7 ಕೋಟಿಗೆ ಬೆಂಗಳೂರಲ್ಲಿ ಫ್ಲ್ಯಾಟ್ ಖರೀದಿಸಿದ ದೀಪಿಕಾ

– ತಂದೆ ಜೊತೆ ಗಂಗಾನಗರದಲ್ಲಿ ಮನೆ ಖರೀದಿ

ಬೆಂಗಳೂರು: ಮೂಲತಃ ಕರ್ನಾಟಕದವರಾದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತವರಿನತ್ತ ಕೊಂಚ ಒಲವು ಹೊಂದಿದ್ದಾರೆ. ಹೀಗಾಗಿ ನಗರದ ಬಳ್ಳಾರಿ ರಸ್ತೆಯ ಗಂಗಾನಗರದಲ್ಲಿ 6.79 ಕೋಟಿ ರೂ.ಗಳನ್ನು ನೀಡಿ ಫ್ಲ್ಯಾಟ್ ಖರೀದಿಸಿದ್ದಾರೆ. ಆದರೆ ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರಾ ಅಥವಾ ರಾಜ್ಯಕ್ಕೆ ಭೇಟಿ ನೀಡಿದಾಗ ಉಳಿದುಕೊಳ್ಳಲು ಫ್ಲ್ಯಾಟ್ ಖರೀದಿಸಿದ್ದಾರಾ ತಿಳಿಯಬೇಕಿದೆ.

ದೀಪಿಕಾ ಪಡುಕೋಣೆಯವರು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಪಡುಕೋಣೆಯವರು. ಇವರ ತಂದೆ ಪ್ರಕಾಶ್ ಪಡುಕೋಣೆ ಭಾರತದ ಮಾಜಿ ರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರರು. ದೀಪಿಕಾ ಅವರು ತವರಿನ ಬಗ್ಗೆ ಒಲವು ಹೊಂದಿದ್ದಾರೆ. ಆಗಾಗ ರಾಜ್ಯಕ್ಕೆ ಭೇಟಿ ನೀಡುತ್ತಲೇ ಇರುತ್ತಾರೆ. ಆದರೆ ಇದೀಗ ಬೆಂಗಳೂರಲ್ಲಿ ಮನೆ ಫ್ಲ್ಯಾಟ್ ಖರೀದಿಸುವ ಮೂಲಕ ಗಮನಸೆಳೆದಿದ್ದಾರೆ. ಇದನ್ನೂ ಓದಿ: ವಿಕ್ರಾಂತ್ ರೋಣ ಸಿನಿಮಾಗೆ ಸಲ್ಮಾನ್ ಖಾನ್ ಮೆಚ್ಚುಗೆ

ಬಾಲಿವುಡ್‍ಗೆ ಕಾಲಿಟ್ಟ ಬಳಿಕ ಹ್ಯಾಟ್ರಿಕ್ ಸಿನಿಮಾಗಳಲ್ಲಿ ನಟಿಸಿರುವ ದೀಪಿಕಾ, ಮುಂಬೈನಲ್ಲೇ ವಾಸಿಸುತ್ತಿದ್ದರು. ಬಳಿಕ ನಟ ರಣವೀರ್ ಸಿಂಗ್ ಜೊತೆ ವಿವಾಹವಾದರು. ಇದೀಗ ತಂದೆ ಜೊತೆ ಸೇರಿ ಬೆಂಗಳೂರಿನಲ್ಲಿ ಮನೆ ಖರೀದಿಸುವ ಮೂಲಕ ತವರಿಗೆ ಮರಳುತ್ತಿದ್ದಾರೆ. ಆದರೆ ಇದೇ ಮನೆಯಲ್ಲಿ ವಾಸ್ತವ್ಯ ಹೂಡಲಿದ್ದಾರಾ ಅಥವಾ ಆಗಾಗ ಭೇಟಿ ಕೊಡಲಿದ್ದಾರಾ ಎಂಬ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಇದನ್ನೂ ಓದಿ:  ಜನ್ಮದಿನಾಚರಣೆಯ ಸಂಭ್ರಮದಲ್ಲಿ ಸಿಂಪಲ್ ನಟಿ ಶ್ವೇತಾ ಶ್ರೀವಾತ್ಸವ್

blank

ಆ.7ರಂದು 6.79 ಕೋಟಿ ರೂ.ಗೆ ಫ್ಲ್ಯಾಟ್ ಖರೀದಿಸಿದ್ದು, ಸ್ಟಾಂಪ್ ತೆರಿಗೆಯಾಗಿ 34.64 ಲಕ್ಷ ರೂ.ಪಾವತಿಸಿದ್ದಾರೆ. ಬೆಂಗಳೂರಿನಿಂದ ಬಳ್ಳಾರಿ ಅಂದರೆ ಹೊಸ ವಿಮಾನ ನಿಲ್ದಾಣದ ರಸ್ತೆಯ ಗಂಗಾನಗರದಲ್ಲಿನ ಎಂಬಸಿ ಗ್ರೂಪ್‍ನ ಫೋರ್ ಸೀಸನ್ಸ್ ಎಂಬ 27 ಅಂತಸ್ತಿನ ಅಪಾರ್ಟ್‍ಮೆಂಟ್‍ನಲ್ಲಿ 22ನೇ ಅಂತಸ್ತಿನಲ್ಲಿ ಫ್ಲ್ಯಾಟ್ ಖರೀದಿಸಿದ್ದಾರೆ.

ಫ್ಲ್ಯಾಟ್ ವಿಶೇಷತೆ
ಒಟ್ಟು 3451.37 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಿರುವ ಈ ಅಪಾರ್ಟ್‍ಮೆಂಟ್‍ನಲ್ಲಿ ಪ್ರತಿಯೊಬ್ಬರಿಗೂ ಖಾಸಗಿ ನಿವಾಸವನ್ನು ನೀಡುತ್ತದೆ. ವಿಸ್ತಾರವಾದ 2 ಮಲಗುವ ಕೋಣೆಗಳು ಹಾಗೂ 2 ಕಾರ್ ಪಾರ್ಕಿಂಗ್‍ಗಳನ್ನು ಹೊಂದಿದೆ.

Source: publictv.in Source link