‘ನಿನಗಿಂತಲೂ ಚೆನ್ನಾಗಿ ಬದುಕಿ ತೋರಿಸ್ತೀನಿ’; ಮತ್ತೊಬ್ಬಳಿಗಾಗಿ ಪ್ರೀತಿ ತ್ಯಾಗ ಮಾಡಿದ ಯುವತಿಯ ಪಂಚ್​ ಡೈಲಾಗ್

‘ನಿನಗಿಂತಲೂ ಚೆನ್ನಾಗಿ ಬದುಕಿ ತೋರಿಸ್ತೀನಿ’; ಮತ್ತೊಬ್ಬಳಿಗಾಗಿ ಪ್ರೀತಿ ತ್ಯಾಗ ಮಾಡಿದ ಯುವತಿಯ ಪಂಚ್​ ಡೈಲಾಗ್

ಹಾಸನ: ಹಾಸನದಲ್ಲೊಂದು ವಿಭಿನ್ನ ಪ್ರೇಮ ಪುರಾಣ ನಡೆದಿದೆ. ಸಕಲೇಶಪುರ ಮೂಲದ ಯುವಕ ಇಬ್ಬರನ್ನು ಪ್ರೀತಿಸಿದ್ದನಂತೆ. ತಾನು ಇಬ್ಬರನ್ನು ಪ್ರೀತಿಸುತ್ತಿರುವ ವಿಚಾರ ತನ್ನ ಪ್ರಿಯತಮೆಯರಿಗೆ ಗೊತ್ತಾಗದ ಹಾಗೆ ಎಚ್ಚರವಹಿಸಿದ್ದಾನೆ.

ಕೊನೆಗೆ ತಮ್ಮನ್ನು ಮದುವೆಯಾಗುವಂತೆ ಇಬ್ಬರೂ ಯುವತಿಯರು ಯುವಕನ ಬೆನ್ನು ಬಿದ್ದಿದ್ದಾರೆ. ಈ ವೇಳೆ ಯುವಕ ಇಬ್ಬರನ್ನು ಪ್ರೀತಿಸುತ್ತಿರುವುದು ಬೆಳಕಿಗೆ ಬಂದಿದೆ. ಇಬ್ಬರೂ ಯುವತಿಯರು ತನ್ನನ್ನೇ ಮದುವೆಯಾಗುವಂತೆ ಪಟ್ಟು ಹಿಡಿದಿದ್ದಾರೆ. ಓರ್ವ ಯುವತಿ ವಿಷ ಸೇವಿ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಈ ತ್ರಿಕೋನ ಪ್ರೇಮಕಥೆಯ ಬಗ್ಗೆ ತಿಳಿದ ಪರಿಚಯಸ್ಥರು ಹಾಗೂ ಸಂಬಂಧಿಕರು ಸಮಸ್ಯೆ ಬಗೆಹರಿಸಲು ಮುಂದಾಗಿದ್ದಾರೆ. ಕೊನೆಗೆ ಲಾಟರಿ ಎತ್ತಲು ಮುಂದಾಗಿದ್ದಾರೆ. ಇಬ್ಬರು ಹುಡುಗಿಯರಲ್ಲಿ ಯಾರ ಹೆಸರು ಬರುತ್ತದೋ ಅವರ ಜೊತೆ ಮದುವೆ ಎಂದು ನಿರ್ಧಾರ ಮಾಡಿದ್ದಾರೆ. ಇತ್ತ ಲಾಟರಿ ಎತ್ತಲು ಮುಂದಾಗುತ್ತಿದ್ದಂತೆಯೇ ಯುವಕ ವಿಷ ಸೇವಿಸಿದ್ದ ಯುವತಿಯನ್ನೇ ಮದುವೆಯಾಗುವುದಾಗಿ ಹೇಳಿದ್ದಾನೆ. ಕೊನೆಗೆ ಹಿರಿಯರೆಲ್ಲೂ ಸೇರಿ ಯುವಕ ಹಾಗೂ ವಿಷ ಸೇವಿಸಿದ್ದ ಯುವತಿಗೆ ಮದುವೆ ಮಾಡಿಸಿದ್ದಾರೆ.

Source: newsfirstlive.com Source link