ಕೇರಳಕ್ಕೆ ಮತ್ತೆ ಎಂಟ್ರಿ ಕೊಟ್ಟ ನಿಫಾ ವೈರಸ್​.. ಕೋಯಿಕೋಡ್​​ನಲ್ಲಿ 12 ವರ್ಷದ ಬಾಲಕ ಸಾವು

ಕೇರಳಕ್ಕೆ ಮತ್ತೆ ಎಂಟ್ರಿ ಕೊಟ್ಟ ನಿಫಾ ವೈರಸ್​.. ಕೋಯಿಕೋಡ್​​ನಲ್ಲಿ 12 ವರ್ಷದ ಬಾಲಕ ಸಾವು

ಕೇರಳದ ಕೋಯಿಕೋಡ್ ಜಿಲ್ಲೆಯ ಆಸ್ಪತ್ರೆಯಲ್ಲಿ ನಿಫಾ ಲಕ್ಷಣಗಳೊಂದಿಗೆ ಚಿಕಿತ್ಸೆಗಾಗಿ ದಾಖಲಾಗಿದ್ದ 12 ವರ್ಷದ ಬಾಲಕ ಭಾನುವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಸೆ.01 ರಂದು ಬಾಲಕ ಆಸ್ಪತ್ರೆಗೆ ದಾಖಲಾಗಿದ್ದ, ಕೂಡಲೇ ಆತನ ಸ್ಯಾಂಪಲ್​​ಗಳನ್ನು ಸಂಗ್ರಹ ಮಾಡಿ ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ​​ಗೆ ಕಳುಹಿಸಿಕೊಡಲಾಗಿತ್ತು. ಪರೀಕ್ಷೆ ಬಳಿಕ ಬಾಲಕನಿಗೆ ನಿಫಾ ವೈರಸ್​ ಪಾಸಿಟಿವ್​​ ಇರುವುದು ದೃಢವಾಗಿತ್ತು.
ಕೂಡಲೇ ಕೇಂದ್ರ ಸರ್ಕಾರದ ಆರೋಗ್ಯ ಅಧಿಕಾರಿಗಳ ತಂಡ ಕೇರಳಕ್ಕೆ ಭೇಟಿ ನೀಡಿತ್ತು. ಈ ತಂಡ ರಾಜ್ಯ ಸರ್ಕಾರಕ್ಕೆ ಅಗತ್ಯವಿದ್ದ ತಾಂತ್ರೀಕ ನೆರವನ್ನು ನೀಡುವ ಕಾರ್ಯವನ್ನು ಮಾಡಿತ್ತು. ಇತ್ತ ರಾಜ್ಯ ಸರ್ಕಾರ ಕೂಡ ಆರೋಗ್ಯ ಅಧಿಕಾರಿಳೊಂದಿಗೆ ಹೈ-ಲೆವೆಲ್ ಸಭೆ ನಡೆಸಿ ನಿಫಾ ವೈರಸ್​ ನಿಯಂತ್ರಣದ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿತ್ತು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್​​, ರೋಗಿಯ ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸಲಾಗಿದ್ದು, ಇದುವರೆಗೂ ಯಾರಿಗೂ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಆದರೂ ಅವರನ್ನು ನಿಗಾದಲ್ಲಿ ಇಟ್ಟಿದ್ದೇವೆ. ಅಲ್ಲದೇ ಕಣ್ಣೂರು ಹಾಗೂ ಮಲಪ್ಪುರಂ ಜಿಲ್ಲೆಗಳಲ್ಲೂ ಜಾಗೃತಿ ವಹಿಸಲು ಸೂಚನೆ ನೀಡಿದ್ದಾಗಿ ತಿಳಿಸಿದರು.

Source: newsfirstlive.com Source link