ಗಣೇಶೋತ್ಸವಕ್ಕೆ ಅವಕಾಶ ಕೊಡಿ, ನಮ್ಮ ಬದುಕು ಬೀದಿಗೆ ಬಂದಿದೆ: ವ್ಯಾಪಾರಿಗಳ ಅಳಲು

ಬೆಂಗಳೂರು: ಕೊರೊನಾ ವೈರಸ್‍ನಿಂದಾಗಿ ಈ ಬಾರಿ ಗಣೇಶೋತ್ಸವವನ್ನು ಆಚರಿಸಬೇಕೋ, ಇಲ್ಲವೋ ಎಂಬುವುದರ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ಆದರೆ ಈ ನಡುವೆ ಗಣೇಶ ಮೂರ್ತಿ ತಯಾರಕರು ಗಣೇಶೋತ್ಸವಕ್ಕೆ ಅವಕಾಶ ಮಾಡಿ ಕೊಡಿ, ನಮ್ಮ ಬದುಕು ಬೀದಿಗೆ ಬರುತ್ತಿದೆ ಎಂದು ಅಳಲುತೊಡಿಕೊಂಡಿದ್ದಾರೆ.

ಕೊರೊನಾ ಎಂಬ ವೈರಾಣುವಿನ ಕಾಟಕ್ಕೆ ಎಷ್ಟೋ ಜನ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಜೊತೆಗೆ ಕೊರೊನಾದಿಂದ ಆರ್ಥಿಕ ಚಟುವಟಿಕೆಗಳು ಸಹ ನೆಲ ಕಚ್ಚಿದೆ. ಅದೇ ರೀತಿಯಲ್ಲಿ ಗಣೇಶ ಮೂರ್ತಿ ತಯಾರಕರ ಬದುಕು ಸಹ ಅತಂತ್ರವಾಗಿದೆ. ಈ ಬಾರಿ ಗಣೇಶೋತ್ಸವಕ್ಕೆ ಅವಕಾಶ ಮಾಡಿಕೊಟ್ಟರೆ ನಮ್ಮ ಬದುಕು ಸಾಗಿಸಲು ಸಾಧ್ಯವಾಗುತ್ತದೆ ಎಂದು ವ್ಯಾಪಾರಸ್ಥರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಗಣೇಶೋತ್ಸವ ಆಚರಣೆ ನಡೆಸಿಯೇ ನಡೆಸುತ್ತೇವೆ: ಈಶ್ವರಪ್ಪ

75 ವರ್ಷದಿಂದ ಗಣೇಶ ಮೂರ್ತಿಗಳ ವ್ಯಾಪರದಲ್ಲಿದ್ದೇವೆ. ಈ ಕೊರೊನಾದಿಂದ ಎರಡು ವರ್ಷ ನಮಗೆ ತುಂಬಾ ನಷ್ಟವಾಗಿದೆ. ಶೇ 98 ರಷ್ಟು ವ್ಯಾಪಾರ ಕುಸಿದಿದೆ. ಸರ್ಕಾರ ಇನ್ನೂ ಅನುಮತಿ ಬೇರೆ ನೀಡಿಲ್ಲ. ಹಬ್ಬದ ತಯಾರಿ ಸಹ ನಡೆಯುತ್ತಿಲ್ಲ. ಹಬ್ಬಕ್ಕೆ ಇನ್ನೂ ಕೇವಲ 5 ದಿನ ಮಾತ್ರ ಬಾಕಿ ಇದೆ. ಇಲ್ಲಿವರೆಗೂ ಕೇವಲ 10 ಜನ ಬಂದು ಗಣಪತಿ ಬುಕ್ ಮಾಡಿದ್ದಾರೆ. ಅದು ಸರ್ಕಾರ ಅನುಮತಿ ನೀಡಿದರೆ, ಗಣೇಶನ ಮೂರ್ತಿ ಖರೀಸಿಸುತ್ತೇವೆ ಅಂತ ಹೇಳಿದ್ದಾರೆ ಎಂದು ವ್ಯಾಪಾರಿಗಳು ಕೊರೋನಾದಿಂದ ತಮಗಾಗಿರುವ ನಷ್ಟವನ್ನು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಸಾರ್ವಜನಿಕ ಗಣೇಶೋತ್ಸವ ಕುರಿತು ಸಿಎಂ ನಿರ್ಧಾರ: ಬೈರತಿ ಬಸವರಾಜು

Source: publictv.in Source link