ಜಿಮ್ಸ್​​ನ ಬಾಣಂತಿಯರ ವಾರ್ಡ್​​​​ಗೆ ಎಂಟ್ರಿ ಕೊಟ್ಟ ಕೋತಿಗಳು.. ಹೈರಾಣಾದ ರೋಗಿಗಳು

ಜಿಮ್ಸ್​​ನ ಬಾಣಂತಿಯರ ವಾರ್ಡ್​​​​ಗೆ ಎಂಟ್ರಿ ಕೊಟ್ಟ ಕೋತಿಗಳು.. ಹೈರಾಣಾದ ರೋಗಿಗಳು

ಗದಗ : ಕೋತಿಗಳಿಗೆ ಆಟ ಮನುಷ್ಯರಿಗೆ ಸಂಕಟ ಎಂಬ ಮಾತು ಅಕ್ಷರಶಃ ಇಲ್ಲಿ ಸತ್ಯವಾಗುತ್ತಿದೆ. ಜಿಲ್ಲೆಯಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದ್ದು ಕೋತಿಗಳ ಮಂಗಾಟಕ್ಕೆ ಸ್ಥಳೀಯರು ಹೈರಾಣಗಿದ್ದಾರೆ. ಸಾಲದೆಂಬಂತೆ ಮಕ್ಕಳ ಆಸ್ಪತ್ರೆಗೆ ಕೋತಿಯೊಂದು ಎಂಟ್ರಿ ಕೊಟ್ಟು ಕೆಲ ಕಾಲ ಆತಂಕ ವಾತಾವರಣ ಸೃಷ್ಟಿ ಮಾಡಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

blank

ನಗರದ ‘ಗದಗ ವೈದಕೀಯ ವಿಜ್ಞಾನಗಳ ಸಂಸ್ಥೆ’ಯ (ಜಿಮ್ಸ್) ದಂಡಪ್ಪ ಮಾನ್ವಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಕೋತಿಯೊಂದು ಎಂಟ್ರಿ ಕೊಟ್ಟು ಚೆಲ್ಲಾಟ ನಡೆಸಿದೆ. ಚಿಕ್ಕಮಕ್ಕಳು ಹಾಗೂ ಬಾಣಂತಿಯರ ವಾರ್ಡ್ ನಲ್ಲಿ ಕೋತಿ ಅವಾಂತರ ಸೃಷ್ಟಿಸಿದ್ದು, ಹಸುಗೂಸುಗಳ ನಡುವೆ ಕಪಿಚೇಷ್ಟೇ ಮಾಡಿ ಕೆಲ ಹೊತ್ತು ಭಯದ ವಾತಾವರಣ ಎದುರಾಗಿತ್ತು.

ಇದನ್ನೂ ಓದಿ: ಗುಡೇಕೋಟೆ ಕರಡಿ ಧಾಮಕ್ಕೆ ನಟ ಪುನೀತ್​ ರಾಜ್​​ಕುಮಾರ್ ಭೇಟಿ

blank

ಕಳೆದ ಕೆಲವು ದಿನಗಳಿಂದ ಆಸ್ಪತ್ರೆ ಆವರಣದಲ್ಲೇ ಬೀಡು ಬಿಟ್ಟಿರೋ ಕೋತಿಗಳ ಹಿಂಡು. ಆಸ್ಪತ್ರೆ ಒಳಗೆ ನುಗ್ಗಿ ಕೈಗೆ ಸಿಕ್ಕಿದ್ದನ್ನ ಬಾಚಿಕೊಂಡು ಪರಾರಿಯಾಗುತ್ತಿವೆ ಎಂದು ರೋಗಿಗಳು ಆರೋಪ ಮಾಡಿದ್ದು, ಬೆಡ್ ಗಳ ಮೇಲೆ ಬಂದು ರೋಗಿಗಳ ಮದ್ಯೆ ಜಿಗಿದಾಡೋ ಕೋತಿಗಳು ಸಾಕಷ್ಟು ಕಿರಿಕಿರಿ ಮಾಡುತ್ತಿವೆ. ಆದರೆ ಆಸ್ಪತ್ರೆ ಆಡಳಿತ ಮಂಡಳಿ ಮಾತ್ರ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ರೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹಾವೇರಿಯಲ್ಲಿ ಹುಚ್ಚು ಕೋತಿಯ ದಾಳಿ..ಗಂಭೀರವಾಗಿ ಗಾಯಗೊಂಡ ರೈತ 

Source: newsfirstlive.com Source link