ಗುಡೇಕೋಟೆ ಕರಡಿ ಧಾಮಕ್ಕೆ ನಟ ಪುನೀತ್​ ರಾಜ್​​ಕುಮಾರ್ ಭೇಟಿ

ಗುಡೇಕೋಟೆ ಕರಡಿ ಧಾಮಕ್ಕೆ ನಟ ಪುನೀತ್​ ರಾಜ್​​ಕುಮಾರ್ ಭೇಟಿ

ವಿಜಯನಗರ: ಸ್ಯಾಂಡಲ್​​ವುಡ್​ ಪವರ್ ಸ್ಟಾರ್ ಪುನೀತ್​ ರಾಜ್​​​ಕುಮಾರ್ ಅವರು ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಕರಡಿಧಾಮಕ್ಕೆ ಭೇಟಿ ನೀಡಿದ್ದಾರೆ.

2013 ರಲ್ಲಿ ಗುಡೇಕೋಟೆ ಕರಡಿ ಧಾಮವನ್ನು ಸರ್ಕಾರ ಘೋಷಣೆ ಮಾಡಿತ್ತು. ಸುಮಾರು 38.5. ಚದರ ಕಿ.ಮೀ ವಿಸ್ತೀರ್ಣ ಹೊಂದಿರುವ ಕರಡಿಧಾಮಕ್ಕೆ ಭೇಟಿ ನೀಡಿದ್ದ ಪುನೀತ್ ರಾಜಕುಮಾರ್ ಭೇಟಿ ಧಾಮ ವೀಕ್ಷಣೆ ಮಾಡಿದ್ದಾರೆ.

blank

ತಮ್ಮ ನೆಚ್ಚಿನ ಆಗಮನ ಕುರಿತು ಮಾಹಿತಿ ಲಭಿಸುತ್ತಿದಂತೆ ಸ್ಥಳದಲ್ಲಿ ಜನರು ಪವರ್ ಸ್ಟಾರ್​ರೊಂದಿಗೆ ಫೋಟೋ ಕ್ಲಿಕಿಸಲು ಮುಗಿಬಿದ್ದಿದ್ದರು. ಅಲ್ಲದೇ ಪುನೀತ್ ರಾಜ್‍ಕುಮಾರ್ ಪರ ಅಭಿಮಾನಿಗಳು ಘೋಷಣೆ ಕೂಗಿ ಸಂತಸ ವ್ಯಕ್ತಪಡಿಸಿದರು.

ಅಂದಹಾಗೇ, ದರೋಜಿ ಕಡರಿ ಧಾಮದ ಬಳಿಕ ತಾಲೂಕಿನ ಎರಡನೇ ಗುಡೇಕೋಟೆ ಅರಣ್ಯ ಪ್ರದೇಶದಲ್ಲಿ ಅರಣ್ಯ ಪ್ರದೇಶದಲ್ಲಿ ಎರಡನೇ ಕರಡಿ ಧಾಮ ಸ್ಥಾಪಿಸಲಾಗಿದೆ. ಬೃಹತ್​ ಕಲ್ಲು ಬಂಡೆಗಳಿಂದ ಆವೃತವಾಗಿರೋ ಬೆಟ್ಟಗಳ ಸಾಲುಗಳ ಪ್ರದೇಶ ಕರಡಿಗಳ ವಾಸಕ್ಕೆ ಯೋಗ್ಯ ಸ್ಥಳವಾಗಿದ್ದು, ಹಲವು ಪ್ರವಾಸಿಗರನ್ನು ಧಾಮ ತನ್ನತ್ತ ಸೆಳೆಯುತ್ತಿದೆ.

Source: newsfirstlive.com Source link