಿರುತ್ತೆ. ಅಥವಾ ನಿಮಗೆ ಯಾವುದಾದರೂ ವಿಷಯವಾಗಿ ಗೊಂದಲವಿದ್ದರೆ ಅದಕ್ಕೆ ಉತ್ತರ ಪ್ರಕೃತಿಯೇ ನೀಡುತ್ತೆ. ಉದಾಹರಣೆಗೆ ಹೇಳಬೇಕೆಂದರೆ, ಪ್ರಪಂಚದ ಅತ್ಯಾಧುನಿಕ, ಅತಿ ವೇಗವಾಗಿ ಚಲಿಸುವ ಬುಲೆಟ್ ಟ್ರೈನ್. ಇದು ಸದ್ದಿಲ್ಲದ ಹಾಗೆ ಹಾದು ಹೋಗಿರುತ್ತೆ. ಆದರೆ ಇದು ಪರಿಕ್ಷಾ ಹಂತದಲ್ಲಿದ್ದಾಗ, ಟ್ರೈನ್ ಓಡುವಾಗ ಬಹಳ ಸದ್ದು ಮಾಡುತ್ತಿತ್ತು.

ಇದನ್ನು ನಿಲ್ಲಿಸಲು, ವಿಜ್ಞಾನ, ತಂತ್ರಜ್ಞಾನವನ್ನು ಉಪಯೋಗಿಸಿದರೂ, ಪರಿಹಾರವೇ ಸಿಗಲಿಲ್ಲ. ಆಗ ತಜ್ಙರಿಗೆ ಹೊಳೇದ ಉಪಾಯವೇ, ಜೈವಿಕ ಅನುಕರಣೆ. ಆಕಾಶದೆತ್ತರದಲ್ಲಿ ಬಹುವೇಗವಾಗಿ ಹಾರಾಡುವ ಪಕ್ಷಿಯನ್ನು ಗುರುತಿಸಲಾಯಿತು. ಅದೆ ಮಿಂಚುಳ್ಳೀ ಪಕ್ಷಿ. ಆ ಪಕ್ಷಿಯ ಕೊಕ್ಕಿನ ಆಕಾರವನ್ನು ಗಮನಿಸಿದರು. ಕೇವಲ ಅದರ ಆಕಾರವನ್ನು ಅನುಕರಣೆ ಮಾಡಿ ಬುಲೆಟ್ ಟ್ರೈನ್ ಮುಂಬಾಗವನ್ನು ಅದರಂತೆ ಡಿಸೈನ್ ಮಾಡಿದಾಗ.. ಸದ್ದಿಲ್ಲದ ಬುಲೆಟ್ ಟ್ರೈನ್ ಇಂದಿಗೂ ಸಂಚರಿಸುತ್ತಿದೆ. ಇದೇ ನೋಡಿ ಜೈವಿಕ ಅನುಕರಣೆ ಅಂದ್ರೆ. ಹೀಗೆ ಅದೆಷ್ಟೋ ಉಪಾಯಗಳೂ ಜೈವಿಕ ಅನುಕರಣೆಯಿಂದ ನಮ್ಮ ಪಾಲಾಗಿ ಇಂದಿಗೂ ನಮ್ಮ ಜೊತೆಯಲ್ಲೆ ಇದೆ. ಇದಕ್ಕೆ ಪ್ರತ್ಯೇಕವಾಗಿ ಜೈವಿಕ ಶಾಸ್ತ್ರ ಎನ್ನವ ವಿಷಯವನ್ನು ಭೋದಿಸುವ ಹಲವು ವಿಶ್ವವಿದ್ಯಾಲಯಗಳು ಕೂಡ ಇವೆ.

ಹೀಗೆ ನೋಡಿ, ಒಂದು ಸಮಸ್ಯೆಯನ್ನು ನಿವಾರಿಸ ಬೇಕೆಂದರೆ, ಅದಕ್ಕೆ ತಕ್ಕ ಅಧ್ಯಯನ ಮಾಡಿ, ಆ ವಿಚಾರವಾಗಿ ಹೆಚ್ಚು ಆಲೋಚಿಸಿ ಒಂದು ಪರಿಹಾರ ಕಂಡುಕೊಳ್ಳಬಹುದು. ಹಾಗಾದ್ರೆ ಬೆಂಗಳೂರು ಸೇರಿ ಹಲವು ನಗರಗಳಲ್ಲಿ ಹೆಚ್ಚಾಗಿ ಕಾಡುತ್ತಿರುವ ಸಮಸ್ಯೆ ಅಂದ್ರೆ ಅದು ಸೀವೇಜ್ ಟ್ರೀಟ್ಮೆಂಟ್. ಇದಕ್ಕೂ ಸಹ ಪ್ರಾಕೃತಿಕವಾಗಿ ಪರಿಹಾರವಿದೆ. ಅದನ್ನು ದೀರ್ಘಾಧ್ಯಯನ ಮಾಡಿ ಈ ಒಂದು ಸಂಸ್ಥೆ ಪರಿಹಾರವನ್ನು ನಿಮ್ಮ ಮುಂದೆ ತಂದಿದೆ. ಅದೆ ಇಕೋ ಎಸ್.ಟಿ.ಪಿ.

ಬೆಂಗಳೂರು ನಗರದಲ್ಲಿಂದು ಸುಮಾರು 1 ಕೋಟಿ 27 ಲಕ್ಷ ಜನಸಂಖ್ಯೆ ಇದೆ, ಒಬ್ಬ ಮನುಷ್ಯನಿಂದ ಸರಾಸರಿ ದಿನ ಒಂದಕ್ಕೆ 150 ಲೀಟರ್ ಗಳಷ್ಟು ಕಲುಷಿತ ನೀರನ್ನು ನೀಡಬಹುದು. ಅಂದ್ರೆ ಒಟ್ಟು ಬೆಂಗಳೂರಿನಿಂದ ಅದೆಷ್ಟೂ ನೀರು ವಿಷಪೂರಿತವಾಗಿ ಹರಿದು ಹೋಗುತ್ತದೆ ಲೆಕ್ಕಿಸಿ ನೋಡಿ. ಇದಿಷ್ಟೆ ಅಲ್ಲ ನಗರದಲ್ಲಿರುವ ಕಾರ್ಖಾನೆಗಳು, ಮದುವೆ ಮಂಟಪಗಳೂ ಹೀಗೆ ಹೆಚ್ಚಿನ ಜನ ಸಮೂಹ ಸೇರುವ ಗುಂಪಿನಿಂದ ಮತ್ತೊಂದಷ್ಟು ವಿಷಪೂರಿತ ನೀರು ಹರಿದು ಬರಬಹುದು. ಇದೆಲ್ಲವನ್ನು ಒಮ್ಮೆಲೆ ಹೊತ್ತು ಹೋಗವ ರಾಜಕಾಲುವೆಗಳು, ಉಸಿರಾಡಲಾಗದ ಗಂಧವನ್ನು ಹೊತ್ತು, ಒಂದು ಘಟಕವನ್ನು ತಲುಪುತ್ತದೆ. ಅಲ್ಲಿ ಮೋಟರ್ ಹಾಗೂ ಪಂಪ್ ಗಳನ್ನು ಬಳಸಿ ಆ ಕಲುಷಿತ ನೀರನ್ನು ಶುದ್ಧಿಕರಿಸಲಾಗುತ್ತದೆ. ಇದೆ ನೀರನ್ನು ಸಂಸ್ಕರಿಸದ ಮೇಲೆ ಮರು ಉಪಯೋಗಕ್ಕಾಗಿ ಅಥವಾ ನದಿಗಳಿಗೆ ಬಿಡಲಾಗುವುದು.

ಸಾಮಾನ್ಯವಾಗಿ, ರಾಜಕಾಲವೇಯಲ್ಲಿ ಹರಿದು ಬರುವ ನೀರು ಹೇಗೆ ಶುದ್ಧೀಕರಣವಾಗುತ್ತೆ ಅನ್ನೋದನ್ನು ಹೇಳ್ತಿವಿ ಕೇಳಿ. ಒಂದು ನಗರ ಒಟ್ಟು ಒಳ ಚರಂಡಿ ನೀರನ್ನು ಸೇರಿಸಿ ಹರಿದು ಬಿಡಲಾಗುತ್ತದೆ. ಇದು ಊರಾಚೆ ಇರುವ ಸಂಸ್ಕರಣ ಘಟಕದ ತನಕ ನಿಧಾನವಾಗಿ ಸಂಚರಿಸುತ್ತದೆ. ಈ ವೇಳೆ ಅದು ಹರಿದು ಬರುವ ಅಷ್ಟು ಜಾಗ, ಅಲ್ಲಿನ ಸುತ್ತಮುತ್ತಲಿನ ಮಣ್ಣು ನೀರಿನಲ್ಲಿರುವ ವಿಷವನ್ನು ತನ್ನಲಿ ಇರಿಸಿಕೊಳ್ಳ ಬಹುದು. ಅಲ್ಲಿಂದ ಹರಿದು ಬರುವ ನೀರು ಶುದ್ಧಿಕರಣ ಘಟಕವನ್ನು ತಲುಪುತ್ತದೆ. ಅಲ್ಲಿ ಹಂತ ಹಂತವಾಗಿ ನೀರನ್ನು ಮೋಟರ್ ಗಳ ಸಹಾಯದಿಂದ ಪಂಪ್ ಮಾಡಿ, ಅದರಲ್ಲಿದ್ದ ರಚ್ಚನ್ನು ದೂರಗೊಳಿಸಲಾಗುತ್ತದೆ, ಅಲ್ಲಿಂದ ಆ ನೀರು, ಮತ್ತೊಂದು ಘಟಕಕ್ಕೆ ತಲುಪಿ ಇನ್ನೋಂದು ಹಂತದ ಶುಧ್ಧಿಕರಣ ಮಾಡಲಾಗುತ್ತದೆ, ಹಾಗೆ ಗಟ್ಟಿ ಪದಾರ್ಥಗಳನ್ನು ನೀರಿನಿಂದ ಬೇರ್ಪಡಿಸಿ, ಅದಕ್ಕೆ ಸ್ವಲ್ಪ ಕೆಮಿಕಲ್ಸ್ ಗಳನ್ನು ಹಾಕಿ ಅದನ್ನು ಸ್ವಚ್ಚ ನೀರಿನ ರೀತಿ ತಿಳಿಯಾಗಿ ಕಾಣುವ ಹಾಗೆ ಮಾಡಲಾಗುತ್ತದೆ.

ಹೀಗೆ ಶುದ್ಧಿಕರಣ ಆದ ನೀರನ್ನು ಮರು ಉಪಯೋಗಕ್ಕೆ ಕಳಿಸಲಾಗುವುದು. ಇದನ್ನೆ ನಗರದಲ್ಲಿರುವ ನಾವು, ಸ್ನಾನ ಮಾಡುವುದಕ್ಕೆ, ಪಾತ್ರಗಳನ್ನು ತೊಳೆಯುವುದಕ್ಕೆ ಮುಂತಾದ ಗೃಹಬಳಕೆಯ ನೀರಾಗಿ ಬಳಸುತ್ತಿದ್ದೆವೆ. ಆದರೆ ಹೇಳಿದಷ್ಟು ಸುಲಭವಾಗಿಲ್ಲ. ಇಡಿ ನಗರದ ಶುದ್ಧಿಕರಣ ಘಟಕವನ್ನು ಸ್ಥಾಪಿಸಲು ಅದೆಷ್ಟೋ ಹಣ ಹೂಡಿಕೆ ಮಾಡಲೇಬೇಕು. ಇನ್ನು ಆ ನೀರಿನ ಘಟಕಕ್ಕಾಗೆಯೇ ಅದೆಷ್ಟೋ ಎಕರೆ ಜಾಗವೂ ಅನಿವಾರ್ಯವಾಗುತ್ತದೆ. ಆ ಜಾಗದಲ್ಲಿ ಸಂಸ್ಕರಣೆ ಕೆಲಸ ನಿರ್ವಹಿಸಲು ಒಂದಷ್ಟು ಜನ ಕೆಲಸಗಾರರು ಶ್ರಮ ವಹಿಸುತ್ತಿದ್ದಾರೆ. ಇದೆಲ್ಲವನ್ನು ಮೀರಿ, ಆ ಘಟಕದ ಹತ್ತಿರ ಹೋದರೆ ಸಾಕು ನಮಗೆ ಇಡಿ ಬೆಂಗಳೂರಿನ ದುರ್ವಾಸನೆ ಮೂಗೆಗೆ ಹೊಡೆಯುತ್ತದೆ. ಇದಕ್ಕೆಲ್ಲ ಪರಿಹಾರವೇ ಜೈವಿಕ ಅನುಕರಣೆಯ ಶುದ್ಧಿಕರಣ.

ಹಸುವಿನ ಜೀರ್ಣ ಕ್ರಿಯೆಯ ಅನುಕರಣೆ ಇದಕ್ಕೆ ಉಪಾಯ
ಗೋವಿನ ಜೀರ್ಣಾಂಗವನ್ನು ಅರಿತು ಸಿದ್ಧವಾದ ಶುದ್ಧೀಕರಣ ಘಟಕ

ಹೌದು, ಎಲ್ಲ ಪ್ರಾಣಿಗಳಂತೆ ಗೋವು ಸಹ ತನ್ನೋಳಗೆ ಒಂದು ಜೀರ್ಣಾಂಗ ವ್ಯವಸ್ಥೆಯನ್ನು ಹೊಂದಿದೆ. ಅದು ಸಹಜವಾಗಿಲ್ಲ. ಬದಲಿಗೆ ಆ ಜೀವಿಯಲ್ಲಿ ನಾಲ್ಕು ಹಂತದಲ್ಲಿ ತಿಂದ ಆಹಾರ ಜೀರ್ಣವಾಗುತ್ತದೆ. ಇದೆ ಮಾರ್ಗವನ್ನು ಅನುಸರಿಸಿದರೆ ಹಲವು ಗೊಂದಲಗಳಲ್ಲಿ ನಡೆಯುತ್ತಲಿರುವ ಕೊಳಚೆ ನೀರಿನ ಶುದ್ಧಿಕರಣ ಸುಲಭವಾಗಿ ಬಿಡುತ್ತದೆ. ಈ ಅನುಕರಣೆಯನ್ನು ಈ ಒಂದು ಕಂಪನಿ ಕಾರ್ಯರೂಪಕ್ಕೆ ತಂದಿದೆ. ಸತತ ಹತ್ತು ವರ್ಷಗಳ ಕಾಲ ಸಂಶೋಧನೆ ಮಾಡಿ, ಈ ಒಂದು ಪ್ರಯೋಗಕ್ಕೆ ಪೇಟೆಂಟ್ ಪಡೆದು, ಬೆಂಗಳೂರು ಸೇರಿ ಭಾರತದ 4 ದಿಕ್ಕಿನಲ್ಲೂ ಘಟಕ ನಿರ್ಮಾಣ ಮಾಡಿ ಯಶಸ್ವಿಯಾಗುತ್ತದೆ. ತರುಣ್ ಕುಮಾರ್ ರವರ ಸಾರಥ್ಯದಲ್ಲಿ ಬೆಂಗಳೂರು ಮೂಲದ ಎಕೊ ಎಸ್.ಟಿ.ಪಿ ಕಂಪನಿ.. ಹಸುವಿನಿಂದ ಕಲಿತ ನೀರು ಶುದ್ಧಿಕರಣ ಪಾಠವನ್ನು ಎಲ್ಲರಿಗೂ ತಿಳಿಹೇಳುತ್ತಿದೆ.. ಅದು ಹೇಗೆ ಅನ್ನೋದನ್ನು ಹೇಳ್ತಿವಿ ನೋಡಿ.

ನಗರಗಳಲ್ಲಿ ನೀರು ಹೇಗೆಲ್ಲ ಹಾನಿಗೊಳಗಾಗುತ್ತಿದೆ ಅನ್ನೋದು ಎಲ್ಲರಿಗೂ ಗೊತ್ತಿದ್ದರು ಮೌನವಾಗಿ ಇರುವ ಪದ್ಧತಿಗೆ ಹೊಂದುಕೊಂಡು ಬಿಟ್ಟಿದ್ದೇವೆ. ಇದರ ಜೊತೆಗೆ ಜೈವಿಕ ಅನುಕರಣೆ ಬಗ್ಗೆ ಒಂದಷ್ಟು ಮಾಹಿತಿ ನಿಮಗೆ ಸಿಕ್ಕಿದೆ.

Source: newsfirstlive.com Source link