ಕೋಲಾರದಲ್ಲಿ ಮತ್ತೆ ದಳದ ಕಾಂಪ್ರಮೈಸ್ ಪಾಲಿಟಿಕ್ಸ್​? ದಳಪತಿಗಳಿಗೆ ಪೀಕಲಾಟ ತಂದಿಟ್ಟ JDS ​​ ನಾಯಕರು

ಕೋಲಾರದಲ್ಲಿ ಮತ್ತೆ ದಳದ ಕಾಂಪ್ರಮೈಸ್ ಪಾಲಿಟಿಕ್ಸ್​? ದಳಪತಿಗಳಿಗೆ ಪೀಕಲಾಟ ತಂದಿಟ್ಟ JDS ​​ ನಾಯಕರು

ಕೋಲಾರ ವಿಭಿನ್ನ ರೀತಿಯ ರಾಜಕೀಯಗಳಿಂದಲೇ ಸುದ್ದಿಯಾಗೋದು ಸಾಮಾನ್ಯ. ಯಾಕಂದ್ರೆ ಅಲ್ಲಿ ಯಾವ ಪಕ್ಷದ ನಾಯಕರು ಯಾರ ಹಿತೈಷಿ ಅನ್ನೋದೆ ಗೊತ್ತಾಗಲ್ಲ. ಕಾರಣ ಕಾಂಗ್ರೆಸ್​ ಜೆಡಿಎಸ್ ಹಾಗೂ ಬಿಜೆಪಿಯ ನಾಯಕರು ತಮ್ಮ ರಾಜಕೀಯ ಲಾಭಕ್ಕಾಗಿ ಹೇಗೆ ಬೇಕೋ ಹಾಗೆ ಬದಲಾಗ್ತಾರೆ. ಈಗ ಕೂಡ ಕೋಲಾರ ಮತ್ತು ಶ್ರೀನಿವಾಸಪುರ ಕ್ಷೇತ್ರದ ವಿಚಾರದಲ್ಲಿ ಇದೇ ನಡೆಗಳು ಕಂಡುಬರುತ್ತಿವೆ. ಜೆಡಿಎಸ್​​​​ನ ಹಾಲಿ ಮಾಜಿ ಶಾಸಕರ ನಡೆಗಳು ದಳಪತಿಗಳ ಟೆನ್ಷನ್ ಹೆಚ್ಚಿಸಿದೆ.

blank

ಒಂದು ದಳಕ್ಕೆ ಕೈ ಪ್ರೀತಿ, ಮತ್ತೊಂದು ದಳಕ್ಕೆ ಕಮಲ ಇಷ್ಟ?
ಕೋಲಾರ ಕಾಂಪ್ರಮೈಸ್ ಪೊಲಿಟಿಕ್ಸ್​​ಗೆ ಮತ್ತೆ ಸಾಕ್ಷಿಯಾಗ್ತಿದೆ. ಕಳೆದ ಕೆಲ ದಿನಗಳಿಂದ ಜೆಡಿಎಸ್ ನ ಕೋಲಾರ ಶಾಸಕ ಶ್ರೀನಿವಾಸಗೌಡ ಮತ್ತು ಶ್ರೀನಿವಾಸಪುರದ ಕಾಂಗ್ರೆಸ್​ ಶಾಸಕ ಮತ್ತು ಮಾಜಿ ಸ್ಪೀಕರ್​ ರಮೇಶ್ ಕುಮಾರ್ ಒಬ್ಬರು ಮತ್ತೊಬ್ಬರು ಮೆಚ್ಚಿಕೊಂಡು ಮಾತಾಡುತ್ತಿದ್ದಾರೆ. ಆಶ್ಚರ್ಯವಾದ್ರೂ ಕೂಡ ಇದು ನಿಜ. ಈ ಬಗ್ಗೆ ಪ್ರತಿಕ್ರೀಯಿಸಿದ್ದ ಕುಮಾರಸ್ವಾಮಿ ಶ್ರೀನಿವಾಸಗೌಡರ ಮುಂದೆಯೇ ಕೊಂಚ ಗರಂ ಕೂಡ ಆಗಿದ್ರು.

blank

ಕಾಂಗ್ರೆಸ್​​​ನ ರಮೇಶ್​​ ಕುಮಾರ್​​ರನ್ನ ಹೊಗಳಿದ ಶ್ರೀನಿವಾಸಗೌಡ

ಇದರ ನಡುವೆಯೂ ಜೆಡಿಎಸ್ ನ ಕೋಲಾರ ಶಾಸಕ ಶ್ರೀನಿವಾಸಗೌಡ ಮತ್ತು ಶ್ರೀನಿವಾಸಪುರದ ಕಾಂಗ್ರೆಸ್​ ಶಾಸಕ ಮತ್ತು ಮಾಜಿ ಸ್ಪೀಕರ್​ ರಮೇಶ್ ಕುಮಾರ್ ವೇದಿಕೆ ಹಂಚಿಕೊಳ್ಳೋದು ಪರಸ್ಪರ ಗುಣಗಾನ ಮಾಡಿ ಮಾತನಾಡೋದು ಮುಂದುವರೆದಿದೆ. ಅದಕ್ಕೆ ರಮೇಶ್​​ ಕುಮಾರ್​​ ಶ್ರೀನಿವಾಸಗೌಡರನ್ನ ಹಾಡಿ ಹೊಗಳಿದ್ರು.

ಇನ್ನು ಕೋಲಾರಕ್ಕೆ ನೀರು ಹರಿಸುವ ವಿಚಾರದಲ್ಲಿ ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ಪ್ರಯತ್ನ ಕುರಿತು ಮೆಚ್ಚುಗೆ ವ್ಯಕ್ತಪಡಿಸಿರುವ ಶ್ರೀನಿವಾಸಗೌಡ ಒಂದು ಹೆಜ್ಜೆ ಮುಂದಕ್ಕೆ ಹೋದ ಶ್ರೀನಿವಾಸ್ ಗೌಡರು ತಮ್ಮ ಪಕ್ಷದ ನಾಯಕರಾದ ಹೆಚ್​.ಡಿ.ಕುಮಾರಸ್ವಾಮಿ ವಿರುದ್ದವೇ ಮಾತನಾಡಿದ್ರು.

blank

ಶ್ರೀನಿವಾಸಪುರ ಜೆಡಿಎಸ್ ಮಾಜಿ ಶಾಸಕನಿಗೆ ಕಮಲ ಪ್ರೀತಿ

ಇದು ಕೋಲಾರದ ವಿಚಾರವಾದ್ರೆ, ಇತ್ತ ಶ್ರೀನಿವಾಸಪುರದಲ್ಲಿ ಕಳೆದ ಮೂರು ದಶಕಗಳಿಂದ ಜೆಡಿಎಸ್​ ನ ವೆಂಕಟಶಿವಾರೆಡ್ಡಿ ಮತ್ತು ಮಾಜಿ ಸ್ಪೀಕರ್​ ರಮೇಶ್​ ಕುಮಾರ್ ನಡುವೆ ಟಫ್ ಫೈಟ್ ನಡೀತಿದೆ. ಹೀಗಿದ್ದಾಗ ತಮ್ಮದೇ ಪಕ್ಷದ ಕೋಲಾರ ಶಾಸಕ ಶ್ರೀನಿವಾಸಗೌಡ ತಮ್ಮ ಎದುರಾಳಿ ರಮೇಶ್​ ಕುಮಾರ್​​ರನ್ನ ಹೊಗಳ್ತಿರೋದು ವೆಂಕಟಶಿವಾರೆಡ್ಡಿಯ ಅಸಮಾಧಾನಕ್ಕೂ ಕಾರಣವಾಗಿದೆ. ಹಾಗಾಗಿ ವೆಂಕಟಶಿವಾರೆಡ್ಡಿ, ರಮೇಶ್​​​​ ಕುಮಾರ್ ನಡುವೆ ಶೀಥಲ ಸಮರ ನಡೆಸುತ್ತಿರುವ ಸಚಿವ ಸುಧಾಕರ್ ಜೊತೆ ವೇದಿಕೆ ಹಂಚಿಕೊಂಡು ಎಲ್ಲರ ಹುಬ್ಬೇರುವಂತೆ ಮಾಡಿದ್ರು. ಅಲ್ಲದೆ ವೇದಿಕೆ ಹಂಚಿಕೊಳ್ಳೋಕೆ ಕುಮಾರಸ್ವಾಮಿ ಅವರ ಜೊತೆ ಅನುಮತಿ ಪಡೆದುಕೊಂಡಿದ್ದೇನೆ ಅಂತ ಹೇಳಿದ್ರು.

blank

ಒಟ್ಟಿನಲ್ಲಿ ಅದೇನೇ ಇರಲಿ, ಇತ್ತ ಕೋಲಾರ ಜೆಡಿಎಸ್​​ ಶಾಸಕ ಶ್ರೀನಿವಾಸಗೌಡರು, ಶ್ರೀನಿವಾಸಪುರದ ಕಾಂಗ್ರೆಸ್​ ಶಾಸಕ ಹಾಗೂ ಮಾಜಿ ಸ್ಪೀಕರ್​ ರಮೇಶ್ ಕುಮಾರ್​​​​​ ನಡುವೆ ಆತ್ಮೀಯತೆ ಹೆಚ್ಚಾಗಿದ್ರೆ. ಇದಕ್ಕೆ ಅಸಮಾಧಾನಗೊಂಡಿರೋ ರಮೇಶ್ ಕುಮಾರ್ ವಿರುದ್ಧ ಸೋಲು ಕಂಡ ಜೆಡಿಎಸ್​​ ಮಾಜಿ ಶಾಸಕ ವೆಂಕಟಶಿವಾರೆಡ್ಡಿ, ಬಿಜೆಪಿಯ ವೇದಿಕೆಯಲ್ಲಿ ಕಾಣಿಸಿಕೊಂಡು ಶಾಕ್ ಕೊಟ್ಟಿದ್ರು. ಈ ಶಾಸಕರಿಬ್ಬರ ಈ ನಡೆಗಳು ದಳಪತಿಗಳ ಟೆನ್ಷನ್​​​ಗೆ ಕಾರಣವಾಗಿದ್ರೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಕೋಲಾರ ಕಾಂಪ್ರಮೈಸ್ ಪೊಲಿಟಿಕ್ಸ್​​ಗೆ ಸಾಕ್ಷಿಯಾಗುವ ಮುನ್ಸೂಚನೆ ಕೊಟ್ಟಿದೆ.

Source: newsfirstlive.com Source link