ನಟ ಸುದೀಪ್​ ಸಾಮಾಜಿಕ ಕಾರ್ಯಕ್ಕೆ ಮೆಚ್ಚಿ ಸನ್ಮಾನಿಸಿದ ಅಂತಾರಾಷ್ಟ್ರೀಯ ರೋಟರಿ ಸಂಸ್ಥೆ

ನಟ ಸುದೀಪ್​ ಸಾಮಾಜಿಕ ಕಾರ್ಯಕ್ಕೆ ಮೆಚ್ಚಿ ಸನ್ಮಾನಿಸಿದ ಅಂತಾರಾಷ್ಟ್ರೀಯ ರೋಟರಿ ಸಂಸ್ಥೆ

ಬೆಂಗಳೂರು: ಸಮಾಜಮುಖಿ ಕೆಲಸದಲ್ಲಿ ನಿರತವಾಗಿರೋ ಖ್ಯಾತ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೆ ಅಂತರಾಷ್ಟ್ರೀಯ ರೋಟರಿ ಸಂಸ್ಥೆ ಸನ್ಮಾನಿಸಿ ಗೌರವಿಸಿದೆ.

blank

ಮೊನ್ನೆ ಕಿಚ್ಚ ಸುದೀಪ್​ ಅವರ ಹುಟ್ಟುಹಬ್ಬದ ಪ್ರಯುಕ್ತ, ಅವರ ಅಭಿಮಾನಿಗಳ ಬಳಗ ಮತ್ತು ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ವತಿಯಿಂದ ರಾಜ್ಯಾದ್ಯಂತ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಕಿಚ್ಚನ ಮೇಲಿನ ಅಭಿಮಾನಕ್ಕೆ ಹತ್ತು ಸಾವಿರಕ್ಕೂ ಅಧಿಕ ಮಂದಿ ಶಿಬಿರಗಳಲ್ಲಿ ಪಾಲ್ಗೊಂಡು ರಕ್ತದಾನ ಮಾಡಿ, ಅಭೂತಪೂರ್ವ ಬೆಂಬಲ ಸೂಚಿಸಿದ್ದರು. ಜೊತೆಗೆ ಕಿಚ್ಚನ ಮೇಲಿನ ಪ್ರೀತಿ ಅಭಿಮಾನಕ್ಕೆ ಇದು ನಮ್ಮ ಉಡುಗೊರೆ ಎಂದಿದ್ದರು.

ಇದನ್ನೂ ಓದಿ: ಗುಡೇಕೋಟೆ ಕರಡಿ ಧಾಮಕ್ಕೆ ನಟ ಪುನೀತ್​ ರಾಜ್​​ಕುಮಾರ್ ಭೇಟಿ

blank

ಹೀಗೆ ಹತ್ತು ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಸುದೀಪ್​ರನ್ನು ಗುರುತಿಸಿದ ಅಂತರಾಷ್ಟ್ರೀಯ ರೋಟರಿ ಸಂಸ್ಥೆ, ಕಿಚ್ಚ ಸುದೀಪ್​ಗೆ ಅಭಿನಂದನೆ ಸಲ್ಲಿಸಿ ಸನ್ಮಾನಿಸಿದ್ದಾರೆ.

Source: newsfirstlive.com Source link