ಮಹಾ ಮಳೆಗೆ ಕಂಗಾಲಾದ ಕಲಬುರಗಿ..ಬೆಣ್ಣೆತೊರ ಡ್ಯಾಂನಿಂದ 20 ಸಾವಿರ ಕ್ಯೂಸೆಕ್ಸ್ ನೀರು ರಿಲೀಸ್​

ಮಹಾ ಮಳೆಗೆ ಕಂಗಾಲಾದ ಕಲಬುರಗಿ..ಬೆಣ್ಣೆತೊರ ಡ್ಯಾಂನಿಂದ 20 ಸಾವಿರ ಕ್ಯೂಸೆಕ್ಸ್ ನೀರು ರಿಲೀಸ್​

ಕಲಬುರಗಿ : ಜಿಲ್ಲೆಯಾದ್ಯಂತ ತಡರಾತ್ರಿ ಧಾರಾಕಾರವಾಗಿ ಸುರಿದ ಮಳೆ ಅಲ್ಲಲ್ಲಿ ತೀವ್ರ ಅವಾಂತರ ಸೃಷ್ಟಿಸಿದ್ದು, ಮಳೆ ಆರ್ಭಟಕ್ಕೆ ಜಿಲ್ಲೆಯ ಕಾಗಿಣಾ ನದಿ ಉಕ್ಕಿ ಹರಿಯುತ್ತಿದೆ.

ಜಿಲ್ಲೆಯ ಸೇಡಂ ತಾಲ್ಲೂಕಿನ ಮಳಖೇಡ ಬಳಿ ಇರುವ ಕಾಗಿಣಾ ನದಿ ಭರ್ತಿಯಾಗಿದ್ದು, ಸೇತುವೆ ಸಂಪೂರ್ಣ ಜಲಾವೃತಗೊಂಡು ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಪರಿಣಾಮ ಕಲಬುರಗಿ- ಸೇಡಂ ರಸ್ತೆ ಸಂಚಾರ ಸ್ಥಗಿತಗೊಂಡು ವಾಹನ ಸವಾರರು ಪರದಾಟ‌ ನಡೆಸಿದ್ದಾರೆ.

blank

ಮಳೆಯ ಅಬ್ಬರಕ್ಕೆ ಜಿಲ್ಲೆಯ ಚಿಂಚೋಳಿ ತಾಲೂಕಿನ ದೇಗಲಮಡಿ ಬಳಿಯ ಸೇತುವೆಯೂ ಕೂಡ ಜಲಾವೃತಗೊಂಡಿದ್ದು, ಸಂಪರ್ಕ ಕಡಿತಗೊಂಡಿದ್ದರಿಂದ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಜೊತೆಗೆ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಮನೆಗಳಿಗೆ ನುಗ್ಗಿದ ನೀರು ತೀವ್ರ ಅವಾಂತರ ಸೃಷ್ಟಿಸಿದ್ದು, ಅಗತ್ಯ ವಸ್ತುಗಳನ್ನು ಸ್ಥಳಾಂತರಿಸಲು ಜನರು ಒದ್ದಾಟ ನಡೆಸಿದ್ದಾರೆ.

blank

50 ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು. ಪಟಪಳ್ಳಿ, ಹಸರಗುಂಡಗಿ, ಗಡಿಕೇಶ್ವರ , ಯಂಪಳ್ಳಿ, ಕಂಚಿನಾಳ, ಶಾದಿಪೂರ್ ಗ್ರಾಮಗಳಲ್ಲಿ ಜನರ ನಿದ್ದೆಗೆಡಿಸಿದ್ದು, ಧಾರಾಕಾರ ಮಳೆಗೆ ಜಿಲ್ಲೆಯ ಕಾಳಗಿ ತಾಲ್ಲೂಕಿನ ನೀಲಕಂಠೇಶ್ವರ ದೇವಸ್ಥಾನ ಸಂಪೂರ್ಣ ಮುಳುಗಡೆ ಹೊಂದಿದೆ.

blank

ಜೊತೆಗೆ ಮಳೆಯ ಮಹಾ ಅಬ್ಬರಕೆ ಜಿಲ್ಲೆಯ ಬೆಣ್ಣೆತೋರಾ ಜಲಾಶಯ ತುಂಬಿದ್ದು, ಬೆಣ್ಣೆತೋರಾ ಡ್ಯಾಂ ನಿಂದ ಸುಮಾರು 20 ಸಾವಿರ ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡಲಾಗಿದೆ. ಪರಿಣಾಮ ಡ್ಯಾಂ ಕೆಳಭಾಗದ ಹಳೆ ಹೆಬ್ಬಾಳ ಗ್ರಾಮಕ್ಕೆ ನುಗ್ಗಿದ ನೀರು ಪ್ರವಾಹ ಭೀತಿ ಸೃಷ್ಟಿಸಿದೆ. ಗ್ರಾಮದಲ್ಲಿನ ಹೋಟೆಲ್, ನಾಲ್ಕೈದು ಮನೆ ಮತ್ತು ರೈತರ ಜಮೀನಿಗೆ ನುಗ್ಗಿದ ನೀರು, ಕಟಾವಿಗೆ ಬಂದಿದ್ದ ಉದ್ದು, ಹೆಸರು ಬೆಳೆ ಹಾಳಾಗುವ ಆತಂಕ ಉಂಟು ಮಾಡಿದ್ದು ರೈತರು ಕಂಗಾಲಾಗಿದ್ದಾರೆ.

blank

 

blank

Source: newsfirstlive.com Source link