ಕಹಿ ಘಟನೆಗಳನ್ನ ಮರೆತು ಕೆಜಿಎಫ್​​ ನಟಿಯೊಂದಿಗೆ ಕುಣಿದು ಕುಪ್ಪಳಿಸಿದ ಶಿಲ್ಪಾ ಶೆಟ್ಟಿ

ಕಹಿ ಘಟನೆಗಳನ್ನ ಮರೆತು ಕೆಜಿಎಫ್​​ ನಟಿಯೊಂದಿಗೆ ಕುಣಿದು ಕುಪ್ಪಳಿಸಿದ ಶಿಲ್ಪಾ ಶೆಟ್ಟಿ

ಕಳೆದ ಕೆಲ ದಿನಗಳ ಹಿಂದೆ ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಅವರ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ಮರೆತು ಮತ್ತೆ ತನ್ನ ಕೆಲಸ ಕಾರ್ಯಗಳಿಗೆ ವಾಪಸ್​ ಆಗಿದ್ದಾರೆ. ಇನ್ನು ಶಿಲ್ಪಾ ಶೆಟ್ಟಿ ಸೋನಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೂಪರ್​ ಡ್ಯಾನ್ಸರ್​ ಚಾಪ್ಟರ್​ -4 ಶೋನಲ್ಲಿ ಜಡ್ಜ್ ಅಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ವೇಳೆ ಶಿಲ್ಪಾ ಶೆಟ್ಟಿ ಕೆ.ಜಿ.ಎಫ್​ ಚಾಪ್ಟರ್​-2 ಚಿತ್ರದ ನಟಿ ಜೊತೆ ಸ್ಟೇಜ್​ ಮೇಲೆ ಭರ್ಜರಿ ಸ್ಟೆಪ್ಸ್​ ಹಾಕಿದ್ದಾರೆ.

blank
ಹೌದು, ಕೆ.ಜಿ. ಎಫ್​ ಚಾಪ್ಟರ್​-2 ಚಿತ್ರದಲ್ಲಿ ರಮೀಕಾ ಸೇನ್​ ಪಾತ್ರವನ್ನು ನಿರ್ವಹಿಸುತ್ತಿರುವ ಬಾಲಿವುಡ್​ ನಟಿ ರವೀನಾ ಟಂಡನ್, ಸೂಪರ್​ ಡ್ಯಾನ್ಸರ್​ ಚಾಪ್ಟರ್-4 ಶೋಗೆ ಮುಖ್ಯ ಅತಿಥಿಯಾಗಿ ಆಗಮಿಸಿದ್ರು. ಈ ವೇಳೆ ನಟಿ ಶಿಲ್ಪಾ ಶೆಟ್ಟಿ ರವೀನಾ ಟಂಡನ್​ ಜೊತೆ ವೇದಿಕೆ ಮೇಲೆ ಜಾಲಿಯಾಗಿ ಡ್ಯಾನ್ಸ್​ ಮಾಡಿದ್ದಾರೆ. ಸದ್ಯ ಶಿಲ್ಪಾ ಮತ್ತು ರವೀನಾ ಟಂಡನ್​ ಇಬ್ಬರು ಜೊತೆಯಾಗಿ ಭರ್ಜರಿ ನೃತ್ಯ ಮಾಡಿರುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ.

blank

Source: newsfirstlive.com Source link