ಜಾಗತಿಕ ಜನಪ್ರಿಯ ನಾಯಕರಲ್ಲಿ ‘ನಮೋ’ ಅಗ್ರಸ್ಥಾನ -ಈ ಹೊತ್ತಿನ ಟಾಪ್​ 10 ಸುದ್ದಿಗಳ ಕ್ವಿಕ್​​ ರೌಂಡ್ಅಪ್

ಜಾಗತಿಕ ಜನಪ್ರಿಯ ನಾಯಕರಲ್ಲಿ ‘ನಮೋ’ ಅಗ್ರಸ್ಥಾನ -ಈ ಹೊತ್ತಿನ ಟಾಪ್​ 10 ಸುದ್ದಿಗಳ ಕ್ವಿಕ್​​ ರೌಂಡ್ಅಪ್

01. ಸಾರ್ವಜನಿಕ ಗಣೇಶೋತ್ಸವಕ್ಕೆ ಸಿಗುತ್ತಾ ಗ್ರೀನ್ ​ಸಿಗ್ನಲ್​?

blank

ಕರ್ನಾಟಕದಲ್ಲಿ ಕೊರೊನಾ ಸೋಂಕು ಆತಂಕ ಮೂಡಿಸಿದೆ. ಈ ನಡುವೆಯೂ ರಾಜ್ಯದಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಒತ್ತಾಯಿಸಲಾಗ್ತಿದೆ. ಈ ಬಗ್ಗೆ ಮೊನ್ನೆಯಷ್ಟೇ ಸುದೀರ್ಘ ಚರ್ಚೆ ಮಾಡಿದ್ದ ಸಿಎಂ ಬಸವರಾಜ್ ಬೊಮ್ಮಾಯಿ ಇಂದು ಅಂತಿಮ ನಿರ್ಣಯ ತೆಗೆದುಕೊಳ್ಳಲಿದ್ದಾರೆ.. ರಾಜ್ಯದಲ್ಲಿರುವ ಕೊರೊನಾ ಅಂಕಿ ಅಂಶ ನೋಡ್ಕೊಂಡು ನಿರ್ಧರಿಸುತ್ತೇವೆ ಅಂತ ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ರು. ಅದರಂತೆ ಷರತ್ತು ಬದ್ಧ ನಿಯಮ ಹೇರಿ ಗಣೇಶ ಹಬ್ಬ ಆಚರಣೆಗೆ ಅನುಮತಿ ನೀಡುವ ಸಾಧ್ಯತೆಗಳು ಹೆಚ್ಚಾಗಿವೆ.

02. ನಿಂತಿದ್ದ ಲಾರಿಗೆ ಸ್ಕೂಟರ್ ಡಿಕ್ಕಿ, ಮೂವರ ಸಾವು

blank

ರಸ್ತೆ ಪಕ್ಕ ನಿಂತಿದ್ದ ಲಾರಿಗೆ ಸ್ಕೂಟರ್ ಡಿಕ್ಕಿಯಾಗಿ ಇಬ್ಬರು ಮಕ್ಕಳು ಸೇರಿದಂತೆ ಮೂವರು ಸಾವನ್ನಪಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ನಾಗಮಂಗಲ ತಾಲೂಕಿನ ಗುಡ್ಡೇನಹಳ್ಳಿ ಕ್ರಾಸ್ ಬಳಿ ಲಾರಿ ಹಾಗೂ ಸ್ಕೂಟರ್ ನಡುವೆ ಅಪಘಾತ ಸಂಭವಿಸಿದೆ. ಸ್ಕೂಟರ್‌ನಲ್ಲಿ ಗುಡ್ಡೇನಹಳ್ಳಿಯಿಂದ ಹೊಣಕೆರೆಗೆ ಸೋಸೆ ಮತ್ತು ಮೊಮ್ಮಕ್ಕಳನ್ನು ಮಾವ ಕರೆದುಕೊಂಡು ಬರುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ 62 ವರ್ಷದ ಆನಂದಕುಮಾರ್, 10 ವರ್ಷದ ಆರಾಧ್ಯ ಸ್ಥಳದಲ್ಲೆ ಮೃತ ಪಟ್ಟಿದ್ದು, 5 ವರ್ಷದ ಗೌರವ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯ ಸಾವನ್ನಪಿದ್ದಾನೆ.

03. ಜಾಗತಿಕ ಜನಪ್ರಿಯ ನಾಯಕರಲ್ಲಿ ‘ನಮೋ’ ಅಗ್ರಸ್ಥಾನ

blank
ಜನಪ್ರಿಯ ಜಾಗತಿಕ ನಾಯಕರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಜಾಗತಿಕ ನಾಯಕರ ಅನುಮೋದನೆ ರೇಟಿಂಗ್‌ನಲ್ಲಿ ಶೇ.70ರಷ್ಟು ಅಂಕ ಪಡೆದಿದ್ದಾರೆ. ಇದು ಉತ್ತಮ ನಾಯಕ ಅಂತ ಒಪ್ಪುವ ಜನರ ಪ್ರಮಾಣವೂ ಆಗಿದೆ. ಆಗಸ್ಟ್‌ 23ರಂದು ಈ ಪ್ರಮಾಣವು ಶೇಕಡ 72ರಷ್ಟಿತ್ತು. ಅಮೆರಿಕದ ಮಾಹಿತಿ ಗುಪ್ತಚರ ಕಂಪನಿ ಮಾರ್ನಿಂಗ್‌ ಕನ್ಸಲ್ಟ್‌ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದೆ. ಚುನಾವಣೆಯಲ್ಲಿ ಆಯ್ಕೆಯಾದ 13 ರಾಷ್ಟ್ರಗಳ ನಾಯಕರ ರಾಷ್ಟ್ರೀಯ ರೇಟಿಂಗ್ಸ್‌ ಆಧಾರದ ಮೇಲೆ ಈ ಱಂಕಿಂಗ್‌ ನೀಡಲಾಗಿದೆ.

04. ಕೇರಳದಲ್ಲಿ ನೈಟ್​ ಕರ್ಫ್ಯೂ, ಸಂಡೇ ಲಾಕ್​ಡೌನ್​​ ಕಂಟಿನ್ಯೂ!

ಮೊದಲೆರೆಡು ಅಲೆಗಳಲ್ಲಿ ಜನರ ಜೀವದ ಜೊತೆ ಜೀವನವನ್ನ ಹಳ್ಳ ಹಿಡಿಸಿರೋ ಕೊರೊನಾ ಇದೀಗ ಮತ್ತೆ ತನ್ನ ಕಬಂದಬಾಹು ಚಾಚುತ್ತಿದೆ. ಕೇರಳದಲ್ಲಿ ನಿತ್ಯವೂ 20 ಸಾವಿರಕ್ಕೂ ಹೆಚ್ಚು ಕೇಸ್​ಗಳು ಪತ್ತೆಯಾಗ್ತಿದ್ದು, ಸರ್ಕಾರ ಮತ್ತಷ್ಟು ಅಲರ್ಟ್ ಆಗಿದೆ. ಕಳೆದ ಸಂಜೆ ಮಹತ್ವದ ಸಭೆ ಮಾಡಿದ್ದ ಕೇರಳ ಸಿಎಂ ಪಿಣರಾಯ್ ವಿಜಯನ್​​, ರಾಜ್ಯದಲ್ಲಿ ನೈಟ್​ ಕರ್ಫ್ಯೂ ಹಾಗೂ ಸಂಡೇ ಲಾಕ್​ಡೌನ್ ನಿಯಮವನ್ನ ಮುಂದುವರೆಸಿದ್ದಾರೆ.

05. ಮುಂಬೈ ಜಿಲ್ಲೆಯಲ್ಲಿ ಒಂದು ಕೋಟಿ ಲಸಿಕೆ ವಿತರಣೆ
ಕೊರೊನಾ ಲಸಿಕೆ ವಿತರಣೆಯಲ್ಲಿ ಮುಂಬೈ ಜಿಲ್ಲೆ ಹೊಸ ಇತಿಹಾಸ ನಿರ್ಮಿಸಿದೆ. ಬೃಹನ್​​ ಮುಂಬೈ ಪಾಲಿಕೆ ವ್ಯಾಪ್ತಿಯಲ್ಲಿ ಇಲ್ಲಿವರೆಗೂ ಬರೋಬ್ಬರಿ ಒಂದು ಕೋಟಿ ಜನರಿಗೆ ಕೊರೊನಾ ಲಸಿಕೆ ಹಂಚಿಕೆ ಮಾಡಲಾಗಿದೆ. ಇದು ದೇಶದಲ್ಲೇ ಒಂದು ಲಸಿಕೆ ಪಡೆದ ಮೊದಲ ಜಿಲ್ಲೆ ಎಂದು ಮುಂಬೈ ಹೆಗ್ಗಳಿಕೆ ಪಡೆದಿದೆ.. ಈ ಮೂಲಕ ಮುಂಬೈ ಜನಸಂಖ್ಯೆಯಲ್ಲಿ ಶೇ. 78 ರಷ್ಟು ಜನರಿಗೆ ಕೊರೊನಾ ಲಸಿಕೆ ವಿತರಿಸಲಾಗಿದೆ.

06. ಪಂಜ್​ಶೀರ್​ ವಶಕ್ಕೆ ಪಡೆದ ನಂತರವೇ ಸರ್ಕಾರ ರಚನೆ!?
ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚನೆಗೆ ತಾಲಿಬಾನಿಗಳು ಹೆಣಗಾಡುತ್ತಿದ್ದಾರೆ. ಅಫ್ಘಾನ್​ ವಶಕ್ಕೆ ಪಡೆದು 3 ವಾರ ಕಳೆದ್ರೂ ಸರ್ಕಾರ ರಚಿಸುವಲ್ಲಿ ಮೇನಾಮೇಷ ಮಾಡಲಾಗ್ತಿದೆ. ಒಳಗೊಳಗೆ ತಾಲಿಬಾನಿನ ಮುಖಂಡರು ಕಚ್ಚಾಡ್ತಿದ್ದಾರೆ. ಹೀಗಾಗಿ ಸರ್ಕಾರ ರಚನೆ ತಡವಾಗ್ತಿದೆ ಎಂದು ಹೇಳಲಾಗ್ತಿದೆ.. ಕಬ್ಬಿಣದ ಕಡೆಲೆಯಂತಾಗಿರೋ ಪಂಜ್​ಶೀರ್​​​ ಜನ, ತಾಲಿಬಾನಿಗಳ ಎದುರು ತೊಡೆ ತಟ್ಟಿ ನಿಂತಿದ್ದಾರೆ. ಇದೇ ಚಾಲೆಂಜ್​ ರೂಪದಲ್ಲಿ ಪಡೆದಿರೋ ತಾಲಿಬಾನಿಗಳು ಪಂಜ್​ಶೀರ್​​ ವಶಕ್ಕೆ ಪಡೆದ ನಂತರವೇ ತಾಲಿಬಾನಿಗಳ ಸರ್ಕಾರ ರಚನೆ ಆಗಲಿದೆ ಎಂದು ತಾಲಿಬಾನಿನ ವಕ್ತಾರರು ಹೇಳ್ತಿದ್ದಾರೆ.

07. ಸಿಂಹ, ಆನೆ ದತ್ತು ಪಡೆದ ನಟ ಡಿ. ಶಿವಕಾರ್ತಿಕೇಯನ್

blank

ತಮಿಳುನಾಡಿನ ಅರಿಗ್ನಾರ್ ಅನ್ನಾ ಪ್ರಾಣಿ ಸಂಗ್ರಹಾಲಯದಿಂದ ಸಿಂಹ, ಹೆಣ್ಣಾನೆಯನ್ನ ನಟ ಶಿವಕಾರ್ತಿಕೇಯನ್​​ ದತ್ತು ಪಡೆದಿದ್ದಾರೆ. ವಿಷ್ಣು ಎಂಬ ಹೆಸರಿನ ಸಿಂಹ ಮತ್ತು ಪ್ರಕೃತಿ ಎಂಬ ಹೆಸರಿನ ಹೆಣ್ಣಾನೆಯನ್ನು ಆರು ತಿಂಗಳ ಅವಧಿಗೆ ದತ್ತು ಪಡೆದಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದು ಸಿಂಹ ಮತ್ತು ಆನೆಯ ಸಂರಕ್ಷಣೆಗಾಗಿ ಅವರ ಉತ್ಸಾಹವನ್ನು ತೋರಿಸುತ್ತದೆ. 2018 ರಿಂದ 2020ರ ಅವಧಿಯಲ್ಲಿ ಅನು ಎಂಬ ಹೆಸರಿನ ಬಿಳಿ ಹುಲಿಯನ್ನು ನಟ ಕಾರ್ತಿ ದತ್ತು ಪಡೆದಿದ್ದರು.

08. ಕ್ರಿಕೆಟ್ ಆಡಲು ಅನುಮತಿ ನೀಡಿದ ತಾಲಿಬಾನಿಗಳು

blank
ಅಫ್ಘಾನ್ ವಶಕ್ಕೆ ಪಡೆದು ಸುಮಾರು 22 ದಿನಗಳ ನಂತರ ಇದೇ ಮೊದಲ ಬಾರಿಗೆ ಅಫ್ಘಾನ್​ ಅಂಡರ್ 19 ತಂಡ ಕ್ರಿಕೆಟ್ ಆಡಲು ಸಿದ್ಧವಾಗಿದೆ. ಬಾಂಗ್ಲಾದೇಶದ ಢಾಕಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 10 ರಿಂದ 22 ರವರೆಗೂ ಕ್ರಿಕೆಟ್ ಸರಣಿ ನಡೆಯಲಿದೆ. ಇದ್ರಲ್ಲಿ 4 ಏಕದಿನ ಪಂದ್ಯ ಹಾಗೂ 4 ದಿನದ ಒಂದು ಟೆಸ್ಟ್ ಪಂದ್ಯ ನಡೆಯಲಿದೆ. ಅಫ್ಘಾನ್ ವಶಪಡಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಅಂಡರ್ 19 ಕ್ರಿಕೆಟ್ ತಂಡ ಟೂರ್ನಿ ಆಡೋಕೆ ಸಿದ್ಧವಾಗಿದೆ.

09. ಟೆಸ್ಟ್ ಕ್ರಿಕೆಟ್​ನಲ್ಲಿ 8ನೇ ಶತಕ ಸಿಡಿಸಿದ ರೋಹಿತ್ ಶರ್ಮಾ

ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್​ನಲ್ಲಿ ರೋಹಿತ್ ಶರ್ಮಾ ಭರ್ಜರಿ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ.. ಕೇವಲ 256 ಎಸೆತಗಳಲ್ಲಿ 127 ರನ್ ಕಲೆ ಹಾಕಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್​ನಲ್ಲಿ ಹಿಟ್​​ಮ್ಯಾನ್​ ಈವರೆಗೂ 8 ಶತಕ ಬಾರಿಸಿದ್ದಾರೆ. ಅಲ್ಲದೇ ಇಂಗ್ಲೆಂಡ್​ ನೆಲದಲ್ಲಿ ಮೊದಲ ಬಾರಿಗೆ ಟೆಸ್ಟ್​ ಕ್ರಿಕೆಟ್​ನಲ್ಲಿ ರೋಹಿತ್ ಶತಕ ಸಿಡಿಸಿದ್ದಾರೆ. ಟೆಸ್ಟ್​, ಏಕದಿನ ಹಾಗೂ ಟಿ-20ನಲ್ಲಿ ಶತಕ ಬಾರಿಸಿದ ಮೊದಲ ವಿದೇಶಿ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಟೆಸ್ಟ್ ಕ್ರಿಕೆಟ್​ನಲ್ಲಿ 3 ಸಾವಿರ, ಆರಂಭಿಕ ಆಟಗಾರನಾಗಿ ರೋಹಿತ್​ 11 ಸಾವಿರ ರನ್, ಹಾಗೂ 2021ರ ಸಾಲಿನಲ್ಲಿ ಮುಂಬೈಕರ್ 1 ಸಾವಿರ ರನ್ ಗಡಿ ದಾಟಿದ್ದಾರೆ.

10. 2ನೇ ಇನ್ನಿಂಗ್ಸ್​ನಲ್ಲಿ ಉತ್ತಮ ರನ್ ಕಲೆ ಹಾಕಿದ ಭಾರತ

blank

ಇಂಗ್ಲೆಂಡ್ ವಿರುದ್ಧದ 4 ಟೆಸ್ಟ್​ನಲ್ಲಿ ಭಾರತ ಉತ್ತಮ ರನ್ ಕಲೆ ಹಾಕಿದೆ. 2ನೇ ಇನ್ನಿಂಗ್ಸ್​ನಲ್ಲಿ 3 ವಿಕೆಟ್​ ಕಳೆದುಕೊಂಡಿರೋ ಭಾರತ 270 ಎನ್​ ಬಾರಿಸಿದೆ. ಸದ್ಯ ಕ್ರೀಜ್​ನಲ್ಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ಜಡೇಜಾ ಬ್ಯಾಟಿಂಗ್ ಮಾಡ್ತಿದ್ದು, ಇಂಗ್ಲೆಂಡ್​ಗೆ ಬೃಹತ್ ಮೊತ್ತದ ಟಾರ್ಗೆಟ್ ನೀಡುವ ಸಾಧ್ಯತೆಗಳಿವೆ.. ಇದ್ರಲ್ಲಿ ರೋಹಿತ್ 127 ರನ್, ಪೂಜಾರಾ 61 ಹಾಗೂ ಕೆಎಲ್ ರಾಹುಲ್ 46 ರನ್ ಬಾರಿಸಿದ್ದಾರೆ.

Source: newsfirstlive.com Source link