ಸಾರ್ವಜನಿಕ ಗಣೇಶೋತ್ಸವಕ್ಕೆ ಇಂದೇ ಸಿಗುತ್ತಾ ಗ್ರೀನ್ ​ಸಿಗ್ನಲ್​?

 ಸಾರ್ವಜನಿಕ ಗಣೇಶೋತ್ಸವಕ್ಕೆ ಇಂದೇ ಸಿಗುತ್ತಾ ಗ್ರೀನ್ ​ಸಿಗ್ನಲ್​?

ಕ್ರೂರಿ ಕೊರೊನಾ ಆರ್ಭಟಕ್ಕೆ ನಲುಗಿ ಹೋಗಿದ್ದ ಭಾರತ, ಮತ್ತೊಂದು ಸವಾಲಿಗೆ ಸಿದ್ಧವಾಗಬೇಕಿದೆ. ಕಳೆದ 2 ವಾರಗಳಿಂದ ಕೊರೊನಾ ಸೋಂಕು ಕ್ರಮೇಣವಾಗಿ ಏರಿಕೆ ಕಾಣ್ತಿದೆ. ನಿತ್ಯವೂ 40 ಸಾವಿರಕ್ಕೂ ಹೆಚ್ಚು ಸೋಂಕು ಭಾರತದಲ್ಲಿ ಕಾಣಿಸಿಕೊಳ್ತಿದ್ದು, ಮೂರನೇ ಅಲೆಯ ಎಚ್ಚರಿಕೆ ಗಂಟೆ ಬಾರಿಸ್ತಿದೆ. ಇದು ಕಡಿಮೆ ಎಂಬ ಈಗಷ್ಟೇ ಸುಧಾರಿಸಿಕೊಳ್ತಿದ್ದ ಹಲವು ರಾಜ್ಯಗಳು ಮತ್ತೆ ಕೊರೊನಾ ಚಕ್ರವ್ಯೂಹಕ್ಕೆ ಬಲಿಯಾಗ್ತಿದೆ. ಈ ನಡುವೆ ರಾಜ್ಯದಲ್ಲಿ ಸಾರ್ವಜನಿಕ ಗಣೇಶೋತ್ಸವದ ಬಗ್ಗೆ ಇಂದೇ ಅಂತಿಮ ನಿರ್ಣಯವಾಗೋ ಸಾಧ್ಯತೆಗಳಿವೆ.

ಈಗಲೇ ಎಚ್ಚೆತ್ರೆ ಬಚಾವ್, ಯಾಮಾರಿದ್ರೆ ಕಂಟಕ ಗ್ಯಾರೆಂಟಿ 
ಮೊದಲೆರೆಡು ಅಲೆಗಳಲ್ಲಿ ಜನರ ಜೀವದ ಜೊತೆ ಜೀವನವನ್ನ ಹಳ್ಳ ಹಿಡಿಸಿರೋ ಕೊರೊನಾ ಇದೀಗ ಮತ್ತೆ ತನ್ನ ಕಬಂದಬಾಹು ಚಾಚುತ್ತಿದೆ. ಅದು ಕೂಡ ಹಿಂದಿನಂತೆ ಈ ಬಾರಿಯೂ ಕೊರೊನಾ ಶುಭಾರಂಭ ಮಾಡ್ತಿರೋದು ಕೇರಳದಿಂದಲೇ.

ಕೇರಳಗೂ ಹಾಗೂ ಕೊರೊನಾಗೂ ಒಂದಿಲ್ಲೊಂದು ರೀತಿಯಲ್ಲಿ ಬಿಟ್ಟು ಬಿಡದ ನಂಟಿದೆ. ಈಗಾಗಲೇ ಕೊರೊನಾ ಕಂಟ್ರೋಲ್​ಗೆ ಹಲವು ಮುನ್ನಚ್ಚರಿಕೆ ವಹಿಸಿದ್ರೂ ಕೇರಳದಲ್ಲಿ ಕಂಟ್ರೋಲ್​ಗೂ ಮೀರಿ ಕೊರೊನಾ ಹೆಚ್ಚಾಗ್ತಿದೆ. ನಿತ್ಯವೂ 20 ಸಾವಿರಕ್ಕೂ ಹೆಚ್ಚು ಕೇಸ್​ಗಳ ಕೇರಳದಲ್ಲಿ ಪತ್ತೆಯಾಗ್ತಿರೋದು ಮತ್ತಷ್ಟು ಆತಂಕ ಮೂಡಿಸಿದೆ.

ಕೇರಳದಲ್ಲಿ ನೈಟ್​ ಕರ್ಫ್ಯೂ, ಸಂಡೇ ಲಾಕ್​ಡೌನ್​​ ಕಂಟಿನ್ಯೂ!

blank

ಕೊರೊನಾ ಸೋಂಕು ಹೆಚ್ಚಾಗ್ತಿರೋದಕ್ಕೆ ಕೇರಳ ಸರ್ಕಾರ ಮತ್ತಷ್ಟು ಅಲರ್ಟ್ ಆಗಿದೆ. ಕಳೆದ ಸಂಜೆ ಮಹತ್ವದ ಸಭೆ ಮಾಡಿದ್ದ ಕೇರಳ ಸಿಎಂ ಪಿಣರಾಯ್ ವಿಜಯನ್​​, ರಾಜ್ಯದಲ್ಲಿ ನೈಟ್​ ಕರ್ಫ್ಯೂ ಹಾಗೂ ಸಂಡೇ ಲಾಕ್​ಡೌನ್ ನಿಯಮವನ್ನ ಮುಂದುವರೆಸಿದ್ದಾರೆ.

ಸಾರ್ವಜನಿಕ ಗಣೇಶೋತ್ಸವಕ್ಕೆ ಇಂದೇ ಸಿಗುತ್ತಾ ಗ್ರೀನ್ ​ಸಿಗ್ನಲ್​?
ಇನ್ನು ಕರ್ನಾಟಕದಲ್ಲಿ ಕೊರೊನಾ ಆತಂಕದ ನಡುವೆಯೂ ಸಾರ್ವಜನಿಕ ಗಣೇಶೋತ್ಸವಕ್ಕೆ ಒತ್ತಾಯಿಸಲಾಗ್ತಿದೆ. ಈ ಬಗ್ಗೆ ಮೊನ್ನೆಯೇ ಸುದೀರ್ಘ ಚರ್ಚೆ ಮಾಡಿದ್ದ ಸಿಎಂ ಬಸವರಾಜ್ ಬೊಮ್ಮಾಯಿ ಇಂದು ಅಂತಿಮ ನಿರ್ಣಯ ತೆಗೆದುಕೊಳ್ಳಲಿದ್ದಾರೆ. ಮೂಲಗಳ ಪ್ರಕಾರ ಷರತ್ತು ಬದ್ಧ ನಿಯಮ ಹೇರಿ ಗಣೇಶ ಹಬ್ಬ ಆಚರಣೆಗೆ ಅನುಮತಿ ನೀಡುವ ಸಾಧ್ಯತೆಗಳೂ ಹೆಚ್ಚಾಗಿವೆ.

ಶಾಲಾ-ಕಾಲೇಜು ಪುನಾರಂಭವಾಗ್ತಿದ್ದಂತೆ ಕೊರೊನಾ ರೀ ಎಂಟ್ರಿ!
ಇತ್ತ ಕೊರೊನಾ ಕಡಿಮೆಯಾಗ್ತಿದ್ದಂತೆ ಹಲವು ರಾಜ್ಯಗಳಲ್ಲಿ ಶಾಲಾ-ಕಾಲೇಜುಗಳನ್ನ ರೀ ಓಪನ್ ಮಾಡಲಾಗಿದೆ. ಆದ್ರೆ ಕೆಲವೇ ಕೆಲವು ದಿನಗಳಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಸೋಂಕಿ ಪತ್ತೆಯಾಗ್ತಿದೆ. ಕರ್ನಾಟಕ, ತಮಿಳುನಾಡು, ಆಂಧ್ರ, ಮಹಾರಾಷ್ಟ್ರ ಸೇರಿ ಹಲವು ರಾಜ್ಯದ ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದು ಪೋಷರಲ್ಲಿ ಮತ್ತಷ್ಟು ಕೊರೊನಾಂತಕ ಹೆಚ್ಚಳ ಮಾಡಿದೆ.

ಮುಂಬೈ ಜಿಲ್ಲೆಯಲ್ಲಿ ಒಂದು ಕೋಟಿ ಲಸಿಕೆ ವಿತರಣೆ

blank
ಕೊರೊನಾ ಲಸಿಕೆ ವಿತರಣೆಯಲ್ಲಿ ಮುಂಬೈ ಜಿಲ್ಲೆ ಹೊಸ ಇತಿಹಾಸ ನಿರ್ಮಿಸಿದೆ. ಬೃಹನ್​​ ಮುಂಬೈ ಪಾಲಿಕೆ ವ್ಯಾಪ್ತಿಯಲ್ಲಿ ಇಲ್ಲಿವರೆಗೂ ಬರೋಬ್ಬರಿ ಒಂದು ಕೋಟಿ ಜನರಿಗೆ ಕೊರೊನಾ ಲಸಿಕೆ ಹಂಚಿಕೆ ಮಾಡಲಾಗಿದೆ. ಇದು ದೇಶದಲ್ಲೇ ಒಂದು ಲಸಿಕೆ ಪಡೆದ ಮೊದಲ ಜಿಲ್ಲೆ ಎಂದು ಮುಂಬೈ ಹೆಗ್ಗಳಿಕೆ ಪಡೆದಿದೆ. ಈ ಮೂಲಕ ಮುಂಬೈ ಜನಸಂಖ್ಯೆತಲ್ಲಿ ಶೇ. 78 ರಷ್ಟು ಜನರಿಗೆ ಕೊರೊನಾ ಲಸಿಕೆ ವಿತರಿಸಲಾಗಿದೆ. ಈ ಮೂಲಕ ಕೊರೊನಾ ಕಂಟ್ರೋಲ್​ಗೆ ಲಸಿಕಾಸ್ತ್ರ ಕೆಲಸ ಮಾಡ್ತಿದ್ದು, ಜನ ತಪ್ಪದೇ ಲಸಿಕೆ ಪಡೆದುಕೊಳ್ಳೋದು ಒಳ್ಳೆಯದ್ದು.

Source: newsfirstlive.com Source link