ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಅನುಮಾನಾಸ್ಪದ ಟ್ರಾಲಿ ಬ್ಯಾಗ್ ಪತ್ತೆ.. ಆತಂಕದಲ್ಲಿ ಜನರು

ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಅನುಮಾನಾಸ್ಪದ ಟ್ರಾಲಿ ಬ್ಯಾಗ್ ಪತ್ತೆ.. ಆತಂಕದಲ್ಲಿ ಜನರು

ಬೆಂಗಳೂರು: ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಅನುಮಾನಾಸ್ಪದ ಟ್ರಾಲಿ ಬ್ಯಾಗ್ ಪತ್ತೆಯಾಗಿದೆ. ಇದರಿಂದ ಜನರು ಗಾಬರಿಗೊಳಗಾಗಿದ್ದಾರೆ.

ಮೆಟ್ರೊ ನಿಲ್ದಾಣದ ನಾರ್ತ್ ಗೇಟ್​ನ ಮೆಟ್ಟಿಲುಗಳ ಬಳಿ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿದ್ದು ಮಹಿಳೆಯೊಬ್ಬರು ಟ್ರಾಲಿ ಬ್ಯಾಗ್ ಕೇಸ್ ಬಿಟ್ಟು ಹೋಗಿರೋ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಮೆಟ್ರೊ ಸಿಬ್ಬಂದಿ ಬ್ಯಾಗ್ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬೈಯಪ್ಪನಹಳ್ಳಿ ಪೊಲೀಸರು ಭೇಟಿ ನೀಡಿದ್ದಾರೆ. ಬ್ಯಾಗ್ ನಲ್ಲಿ ಏನಿದೆ ಎಂಬುದು ಈವರೆಗೆ ಗೊತ್ತಾಗಿಲ್ಲ.. ಸದ್ಯ ಬಾಂಬ್ ಡಿಟೆಕ್ಷನ್ ತಂಡವನ್ನು ಪೊಲೀಸರು ಸ್ಥಳಕ್ಕೆ ಕರೆಸುತ್ತಿದ್ದು ಪ್ರಯಾಣಿಕರನ್ನು ಬ್ಯಾಗ್ ಇರುವ ಸ್ಥಳಕ್ಕೆ ಬಾರದಂತೆ ತಡೆಯಲಾಗಿದೆ.

Source: newsfirstlive.com Source link