ಶಾರೂಖ್, ನಯನ ತಾರಾ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರಾ ರಾಣಾ ದಗ್ಗುಬಾಟಿ

ಮುಂಬೈ: ಬಾಲಿವುಡ್ ಬಾದ್ ಷಾ ನಟ ಶಾರೂಖ್ ಖಾನ್ ಹಾಗೂ ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಟಿ ನಯನತಾರಾ ಹೊಸ ಸಿನಿಮಾ ಸೆಟ್ಟೇರಿದ್ದು, ಈ ಸಿನಿಮಾಕ್ಕೆ ನಟ ರಾಣಾ ದಗುಬಾಟಿ ಕೈ ಜೋಡಿಸಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

ಪಠಾಣ್ ಸಿನಿಮಾದದಲ್ಲಿ ಶಾರೂಖ್ ಬ್ಯುಸಿಯಾಗಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಸದ್ಯದ ಮಾಹಿತಿ ಪ್ರಕಾರ ನಿರ್ದೇಶಕ ಆಟ್ಲಿ ಆ್ಯಕ್ಷನ್ ಕಟ್ ಹೇಳುತ್ತಿರುವ ಇನ್ನೂ ಹೆಸರಿಡದ ಸಿನಿಮಾದ ಚಿತ್ರೀಕರಣದಲ್ಲಿ ಶಾರೂಖ್ ನಿರತರಾಗಿದ್ದು, ಈ ಸಿನಿಮಾದಲ್ಲಿ ಶಾರೂಖ್‍ಗೆ ಜೋಡಿಯಾಗಿ ನಯನತಾರಾ ಕಾಣಿಸಿಕೊಂಡಿಸಿದ್ದಾರೆ. ಈಗಾಗಲೇ ಕಳೆದ 10 ದಿನಗಳಿಂದ ಚಿತ್ರೀಕರಣ ನಡೆಯುತ್ತಿದ್ದು, ಇದೀಗ ಈ ಸಿನಿಮಾದ ಎರಡನೇ ಶೆಡ್ಯೂಲ್‍ಗಾಗಿ ಚಿತ್ರತಂಡ ಮುಂಬೈಗೆ ಹಾರಿದೆ. ಇದನ್ನೂ ಓದಿ: ಮೈಸೂರಿನ ದರೋಡೆ, ಶೂಟ್‍ಔಟ್ ಪ್ರಕರಣ- ಖತರ್ನಾಕ್ ಬಾಂಬೆ ಬುಡ್ಡಾ ಅಂದರ್

ಈ ಎಲ್ಲದರ ಮಧ್ಯೆ ಈ ಸಿನಿಮಾದಲ್ಲಿ ಶಾರೂಕ್‍ಗೆ ಖಳ ನಾಯಕನಾಗಿ ರಾಣಾ ದಗ್ಗುಬಾಟಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ ಬಹುಬಾಷಾ ನಟಿ ಪ್ರಿಯಮಣಿ, ಸಾನ್ಯಾ ಮಲ್ಹೋತ್ರಾ ಕೂಡ ಚಿತ್ರದಲ್ಲಿ ಬಣ್ಣಹಚ್ಚಲಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ ಇತ್ತೀಚೆಗಷ್ಟೇ ಪುಣೆಯಲ್ಲಿ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಪ್ರಿಯಾಮಣಿ ಸೆಟ್‍ಗೆ ಭೇಟಿ ನೀಡಿದ್ದು, ಮತ್ತಷ್ಟು ಕೂತುಹಲ ಕೆರಳಿಸಿದೆ. ಇದನ್ನೂ ಓದಿ:ಹಾಸನದಲ್ಲೊಂದು ತ್ರಿಕೋನ ಪ್ರೇಮ ಕಥೆ – ವಿಷ ಸೇವಿಸಿದವಳ ಆಯ್ಕೆ ಬಳಿಕ ಮತ್ತೊಬ್ಬಳು ಕೊಟ್ಟಿದ್ದೇಕೆ ಎಚ್ಚರಿಕೆ.?

blank

ಒಟ್ಟಾರೆ ಬಾಹುಬಲಿಯಲ್ಲಿ ನೆಗೆಟಿವ್ ರೋಲ್‍ನಲ್ಲಿ ಮಿಂಚಿದ್ದ ರಾಣಾ ದಗ್ಗುಬಾಟಿ ಈ ಸಿನಿಮಾದಲ್ಲಿಯೂ ಶಾರೂಖ್‍ಗೆ ಖಳನಾಯನಾಗಿ ಕಾಣಿಸಿಕೊಳ್ಳಲಿದ್ದಾರಾ ಎಂದು ಕಾದು ನೋಡಬೇಕಾಗಿದೆ.

Source: publictv.in Source link