ಸ್ಯಾಂಡಲ್​ವುಡ್​ಗೆ ಬಿಗ್​ ಶಾಕ್​: ರೌಡಿಸಂ ಪ್ರೇರಕ ದೃಶ್ಯಗಳಿಗೆ ಬ್ರೇಕ್​ ಹಾಕಲು ಪೊಲೀಸ್​ ಇಲಾಖೆ ಚಿಂತನೆ

ಸ್ಯಾಂಡಲ್​ವುಡ್​ಗೆ ಬಿಗ್​ ಶಾಕ್​: ರೌಡಿಸಂ ಪ್ರೇರಕ ದೃಶ್ಯಗಳಿಗೆ ಬ್ರೇಕ್​ ಹಾಕಲು ಪೊಲೀಸ್​ ಇಲಾಖೆ ಚಿಂತನೆ

ಬೆಂಗಳೂರು : ಇನ್ಮುಂದೆ ‘ಮಚ್ಚು ಹಿಡಿದೊವ್ನು ನಾನು,ಲಾಂಗ್ ಕೊಟ್ಟವ್ನು ನಾನು, ಮಚ್ಚು ಹಿಡಿಯೊಕೆ ಹೇಳ್ಕೊಟ್ಟಿದ್ದೇ ನಾನು’ ಅಂತ ಖಡಕ್​ ಡೈಲಾಗ್ ಹೊಡ್ದು, ಸಿನಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳೊ ರೌಡಿಸಂ ಪ್ರೇರಕ ದೃಶ್ಯಾವಳಿಗಳಿರುವ ಸಿನಿಮಾಗಳಿಗೆ ಪೊಲೀಸ್​ ಇಲಾಖೆ ಶಾಕ್​ ನೀಡಲು ಸಜ್ಜಾಗಿದೆ.

ಹೌದು, ಇತ್ತೀಚಿಗೆ ರೌಡಿಸಂ ಆಧಾರಿತ ಸಿನಿಮಾಗಳು, ಆರೋಪಿಗಳಿಗೆ ಪ್ರೇರಣೆಯಾಗುತ್ತಿವೆ ಎಂಬ ಹಿನ್ನೆಲೆಯಲ್ಲಿ ಕೆಲ ರೌಡಿಸಂ ಎಳೆ ಹೊಂದಿರುವ, ಮತ್ತು ರೌಡಿಸಂ ಪ್ರೇರೆಪಿಸುವ ಸಿನಿಮಾಗಳಿಗೆ ಬ್ರೇಕ್​ ಹಾಕಲು ಪೊಲೀಸ್​ ಇಲಾಖೆ ಚಿಂತನೆ ನಡೆಸಿದೆ ಎನ್ನಲಾಗಿದೆ.

ರಾಜ್ಯದಲ್ಲಿ ಇತ್ತೀಚೆಗೆ ರೌಡಿಸಂ ಚಟುವಟಿಕೆ ಹೆಚ್ಚಾಗುತ್ತಿರುವ ಹಿನ್ನೆಲೆ ಪೊಲೀಸ್​ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದ್ದು, ಸಿನಿಮಾಗಳಲ್ಲಿ ರೌಡಿಸಂ ಅಂಶಗಳನ್ನು ವೈಭವೀಕರಿಸಿ ತೋರಿಸುತ್ತಿರುವದರಿಂದ ಕಳವಳ ವ್ಯಕ್ತಪಡಿಸಿದೆ. ಅದಕ್ಕೆ ಪೂರಕವಾಗಿ ಇತ್ತೀಚಿಗೆ ಕೆಲ ಪುಡಾರಿ ರೌಡಿಗಳು ಕೆಲ ಸಿನಿಮಾಗಳ ರೌಡಿಸಂ ಅಂಶಗಳೆ ಅಪರಾಧ ಕೃತ್ಯಗಳನ್ನ ಎಸಗಲು ಕಾರಣ ಎಂಬ ಹೇಳಿಕೆಗಳನ್ನು ನೀಡಿದ್ದಾರೆ ಎನ್ನಲಾಗಿದೆ.

blank

ಇದನ್ನೂ ಓದಿ: ಮತ್ತೊಮ್ಮೆ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳಲಿರುವ ಡಾಲಿ ಧನಂಜಯ್​​, ಲೂಸ್​​ ಮಾದ ಯೋಗಿ!

ಅಪರಾಧ ಕೃತ್ಯಗಳನ್ನ ಪ್ರಚೊದನೆ ಮಾಡೋ ದೃಶ್ಯಗಳಿಗೆ ಯುವಜನತೆ ಮಾರು ಹೋಗುತ್ತಿದ್ದಾರೆ ಎಂದು ಪೊಲೀಸ್​ ಇಲಾಖೆ ತಿಳಿಸಿದ್ದು, ಸಿನಿಮಾಗಳಲ್ಲಿ ವಿಜೃಂಭಣೆಯ ಮಚ್ಚು, ಲಾಂಗ್​ಗಳ ಪ್ರದರ್ಶನಕ್ಕೆ ತಡೆಯೊಡ್ಡಲು ತಯಾರಿ ನಡೆಸಿದೆ.

ಇತ್ತೀಚಿನ ಬಹುತೇಕ ಸಿನಿಮಾಗಳಲ್ಲಿ ಕಾಲ್ಪನಿಕ ಎಂದು ಹೇಳಿ ನಿಜವಾದ ಮಾರಾಕಾಸ್ತ್ರಗಳ ಪ್ರದರ್ಶನ ಮಾಡಲಾಗುತ್ತಿದೆ. ಮನರಂಜನಾ ಚಿತ್ರಗಳಲ್ಲಿ ಮಾರಾಕಾಸ್ತ್ರಗಳನ್ನ ಪ್ರದರ್ಶನ ಮಾಡೋದು ಕೂಡ ಅಪರಾಧ. ಹೀಗಿದ್ದರು ಕೂಡ ದೃಶ್ಯಗಳಲ್ಲಿ ನೈಜತೆ ಇರಲಿ ಎಂದು ಸೆಟ್, ಪ್ರಾಪರ್ಟಿ ಹೆಸರಲ್ಲಿ ನೈಜವಾದ ಮಾರಾಕಾಸ್ತ್ರಗಳ ಬಳಕೆಯಾಗುತ್ತಿದ್ದು, ಅಪರಾಧ ಕೃತ್ಯಗಳಿಗೆ ಪ್ರಚೋದನೆ ನೀಡುತ್ತಿವೆ ಎಂದು ಇಲಾಖೆ ಅಭಿಪ್ರಾಯ ಪಟ್ಟಿದೆ. ಇವೆಲ್ಲ ಅಂಶಗಳಿಂದ ಅಪರಾಧ ಕೃತ್ಯಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸದ್ಯ ಪೊಲೀಸ್​ ಇಲಾಖೆ ಚಿತ್ರರಂಗದ ಮೇಲೆ ಕಣ್ಣಿಟ್ಟಿದೆ.

Source: newsfirstlive.com Source link