ಪ್ಯಾರಾಲಿಂಪಿಕ್ಸ್​​​ನಲ್ಲಿ ಬೆಳ್ಳಿ ಪದಕ ಗೆದ್ದ ಕನ್ನಡಿಗ ಐಎಎಸ್​ ಅಧಿಕಾರಿ

ಪ್ಯಾರಾಲಿಂಪಿಕ್ಸ್​​​ನಲ್ಲಿ ಬೆಳ್ಳಿ ಪದಕ ಗೆದ್ದ ಕನ್ನಡಿಗ ಐಎಎಸ್​ ಅಧಿಕಾರಿ

ಪ್ಯಾರಾಲಿಂಪಿಕ್ಸ್​​​ನಲ್ಲಿ ಭಾರತದ ಕ್ರೀಡಾಪಟುಗಳ ಪದಕ ಬೇಟೆ ಮುಂದುವರಿದಿದ್ದು, ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್​​ನಲ್ಲಿ ಸುಹಾಸ್​​ ಎಲ್​​ ಯತಿರಾಜ್​ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ. ಫಯನಲ್​ ಪಂದ್ಯದಲ್ಲಿ ಫ್ರಾನ್ಸ್​ನ ಲ್ಯೂಕಾಸ್ ಮಜೂರ್ ವಿರುದ್ಧ 21-15, 17-21, 15-21 ಸೆಟ್​​ಗಳಲ್ಲಿ ಸೋಲುಂಡರು. ನೋಯ್ಡಾ ಡಿಸ್ಟ್ರಿಕ್ಟ್​ ಮ್ಯಾಜಿಸ್ಟ್ರೇಟ್ ಆಗಿರುವ ಸುಹಾಸ್ ಅವರು, ಪ್ಯಾರಾಲಿಂಪಿಕ್ಸ್​​ನಲ್ಲಿ ಪದಕ ಗೆದ್ದ ಮೊದಲ ಐಎಎಸ್​ ಅಧಿಕಾರಿ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ. ಕಂಪ್ಯೂಟರ್ ಎಂಜಿನಿಯರ್ ಆಗಿದ್ದ ಸುಹಾಸ್ ಅವರು, ಐಎಎಸ್​ ಪಾಸ್​ ಮಾಡಿ 2020ರಿಂದ ನೋಯ್ಡಾದಲ್ಲಿ ಕರ್ತವ್ಯಕ್ಕೆ ನಿಯೋಜನೆಯಾಗಿದ್ದಾರೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಸುಹಾಸ್​ ಅವರು ಮುಂದೇ ನಿಂತು ಕಾರ್ಯನಿರ್ವಹಿಸಿ ಗಮನಸೆಳೆದಿದ್ದರು. ಸುಹಾಸ್​ ಅವರು ಕರ್ನಾಟಕದ ಮೂಲದ ಐಎಎಸ್​ ಅಧಿಕಾರಿಯಾಗಿದ್ದು, ಹಾಸನದಲ್ಲಿ ಜನಿಸಿದ್ದು, ಆಗ್ರಾ, ಪ್ರಯಾಗ್​​ ರಾಜ್​ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದಾರೆ.

Source: newsfirstlive.com Source link