ಹಿಂದೂ, ಕ್ರಿಶ್ಚಿಯನ್ ಸಂಪ್ರದಾಯದಂತೆ ರಾಯನ್ ನಾಮಕರಣ ಮಾಡಿದ್ದೇಕೆ? ಮೇಘನಾ ರಾಜ್​ ಸ್ಪಷ್ಟನೆ

ಹಿಂದೂ, ಕ್ರಿಶ್ಚಿಯನ್ ಸಂಪ್ರದಾಯದಂತೆ ರಾಯನ್ ನಾಮಕರಣ ಮಾಡಿದ್ದೇಕೆ? ಮೇಘನಾ ರಾಜ್​ ಸ್ಪಷ್ಟನೆ

ನಟಿ ಮೇಘನಾ ರಾಜ್​ ಮತ್ತು ದಿವಂಗತ ನಟ ಚಿರಂಜೀವಿ ಸರ್ಜಾರವರ ಪುತ್ರನಿಗೆ ಮೊನ್ನೆಯಷ್ಟೇ ಹಿಂದು ಹಾಗೂ ಕ್ರಿಶ್ಚಿಯನ್ ಧರ್ಮದ ಸಂಪ್ರದಾಯದ ಪ್ರಕಾರ ನಾಮಕರಣ ನಡೆಸಲಾಗಿತ್ತು. ಇನ್ನು ಮಗುವಿಗೆ ರಾಯನ್​ ರಾಜ್​ ಸರ್ಜಾ ಎಂದು ನಾಮಕರಣ ಮಾಡಲಾಗಿದೆ. ಎರಡು ಧರ್ಮದ ಪ್ರಕಾರ ನಾಮಕರಣ ಮಾಡಿದ ಹಿನ್ನಲೆ ಕೆಲವರು ಕೊಂಕು ಮಾತಾನಾಡಿದ್ರು ಅಂಥವರಿಗೆ ಮೇಘನಾ ಸೋಶಿಯಲ್ ಮೀಡಿಯಾದಲ್ಲಿ ಉತ್ತರ ನೀಡಿದ್ದಾರೆ.

blank

ಮಗುವಿನ ನಾಮಕರಣದ ಸುಂದರ ವಿಡಿಯೋವನ್ನು ಮೇಘನಾ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಈ ವೇಳೆ ಪ್ರಜ್ವಲ್ ದೇವರಾಜ್-ರಾಗಿಣಿ ಚಂದ್ರನ್, ಅಭಿಷೇಕ್ ಅಂಬರೀಷ್, ಸುಮಲತಾ ಅಂಬರೀಷ್, ಭಾರತಿ ವಿಷ್ಣು ವರ್ಧನ್​ ಸೇರಿದಂತೆ ಹಲವರು ನಾಮಕರಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಇನ್ನು ನಾಮಕರಣದ ವಿಡಿಯೋ ಹಂಚಿಕೊಂಡಿರುವ ಮೇಘನಾ ರಾಜ್​…

“ತಾಯಿಯಾಗಿ ಮಗನಿಗೆ ಯಾವುದು ಉತ್ತಮವೋ ಅದನ್ನೇ ಮಾಡುವುದು ಮುಖ್ಯವಾಗುತ್ತದೆ. ಮಗುವಿನ ತಂದೆ-ತಾಯಿಯಾದ ನಾವು ಎರಡು ಜಗತ್ತಿನಲ್ಲಿ ಇರುವ ಮುಖ್ಯವಾದ ಅಂಶಗಳನ್ನು ಎಂಜಾಯ್​ ಮಾಡಿದ್ದೇವೆ. ಜಾತಿ ಮತ್ತು ಧರ್ಮದ ಬೇದ ಭಾವವಿಲ್ಲದೇ ಹಲವರು ರಾಯನ್ ಹಾಗೂ ನಮ್ಮ ಎರಡು ಕುಟುಂಬಗಳಿ​​ಗಾಗಿ ಪ್ರಾರ್ಥನೆ ಮಾಡಿದ್ದಾರೆ. ನಾವು ಕೂಡ ಎಲ್ಲಾ ದೇವರ ಬಳಿ ಆಶೀರ್ವಾದ ಬೇಡಿದ್ದೇವೆ. ಹೀಗಾಗಿ ನಾಮಕರಣವನ್ನು ಸಹ ಎರಡು ಧರ್ಮದಲ್ಲಿ ಮಾಡುವುದು ಮುಖ್ಯವಾಗಿತ್ತು.

blank

ಎಲ್ಲದಕ್ಕಿಂತ ಮುಖ್ಯವಾಗಿ ಚಿರು ಮಾನವೀಯತೆಗೆ ಹೆಚ್ಚು ಗೌರವ ಕೊಡುತ್ತಾರೆ. ಹೀಗಾಗಿ ನಾವು ನಮ್ಮ ಮಗನ ನಾಮಕರಣವನ್ನು ಎರಡು ಸಂಪ್ರದಾಯಗಳ ಪ್ರಕಾರ ನೆರವೇರಿಸಿದ್ದೇವೆ. ಸಂಸ್ಕೃತದಲ್ಲಿ ರಾಯನ್ ಎಂದರೆ ಯುವರಾಜ ಎಂದರ್ಥ. ಆಂತೆಯೇ ಈ ಹೆಸರು ಎಲ್ಲ ಧರ್ಮಕ್ಕೂ ಸೇರುತ್ತದೆ. ಅದು ವಿಭಿನ್ನ ಆವೃತ್ತಿ, ಉಚ್ಛಾರ ಆಗಿರಬಹುದು, ಆದರೆ ಅರ್ಥ ಮಾತ್ರ ಒಂದೇ. ನಮ್ಮ ಹೆಮ್ಮೆ, ನಮ್ಮ ರಾಜ ರಾಯನ್ ರಾಜ್ ಸರ್ಜಾ ಹೆಸರನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ. ನನ್ನ ಮಗ ಅಪ್ಪನಂತೆ ಬೆಳೆಯುತ್ತಾನೆ, ಜನರು ಹೇಗಿದ್ದಾರೋ ಹಾಗೆ ಅವರನ್ನು ಪ್ರೀತಿಸುತ್ತಾನೆ, ಯಾವ ಬ್ಯಾಕ್‌ಗ್ರೌಂಡ್ ಎಂದು ಲೆಕ್ಕಿಸದೆ ಮಾನವೀಯತೆ ಆಧಾರದ ಮೇಲೆ ಕೆಲಸ ಮಾಡುತ್ತಾನೆ. ಇಂದಿನಿಂದ ನಿನ್ನು ಆಳುವ ಸಮಯ ಆರಂಭವಾಗಿದೆ. ” ಎಂದು ಬರೆದುಕೊಂಡಿದ್ದಾರೆ.

 

View this post on Instagram

 

A post shared by Meghana Raj Sarja (@megsraj)

Source: newsfirstlive.com Source link