ಭವಿಷ್ಯದ ಚಿಂತೆಯಲ್ಲಿ ವೇಗಿ ಇಶಾಂತ್​ ಶರ್ಮಾ.. ಟೆಸ್ಟ್​ ಕ್ರಿಕೆಟ್​​ನಿಂದಲೂ ಇಶಾಂತ್​ ದೂರ?

ಭವಿಷ್ಯದ ಚಿಂತೆಯಲ್ಲಿ ವೇಗಿ ಇಶಾಂತ್​ ಶರ್ಮಾ.. ಟೆಸ್ಟ್​ ಕ್ರಿಕೆಟ್​​ನಿಂದಲೂ ಇಶಾಂತ್​ ದೂರ?

3 ದಿನಗಳ ಹಿಂದಷ್ಟೇ 33ನೇ ವಸಂತಕ್ಕೆ ಕಾಲಿಟ್ಟ ಟೀಮ್​ ಇಂಡಿಯಾ ವೇಗಿ ಇಶಾಂತ್​ ಶರ್ಮಾಗೆ, ಭವಿಷ್ಯದ ಚಿಂತೆ ಕಾಡ್ತಿದೆ. ಇನ್​ಫ್ಯಾಕ್ಟ್​ ಇಂಗ್ಲೆಂಡ್​ ಪ್ರವಾಸವೇ ಡೆಲ್ಲಿ ವೇಗಿಯ ಪಾಲಿಗೆ ಕೊನೆಯ ಸರಣಿಯಾದ್ರೂ ಅನುಮಾನವಿಲ್ಲ. ಈಗಾಗಲೇ ಸೀಮಿತ ಓವರ್​ಗಳ ಮಾದರಿಯಿಂದ ದೂರ ಆಗಿರೋ ಇಶಾಂತ್​, ಟೆಸ್ಟ್​ ಕ್ರಿಕೆಟ್​​ನಿಂದಲೂ ದೂರ ಉಳಿಯೋ ಸಾಧ್ಯತೆ ಇದೆ.

ಇಶಾಂತ್​ ಶರ್ಮಾ..! ಟೀಮ್​ ಇಂಡಿಯಾ ಕ್ರಿಕೆಟ್​​ ಕಂಡ ಮೋಸ್ಟ್​ ಸಕ್ಸಸ್​ಫುಲ್​ ಬೌಲರ್​​. ಟೆಸ್ಟ್​ ಮಾದರಿಯಲ್ಲಿ ಭಾರತವನ್ನ ಅತಿ ಹೆಚ್ಚು ಬಾರಿ ಪ್ರತಿನಿಧಿಸಿದ ಆಟಗಾರರ ಪಟ್ಟಿಯಲ್ಲಿ, ಇಶಾಂತ್​ಗೆ 9ನೇ ಸ್ಥಾನ. ಕಪಿಲ್​ ದೇವ್​ ಹೊರತುಪಡಿಸಿದ್ರೆ, 100ಕ್ಕೂ ಹೆಚ್ಚು ಟೆಸ್ಟ್​ ಪಂದ್ಯಗಳನ್ನಾಡಿದ ಭಾರತೀಯ ವೇಗಿ ಎಂಬ ಹೆಗ್ಗಳಿಕೆ, ಈ ಡೆಲ್ಲಿ ವೇಗಿಯದ್ದು. ಟೀಮ್​ ಇಂಡಿಯಾದ ಅದೆಷ್ಟೋ ಸ್ಮರಣೀಯ ಗೆಲುವುಗಳ ರೂವಾರಿಯಾಗಿದ್ದ ಇಶಾಂತ್​, ಇಂಗ್ಲೆಂಡ್​​ ಪ್ರವಾಸದ ಬಳಿಕ ತಂಡದಿಂದ ದೂರ ಉಳಿಯೋ ಸಾಧ್ಯತೆ ದಟ್ಟವಾಗಿದೆ.

blank

ಇಶಾಂತ್​ ಶರ್ಮಾ ಟೆಸ್ಟ್​​ ಕರಿಯರ್​​

  • ಪಂದ್ಯ          -104
  • ಓವರ್         -3171.2
  • ವಿಕೆಟ್​​        -311
  • ಬೆಸ್ಟ್​           -10/108

ಅದು 2008ರ ಭಾರತದ ಆಸಿಸ್​​ ಪ್ರವಾಸ. ಅದಾಗಲೇ ವಿಶ್ವ ಕ್ರಿಕೆಟ್​​ನಲ್ಲಿ ಛಾಪು ಮೂಡಿಸಿದ್ದ ರಿಕಿ ಪಾಂಟಿಂಗ್​, ಯಂಗ್​ ಇಶಾಂತ್​ ಶರ್ಮಾ ಎಸೆತಗಳನ್ನ ಎದುರಿಸಲು ಅಕ್ಷರಶಃ ತಿಣುಕಾಟ ನಡೆಸಿದ್ರು. ಆ ಟೆಸ್ಟ್​ನ ಎರಡೂ ಇನ್ನಿಂಗ್ಸ್​​ಗಳಲ್ಲಿ ಪಾಂಟಿಂಗ್​ ವಿಕೆಟ್​​​ ಕಬಳಿಸಿದ್ದು, ಇದೇ ಇಶಾಂತ್​. ಪದಾರ್ಪಣಾ ಪಂದ್ಯದಿಂದ ಹಲ ವರ್ಷಗಳ ಕಾಲ ಇದೇ ಲಯವನ್ನ ಮುಂದುವರೆಸಿದ್ದ ಇಶಾಂತ್​, ಇದೀಗ ಲೈನ್​ ಆ್ಯಂಡ್​​ ಲೆಂಥ್​ ಕಂಡುಕೊಳ್ಳೋಕೆ ಹರಸಾಹಸ ಪಡ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ನೀಡ್ತಿರೋ ಕಳಪೆ ಪ್ರದರ್ಶನವೇ ಇದೀಗ ನಿವೃತ್ತಿಯ ಅಂಚಿಗೆ ತಂದು ನಿಲ್ಲಿಸಿದೆ.

blank

ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಕೇವಲ 3 ವಿಕೆಟ್​ ಕಬಳಿಸಿದ ಇಶಾಂತ್​, ಇಂಗ್ಲೆಂಡ್​​​ ವಿರುದ್ಧದ ಮೊದಲ ಟೆಸ್ಟ್​​ನಲ್ಲಿ ಬೆಂಚ್​​ಗೆ ಸೀಮಿತವಾದ್ರು. ಶಾರ್ದೂಲ್​ ಠಾಕೂರ್​ ಇಂಜುರಿಯಾದ ಕಾರಣ, ಲಾರ್ಡ್ಸ್​ ಹಾಗೂ ಲೀಡ್ಸ್​​ ಟೆಸ್ಟ್​ನಲ್ಲಿ ಮತ್ತೇ ಚಾನ್ಸ್​​ ಗಿಟ್ಟಿಸಿಕೊಂಡ ಡೆಲ್ಲಿ ವೇಗಿ, 2 ಪಂದ್ಯದಿಂದ 5 ವಿಕೆಟ್ ಕಬಳಿಸಿದ್ರಷ್ಟೇ..! ಹಾಗಾಗಿಯೇ 4ನೇ ಟೆಸ್ಟ್​​ನಲ್ಲಿ ಫಿಟ್​ ಆದ ಶಾರ್ದೂಲ್​ಗೆ ಮಣೆ ಹಾಕಿರುವ ಮ್ಯಾನೇಜ್​ಮೆಂಟ್,​ ಇಶಾಂತ್​ಗೆ ಮತ್ತೆ ಕೊಕ್​ ನೀಡಿದೆ. ಇದು ಇರೋ ಪೈಪೋಟಿಯ ನಡುವೆ ಮ್ಯಾನೇಜ್​ಮೆಂಟ್​ಗೆ ಇಶಾಂತ್​ ಕೇವಲ ಆಪ್ಷನಲ್​ ಆಯ್ಕೆಯಾಗಿದ್ದಾರಾ ಎಂಬ ಪ್ರಶ್ನೆ, ಮೂಡಿಸಿದೆ.

ಇದರ ಜೊತೆಗೆ ಮೊಹಮದ್​​ ಸಿರಾಜ್, ಪ್ರಸಿದ್ಧ್ ಕೃಷ್ಣ ಮುಂತಾದ ಯುವ ವೇಗಿಗಳು ಭರವಸೆಯ ಪ್ರದರ್ಶನವೂ ಸ್ಥಾನದ ಪೈಪೋಟಿಯನ್ನ ಹೆಚ್ಚಿಸಿದೆ. ಆದ್ರೆ, 33ನೇ ವಸಂತಕ್ಕೆ ಕಾಲಿಟ್ಟಿರುವ ಇಶಾಂತ್​ಗೆ ಫಿಟ್​ನೆಸ್​ ಕಂಡುಕೊಳ್ಳೋದೇ ಸಮಸ್ಯೆಯಾಗ್ತಿದೆ. ಇದರ ಪರಿಣಾಮವೇ ಅನುಭವಿ ವೇಗಿಯ ಇತ್ತೀಚಿನ ಸ್ಪೆಲ್​ಗಳಲ್ಲಿ ವೇರಿಷಶನ್​, ಸ್ವಿಂಗ್​, ಲೈನ್​ ಆ್ಯಂಡ್ ಲೆಂಥ್​ ಮಾಯವಾಗಿದೆ. ಈ ಎಲ್ಲಾ ಲೆಕ್ಕಾಚಾರಗಳೇ ಇಂಗ್ಲೆಂಡ್​​ ಪ್ರವಾಸದ ಬಳಿಕ ಇಶಾಂತ್​ ಕರಿಯರ್​​ಗೆ ಫುಲ್​ ಸ್ಟಾಪ್​ ಬೀಳುತ್ತಾ..? ಎಂಬ ಪ್ರಶ್ನೆ ಮೂಡಿಸಿರೋದು.

Source: newsfirstlive.com Source link