ಟಿ20 ವಿಶ್ವಕಪ್​​ಗೆ ನಡೀತಿದೆ ಭರ್ಜರಿ ತಯಾರಿ -ಟೀಮ್ ಇಂಡಿಯಾ ಮುಂದಿರೋ ಬಿಗ್ ಚಾಲೆಂಜ್ ಏನು?

ಟಿ20 ವಿಶ್ವಕಪ್​​ಗೆ ನಡೀತಿದೆ ಭರ್ಜರಿ ತಯಾರಿ -ಟೀಮ್ ಇಂಡಿಯಾ ಮುಂದಿರೋ ಬಿಗ್ ಚಾಲೆಂಜ್ ಏನು?

ಟಿ20 ವಿಶ್ವಕಪ್​​ಗೆ 41 ದಿನಗಳು ಮಾತ್ರವೇ ಬಾಕಿಯಿದೆ. ಈ ಪ್ರತಿಷ್ಠಿತ ಟಿ20 ವಿಶ್ವಕಪ್​ ಮೇಲೆ 16 ತಂಡಗಳು ಕಣ್ಣಿಟ್ಟಿದ್ದು, ಈಗಾಗಲೇ ಭರ್ಜರಿ ಸಿದ್ದತೆಯಲ್ಲಿ ತೊಡಗಿವೆ. ಇದಕ್ಕಾಗಿ ದ್ವೀಪಕ್ಷೀಯ ಟಿ20 ಸರಣಿಗಳನ್ನ ಆಯೋಜಿಸುತ್ತಾ, ವಿಶ್ವಕಪ್​​ಗೆ ಆಣಿಯಾಗ್ತಿವೆ. ಇದೆಲ್ಲದರ ನಡುವೆ ಅರಬ್​​​ ನಾಡಲ್ಲಿ ಟಿ20 ವಿಶ್ವಕಪ್​​ ಗೆಲ್ಲೋ ಟೀಮ್ ಯಾವುದೆಂಬ ಲೆಕ್ಕಚಾರಗಳೂ, ಜೋರಾಗಿಯೇ ನಡೀತಿವೆ. ಈ ಪೈಕಿ ಬಹುತೇಕ ಕ್ರಿಕೆಟ್​ ಪಂಡಿತರು, ಟೀಮ್ ಇಂಡಿಯಾ ವಿಶ್ವಕಪ್​ ಗೆಲ್ಲೋ ನಂ.1 ತಂಡ ಅಂತಾನೇ ಭವಿಷ್ಯ ನುಡಿಯುತ್ತಿದ್ದಾರೆ. ಆದ್ರೆ ಅಸಲಿಗೆ ಟೀಮ್ ಇಂಡಿಯಾ ಗೆಲ್ಲುತ್ತಾ ಎಂಬ ಅನುಮಾನ ಹುಟ್ಟಿಸಿದೆ.

ವಿವಿಧ ಕಾರಣಗಳಿಂದ ಟೀಮ್ ಇಂಡಿಯಾ ವಿಶ್ವಕಪ್​​ ಗೆಲ್ಲುತ್ತೆಂದು ಕ್ರಿಕೆಟ್ ದಿಗ್ಗಜರು ಭವಿಷ್ಯಗಳನ್ನ ನುಡಿಯುತ್ತಿದ್ದಾರೆ. ಆದ್ರೆ ನಿಜವಾಗಿಯೂ ಟೀಮ್ ಇಂಡಿಯಾ ವಿಶ್ವಕಪ್​​ ಗೆಲ್ಲುತ್ತಾ? ಗೆಲುವು ಅಷ್ಟು ಸುಲಭ ಇದ್ಯಾ? ಇಂಥ ಪ್ರಶ್ನೆಗಳು ಉದ್ಬವಿಸಿದೆ. ಈ ಎಲ್ಲಾ ಪ್ರಶ್ನೆಗಳಿಗೆ ಮೂಲ ಟೀಮ್ ಇಂಡಿಯಾದ ಶೆಡ್ಯೂಲ್.

blank

ಟಿ20 ಪ್ರಮುಖ ಆಟಗಾರರು ಸೇರಿಯಾಯ್ತು 6 ತಿಂಗಳು!
ಹೌದು, ಮಾರ್ಚ್​ 20ರ ಬಳಿಕ ಟೀಮ್ ಇಂಡಿಯಾದ ಪ್ರಮುಖ ಆಟಗಾರರು, ಒಂದೇ ಒಂದು ಟಿ20 ಪಂದ್ಯವನ್ನ ಆಡಿಲ್ಲ. ಪ್ರಮುಖವಾಗಿ ನಾಯಕ ವಿರಾಟ್​ ಕೊಹ್ಲಿ, ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ರಿಷಭ್ ಪಂತ್, ಜಸ್​ಪ್ರೀತ್​​ ಬೂಮ್ರಾರಂಥಹ ಅಗ್ರಗಣ್ಯ ಆಟಗಾರರನ್ನ ಒಳಗೊಂಡ ತಂಡ, ಟಿ20 ಪಂದ್ಯವನ್ನಾಡಿ ಬರೋಬ್ಬರಿ 6 ತಿಂಗಳೇ ಆಯ್ತು. ಇನ್ನೂ ಲಂಕಾ ವಿರುದ್ಧ ಸರಣಿಯಾಡಿದರೂ, ಐದಾರು ಮಂದಿ ಬಿಟ್ಟರೆ ಉಳಿದ್ಯಾವ ಆಟಗಾರ, ಟಿ20 ವಿಶ್ವಕಪ್​​ನಲ್ಲಿ ಸ್ಥಾನ ಗಿಟ್ಟಿಸುವವರಲ್ಲ. ಹೀಗಾಗಿ ಪ್ರಮುಖ ಆಟಗಾರರನ್ನೊಳಗೊಂಡ ಕೂಡಿ ಆಡದಿರುವುದು, ಸಾಕಷ್ಟು ಪರಿಣಾಮವೇ ಬೀಳಲಿದೆ.

ಟೀಮ್ ಇಂಡಿಯಾ ಆಟಗಾರರು, ಐಪಿಎಲ್​ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ. ಇದು ಟಿ20 ಫಾರ್ಮೆಟ್​ಗೆ ಒಗ್ಗಿಕೊಳ್ಳಲು ಆಟಗಾರರಿಗೆ ಸಹಾಯಕಾರಿ. ಆದ್ರೆ ಐಪಿಎಲ್ ನಂತರ ಟೀಮ್ ಇಂಡಿಯಾ ಆಟಗಾರರು ಜೊತೆಯಾಗಿ ಆಡಲು ಹೆಚ್ಚು ಕಾಲಾವಕಾಶವೇ ಸಿಗಲ್ಲ. ವಾರದ ಅಂತರದಲ್ಲಿ ಕೆಲ ಅಭ್ಯಾಸ ಪಂದ್ಯಗಳನ್ನಾಡಿದರೂ ಸಹ, ಆಟಗಾರರ ಜೊತೆ ಹಾಗೂ ಬ್ಯಾಟಿಂಗ್ ಜೊತೆಗಾರನ ಜೊತೆ ಸಮನ್ವಯತೆ ಸಾಧಿಸಲು ಒಂದಷ್ಟು ದಿನಗಳು ಬೇಕಾಗುತ್ತೆ. ಇದು ಟೀಮ್ ಇಂಡಿಯಾ ಆಟಗಾರರನ್ನ ಒತ್ತಡಕ್ಕೆ ಸಿಲುಕಿಸಲಿದೆ. ಅಷ್ಟೇ ಅಲ್ಲ. ತಂಡದ ಫಲಿತಾಂಶದ ಮೇಲು ವ್ಯತಿರಿಕ್ತ ಪರಿಣಾಮ ಬೀರೋದು ಗ್ಯಾರಂಟಿ ಅಂತ ಮಾಜಿ ಕ್ರಿಕೆಟಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Source: newsfirstlive.com Source link