ದ.ಕನ್ನಡದಲ್ಲಿ ಹತೋಟಿಗೆ ಬಾರದ ಕೊರೊನಾ: ವ್ಯಾಕ್ಸಿನ್​ಗೆ ವೇಗ ತುಂಬಲು ಮುಂದಾದ ಜಿಲ್ಲಾಡಳಿತ

ದ.ಕನ್ನಡದಲ್ಲಿ ಹತೋಟಿಗೆ ಬಾರದ ಕೊರೊನಾ: ವ್ಯಾಕ್ಸಿನ್​ಗೆ ವೇಗ ತುಂಬಲು ಮುಂದಾದ ಜಿಲ್ಲಾಡಳಿತ

ದಕ್ಷಿಣ ಕನ್ನಡ : ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಕೊರೊನಾ ಸೋಂಕು ಹೆಚ್ಚಾದ ಬೆನ್ನಲ್ಲೇ ಇದೀಗ ರಾಜ್ಯದ ಗಡಿ ಜಿಲ್ಲೆಯಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಏರಿಕೆ ಕಾಣುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ ಕೂಡ ಜಿಲ್ಲೆಯಲ್ಲಿ ಮಾತ್ರ ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಸದ್ಯ ಕೇರಳದ ವಿದ್ಯಾರ್ಥಿಗಳೇ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದ್ದಾರೆ ಎನ್ನುವಂತಾಗಿದೆ.

ನಿನ್ನೆ ಜಿಲ್ಲೆಯಲ್ಲಿ 232 ಮಂದಿಗೆ ಕೊರೊನಾ ಸೋಂಕು ದೃಢ ಪಟ್ಟಿದ್ದು, 2,240 ಕೊರೊನಾ ಆಕ್ಟಿವ್ ಪ್ರಕರಣಗಳು ಇವೆ. ಜಿಲ್ಲೆಯಲ್ಲಿ ಕೊರೊನಾ 3 ನೇ ಅಲೆಯ ಆತಂಕ ಆರಂಭವಾಗಿದ್ದು, ಕೊರೊನಾ ಅಬ್ಬರಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಜಿಲ್ಲಾಡಳಿತ, ಜಿಲ್ಲೆಯಾದ್ಯಂತ ಅತಿ ಹೆಚ್ಚು ವ್ಯಾಕ್ಸಿನೇಷನ್‌ ಮಾಡುವ ಮೂಲಕ ಕೊರೊನಾ ನಿಯಂತ್ರಣಕ್ಕೆ ತರಲು ಮುಂದಾಗಿದೆ.

ಇದನ್ನೂ ಓದಿ:  ಮೈಸೂರು ಆಯ್ತು, ಇದೀಗ ಕಲಬುರಗಿಯಲ್ಲಿ ಪೈಶಾಚಿಕ ಕೃತ್ಯ -ಡ್ರಾಪ್ ಕೊಡೋ ನೆಪದಲ್ಲಿ ಮಹಿಳೆ ಮೇಲೆ ಅತ್ಯಾಚಾರ

ಆರೋಗ್ಯ ಇಲಾಖೆ ಇವರೆಗೆ ಜಿಲ್ಲೆಯಲ್ಲಿ 16.5 ಲಕ್ಷ ವ್ಯಾಕ್ಸಿನೇಷನ್‌ ನಡೆಸಿದ್ದು, 12.50 ಲಕ್ಷ ಜನರಿಗೆ ಮೊದಲ ಡೋಸ್ ವ್ಯಾಕ್ಸಿನ್​ ನೀಡಿದೆ. 4 ಲಕ್ಷ ಜನರಿಗೆ ಎರಡೂ ಡೋಸ್ ವ್ಯಾಕ್ಸಿನ್​ ನೀಡಿದ್ದು, ಶೇಕಡಾ 70 ರಷ್ಟು ವ್ಯಾಕ್ಸಿನೇಷನ್‌ ಮಾಡಿರುವುದಾಗಿ ತಿಳಿಸಿದೆ. ಸದ್ಯ ಜಿಲ್ಲೆಯಲ್ಲಿ ವ್ಯಾಕ್ಸಿನ್​ಗೆ ವೇಗ ನೀಡಲು 18 ವರ್ಷ ಮೇಲ್ಪಟ್ಟ 18 ಲಕ್ಷ ಜನರನ್ನು ಗುರುತಿಸಿರುವ ಜಿಲ್ಲಾಡಾಳಿತ, ಸಪ್ಟೆಂಬರ್ ತಿಂಗಳ ಅಂತ್ಯಕ್ಕೆ ಶೇಕಡಾ 100 ರಷ್ಟು ವ್ಯಾಕ್ಸಿನೇಷನ್‌ ಗುರಿ ಹೊಂದಿದೆ ಎಂದು ತಿಳಿಸಿದೆ.

Source: newsfirstlive.com Source link