ನಾಳೆಯಿಂದ ರಾಜಾದ್ಯಂತ 6-8 ನೇ ತರಗತಿಗಳು ಆರಂಭ.. ಶಾಲಾ ಅಂಗಳಕ್ಕಿಳಿಯಲು ಸಜ್ಜಾದ ವಿದ್ಯಾರ್ಥಿಗಳು

ನಾಳೆಯಿಂದ ರಾಜಾದ್ಯಂತ 6-8 ನೇ ತರಗತಿಗಳು ಆರಂಭ.. ಶಾಲಾ ಅಂಗಳಕ್ಕಿಳಿಯಲು ಸಜ್ಜಾದ ವಿದ್ಯಾರ್ಥಿಗಳು

ಬೆಂಗಳೂರು : ರಾಜ್ಯದಲ್ಲಿ ನಾಳೆಯಿಂದ 6 ರಿಂದ 8ನೇ ತರಗತಿ ಶಾಲೆ ಆರಂಭವಾಗುತ್ತಿದ್ದು, ಶಾಲಾ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಮೊನ್ನೆ ಸಿಎಂ ನೇತೃತ್ವದಲ್ಲಿ ಶಾಲೆ ಆರಂಭಿಸುವ ಕುರಿತು ಸಭೆ ನಡೆಸಿ ಸಭೆಯಲ್ಲಿ ಶಾಲೆ ಆರಂಭಿಸುವ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ವಾರದಲ್ಲಿ 5 ದಿನ ಮಾತ್ರ ತರಗತಿಗಳು ನಡೆಯಲಿದ್ದು, ಪಾಸಿಟಿವಿಟಿ ರೇಟ್ ಶೇ.2ಕ್ಕಿಂತ ಕಡಿಮೆ ಇದ್ದರೇ ಮಾತ್ರ ಶಾಲೆ ಆರಂಭ ಮಾಡಲಾಗುತ್ತದೆ ಎಂದು ನಿರ್ಣಯ ಕೈಗೊಳ್ಳಲಾಗಿದೆ.

ಆ ಪ್ರಕಾರ ನಾಳೆಯಿಂದ ರಾಜಾದ್ಯಂತ ಶಾಲೆಯ ಘಂಟೆ ಬಾರಿಸಲಿದ್ದು, 6-8ನೆ ತರಗತಿಗಳಿಗೆ ಭೌತಿಕ ತರಗತಿಗಳು ಆರಂಭವಾಗ್ತಿವೆ. ಮೊದಲ ಹಂತದಲ್ಲಿ 9-12 ನೆ ತರಗತಿಗಳನ್ನ ಪ್ರಾರಂಭ ಮಾಡಿದ್ದ ಸರ್ಕಾರ ಇಗ ಬರೋಬ್ಬರಿ 18 ತಿಂಗಳುಗಳ ಬಳಿಕ ಮಾಧ್ಯಮಿಕ ತರಗತಿಗಳ ಭೌತಿಕ ಕ್ಲಾಸ್ ಆರಂಭ ಮಾಡ್ತಿದ್ದು ವಿದ್ಯಾರ್ಥಿಗಳು ಶಾಲಾ ಅಂಗಳಕ್ಕಿಳಿಯಲು ಸಜ್ಜಾಗಿದ್ದಾರೆ.

ಇದನ್ನೂ ಓದಿ:  ಸಾರ್ವಜನಿಕ ಗಣೇಶೋತ್ಸವಕ್ಕೆ ಇಂದೇ ಸಿಗುತ್ತಾ ಗ್ರೀನ್ ​ಸಿಗ್ನಲ್​?

6-8 ಭೌತಿಕ ತರಗತಿ ಆರಂಭಕ್ಕೆ ಈಗಾಗಲೇ ಸಿದ್ಧತೆಗಳನ್ನು ಪೂರ್ಣಗೊಳಿಸಿದ ಶಿಕ್ಷಣ ಇಲಾಖೆ, ಕೆಲವು ಕೋವಿಡ್ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಕೋರಿದೆ.

  • ವಿದ್ಯಾರ್ಥಿಗಳು ಊಟದ ಬಾಕ್ಸ್ ಮತ್ತು ಬಾಟಲಿಯಲ್ಲಿ ಬಿಸಿ ನೀರು ತೆಗೆದುಕೊಂಡು ಬರಬೇಕು.
  • ಶಾಲೆಯಲ್ಲೂ ಬಿಸಿ ನೀರಿನ ವ್ಯವಸ್ಥೆ ಮಾಡಬೇಕು.
  • ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ನಡೆಯಲಿರುವ ತರಗತಿಗಳು.
  • ಕೊವಿಡ್​ ಮಾರ್ಗಸೂಚಿ ಪಾಲಿಸಿ ಶಾಲೆ ಆರಂಭಕ್ಕೆ ಸಿದ್ಧತೆ .
  • ವಾರದಲ್ಲಿ 5 ದಿನ ಮಾತ್ರ ತರಗತಿ ನಡೆಸುವುದಕ್ಕೆ ಅವಕಾಶ.
  • ಶೇಕಡಾ 50ರಷ್ಟು ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಬೇಕು.
  • ವಿದ್ಯಾರ್ಥಿಗಳು ದಿನ ಬಿಟ್ಟು ದಿನ ತರಗತಿಗೆ ಹಾಜರಾಗಬೇಕು.
  • ಶನಿವಾರ, ಭಾನುವಾರ ಶಾಲೆ ಸ್ವಚ್ಛಗೊಳಿಸಲು ಅವಕಾಶ.
  • ವಿದ್ಯಾರ್ಥಿಗಳಿಗೆ ಭೌತಿಕ ಹಾಜರಾತಿ ಕಡ್ಡಾಯವಿರುವುದಿಲ್ಲ.
  • ಆನ್​ಲೈನ್​, ಪಱಯ ವಿಧಾನದಲ್ಲೂ ಹಾಜರಾಗಬಹುದು.
  • ಅಂತರ ಕಾಪಾಡುವುದಕ್ಕೆ ಮಕ್ಕಳ ತಂಡ ರಚಿಸಲು ಸೂಚನೆ.
  • ಕೋವಿಡ್-19 ‘ಪ್ರಮಾಣಿತ ಕಾರ್ಯಾಚರಣೆ ವಿಧಾನ’ಗಳ ಕಡ್ಡಾಯ ಪಾಲಿನೆ.

ಮಕ್ಕಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮಾಸ್ಕ್ ಧರಿಸಿ ಸುರಕ್ಷತಾ ಕ್ರಮಗಳನ್ನು ಪಾಲಿಸಿ,  ಕೋವಿಡ್ ಸೋಂಕು ದೃಢ ಪ್ರಮಾಣ ಶೇ.2ಕ್ಕಿಂತ ಕಡಿಮೆ ಇರುವ ತಾಲೂಕು/ ವಲಯದಲ್ಲಿ ಮಾತ್ರ ಭೌತಿಕ ತರಗತಿಗಳನ್ನು ಆರಂಭಿಸಬೇಕು ಎಂದಿರುವ ಸರ್ಕಾರ,
ಶಾಲಾ ಆವರಣದಲ್ಲಿ ಸ್ಯಾನಿಟೈಜೇಶನ್​ ಸೇರಿದಂತೆ ಶಾಲೆ ಓಪನ್ ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದೆ.

Source: newsfirstlive.com Source link