ಮೈಸೂರು ಆಯ್ತು, ಇದೀಗ ಕಲಬುರಗಿಯಲ್ಲಿ ಪೈಶಾಚಿಕ ಕೃತ್ಯ -ಡ್ರಾಪ್ ಕೊಡೋ ನೆಪದಲ್ಲಿ ಮಹಿಳೆ ಮೇಲೆ ಅತ್ಯಾಚಾರ

ಮೈಸೂರು ಆಯ್ತು, ಇದೀಗ ಕಲಬುರಗಿಯಲ್ಲಿ ಪೈಶಾಚಿಕ ಕೃತ್ಯ -ಡ್ರಾಪ್ ಕೊಡೋ ನೆಪದಲ್ಲಿ ಮಹಿಳೆ ಮೇಲೆ ಅತ್ಯಾಚಾರ

ಮೊನ್ನೆ ಮೊನ್ನೆಯಷ್ಟೇ ಮೈಸೂರು ಆಯ್ತು. ಇದೀಗ ಕಲಬುರಗಿಯಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದೆ. ಒಂಟಿ ಮಹಿಳೆಯ ಮೇಲೆ ಕಾಮ ಪಿಶಾಚಿ ಒಬ್ಬ ಅತ್ಯಾಚಾರವೆಸಗಿರೋ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಡ್ರಾಪ್ ಕೊಡೋ ನೆಪದಲ್ಲಿ ಒಂಟಿ ಮಹಿಳೆ ಮೇಲೆ ಪೈಶಾಚಿಕ ಕೃತ್ಯ ಎಸಗಿದ ಆರೋಪಿ ನಾಗರಾಜ್​ನನ್ನು ಪೊಲೀಸರು ಬಂಧಿಸಿದ್ದಾರೆ.

blank

ಏನಿದು ಪ್ರಕರಣ..?

ಕಳೆದ ಮೇ 24ರಂದು ಸರ್ಕಾರ ಲಾಕ್​​ಡೌನ್ ಘೋಷಿಸಿತ್ತು. ಈ ಹಿನ್ನೆಲೆ ಸಾರಿಗೆ ಸಂಚಾರ ಸ್ಥಗಿತಗೊಂಡಿತ್ತು. ಸರ್ಕಾರಿ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿದ್ದ ಮಹಿಳೆ ಸಂಜೆ ಕೆಲಸ ಮುಗಿಸಿ ಮನೆ ಕಡೆ ಹೊರಟಿದ್ದರು. ಆದರೆ ಈ ವೇಳೆ ಬಸ್​ಗಾಗಿ ಕಾಯುತ್ತಿದ್ದ ಮಹಿಳೆಯನ್ನು ಕಂಡು ಡ್ರಾಪ್ ಕೊಡೋದಾಗಿ ಆರೋಪಿ ನಾಗರಾಜ್ ಹೇಳಿದ್ದು, ಈತನ ಮಾತು ನಂಬಿ ಮಹಿಳೆ ಸಹ ಬೈಕ್​​ನಲ್ಲಿ ಹೊರಟ್ಟಿದ್ದರು. ಈ ವೇಳೆ ಮಾರ್ಗ ಮಧ್ಯೆ ಬೈಕ್ ನಿಲ್ಲಿಸಿ, ಮಹಿಳೆಯನ್ನ ಬಲವಂತವಾಗಿ ಎಳೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

blank

ಅತ್ಯಾಚಾರ ನಡೆದ ಬಳಿಕ ಸಂತ್ರಸ್ತೆ ಯಾರ ಬಳಿಯೂ ವಿಷಯವನ್ನು ತಿಳಿಸಿರಲಿಲ್ಲ. ಯಾಕಂದ್ರೆ ಅತ್ಯಾಚಾರ ಘಟನೆಯಿಂದ ಮಾನಸಿಕವಾಗಿ ಆಕೆ ಜರ್ಜರಿತವಾಗಿದ್ದರು. ಆದ್ರೆ, ಜುಲೈ 28ರಂದು ಸಂತ್ರಸ್ತೆ ಕುರುಕುಂಟಾ ಪೊಲೀಸ್ ಠಾಣೆಯಲ್ಲಿ, ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಬಳಿಕ ಪೊಲೀಸರು ಮಹಿಳೆಯನ್ನ ಠಾಣೆಗೆ ಕರೆಯಿಸಿ, ಆರೋಪಿಯ ರೇಖಾಚಿತ್ರ ಸಿದ್ಧಗೊಳಿಸಿ, ಆರೋಪಿಯನ್ನು ಗುರುತು ಹಿಡಿಯುವಂತೆ ಹೇಳಿದ್ದಾರೆ. ಸಂತ್ರಸ್ತೆ ಹೇಳಿಕೆ ಆಧಾರದ ಮೇಲೆ ಆಗಸ್ಟ್ 31 ರಂದು ಇಂಜಳ್ಳಿ ಗ್ರಾಮದ ಆರೋಪಿ ನಾಗರಾಜ್‌ನನ್ನ ಪೊಲೀಸರು ಬಂಧಿಸಿದ್ದಾರೆ.

blank

Source: newsfirstlive.com Source link