ಪ್ಯಾರಾಲಿಂಪಿಕ್ಸ್; ಬ್ಯಾಡ್ಮಿಂಟನ್​​ನಲ್ಲಿ ಚಿನ್ನದ ಬೇಟೆಯಾಡಿದ ಕೃಷ್ಣ ನಗರ್

ಪ್ಯಾರಾಲಿಂಪಿಕ್ಸ್; ಬ್ಯಾಡ್ಮಿಂಟನ್​​ನಲ್ಲಿ ಚಿನ್ನದ ಬೇಟೆಯಾಡಿದ ಕೃಷ್ಣ ನಗರ್

ಟೋಕಿಯೋ ಪ್ಯಾರಾಲಿಂಪಿಕ್ಸ್​ನ ಕೊನೆಯ ದಿನ ಭಾರತದ ಪದಕ ಬೇಟೆ ಮುಂದುವರಿದಿದೆ. ಬ್ಯಾಡ್ಮಿಂಟನ್ ಸಿಂಗಲ್ಸ್​ ಎಸ್​ಎಲ್​4 ವಿಭಾಗದಲ್ಲಿ ಸುಹಾಸ್ ಯತಿರಾಜ್ ಬೆಳ್ಳಿ ಪದಕ ಗೆದ್ದ ಬೆನ್ನಲ್ಲೇ ಬ್ಯಾಡ್ಮಿಂಟನ್​​ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಚಿನ್ನ ಒಲಿದಿದೆ.

ಬ್ಯಾಡ್ಮಿಂಟನ್ ಮೆನ್ಸ್​ ಸಿಂಗಲ್ಸ್​ ಎಸ್​​ಹೆಚ್​6 ವಿಭಾಗದ ಫೈನಲ್​ ಪಂದ್ಯದಲ್ಲಿ ಹ್ಯಾಕಾಂಗ್​ನ ಚೂ ಮನ್ ಕೈ ವಿರುದ್ಧ ಸೆಣಸಾಡಿದ ಕೃಷ್ಣ ನಗರ್​, ಮೊದಲ ಸೆಟ್‌ನಲ್ಲಿ 21-17 ಅಂತರದಿಂದ ಮೇಲುಗೈ ಸಾಧಿಸಿದರು. ಇದರೊಂದಿಗೆ ಒಂದು ಅಂಕ ಪಡೆದು ಮುನ್ನಡೆ ಸಾಧಿಸಿದ ಕೃಷ್ಣ ನಗರ್​, ಸೆಕೆಂಡ್ ರೌಂಡ್​​ನಲ್ಲಿ ಎದುರಾಳಿಯಿಂದ ತೀವ್ರ ಪೈಪೋಟಿ ಎದುರಿಸಬೇಕಾಯ್ತು. ಆಕ್ರಮಣಕಾರಿ ಆಟ ಪ್ರದರ್ಶಿಸಿದ ಹ್ಯಾಕಾಂಗ್​ನ ಚೂ ಮನ್ ಕೈ 21-16ರ ಅಂತರದಿಂದ ಗೆದ್ದು ಸಮಬಲ ಸಾಧಿಸಿದರು. ಇದರಿಂದಾಗಿ ಅಂತಿಮ ಸೆಟ್​​ ಮತ್ತಷ್ಟು ರೋಚಕತೆ ಪಡೆದುಕೊಂಡಿತು. ಕೊನೆಯ ಸೆಟ್​ನಲ್ಲಿ ಮತ್ತಷ್ಟು ಆಕ್ರಮಣಕಾರಿ ಆಟ ಪ್ರದರ್ಶಿಸಿದ ಕೃಷ್ಣ , 21-17 ಅಂತರದಿಂದ ಗೆದ್ದು ಬೀಗಿದರು. ಇದರೊಂದಿಗೆ ಪ್ಯಾರಾಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು.

 

Source: newsfirstlive.com Source link