ಪರಪ್ಪನ ಅಗ್ರಹಾರದ ಕೈದಿಗಳು ತಯಾರಿಸಿದ ‘ಆ’ ಉತ್ಪನ್ನಗಳಿಗೆ ಬಂತು ಭರ್ಜರಿ ಬೇಡಿಕೆ!

ಪರಪ್ಪನ ಅಗ್ರಹಾರದ ಕೈದಿಗಳು ತಯಾರಿಸಿದ ‘ಆ’ ಉತ್ಪನ್ನಗಳಿಗೆ ಬಂತು ಭರ್ಜರಿ ಬೇಡಿಕೆ!

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರುವ ಜೈಲು. ಕಳೆದ ಕೆಲ ವರ್ಷಗಳಿಂದಂತೂ ಕೇಂದ್ರ ಕಾರಾಗೃಹ ಹೆಚ್ಚು ಸುದ್ದಿಯಲ್ಲಿದೆ. ಬಹಳ ಮುಖ್ಯವಾಗಿ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಿದ್ದ ಸೆಂಟ್ರಲ್​ ಜೈಲ್​ ಈಗ ಮತ್ತೆ ಸುದ್ದಿಯಲ್ಲಿದೆ. ಕಾರಾಗೃಹದ​ ಕೈದಿಗಳು ತಯಾರಿಸುತ್ತಿರುವ ಉತ್ಪನ್ನಗಳಿಗೆ ಈಗ ಎಲ್ಲಿಲ್ಲದ ಬೇಡಿಕೆ ಬಂದಿದೆಯಂತೆ.

blank

ಹೌದು, ಕಾರಾಗೃಹದ ಸಜಾಬಂಧಿ ಕೈದಿಗಳು ವಿಭಿನ್ನ ಆಲೋಚನೆಗೆ ಮುಂದಾಗಿದ್ದು, ಪರಪ್ಪನ ಅಗ್ರಹಾರದಲ್ಲಿ ತಯಾರಾಗುವ ವಸ್ತುಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆಯಂತೆ. ಇತ್ತೀಚೆಗೆ ಐದು ಮಂದಿ ಸಜಾಬಂಧಿ ಕೈದಿಗಳು ಸ್ವ ಉದ್ದಿಮೆ ಶುರು ಮಾಡಿದ್ದು, ಕೋರ್ಟ್, ಕಾಲೇಜುಗಳಿಂದ ಉತ್ಪನ್ನಗಳನ್ನು ಕಳಿಸಿಕೊಡುವಂತೆ ಜೈಲಿಗೆ ಪತ್ರ ಬರುತ್ತಿವೆಯಂತೆ.

ಫೆನಾಯಿಲ್​, ಕಬ್ಬಿಣದ ವಸ್ತುಗಳಿಗೆ ಎಲ್ಲಿಲ್ಲದ ಬೇಡಿಕೆ!
ಹದಿನೈದು ದಿನದ ಹಿಂದೆಯಷ್ಟೇ ಐದು ಮಂದಿ ಕೈದಿಗಳು ಫಿನಾಯಿಲ್ ತಯಾರಿಸುವ ಉದ್ದಿಮೆ ಆರಂಭಿಸಿದ್ದರು.​ ಮೊದ ಮೊದಲು ಕೋವಿಡ್ ಹಿನ್ನೆಲೆ ಜೈಲಲ್ಲಿ ಶುಚಿತ್ವಕ್ಕಾಗಿ ಮಾತ್ರ ಸೀಮಿತ ಸಂಖ್ಯೆಯ ಫಿನಾಯಿಲ್ ತಯಾರಿಸಲಾಗ್ತಿತ್ತು. ಆದರೆ ದಿನ ಕಳೆದಂತೆ ವಿವಿಧ ಬಣ್ಣದ ಸುಹಾಸನೆಯುಕ್ತ ಫಿನಾಯಿಲ್ ಉದ್ದಿಮೆ ದೊಡ್ಡ ಉದ್ದಿಯಾಗಿ ಬೆಳೆದಿದೆ. ಒಂದು ಲೀಟರ್ ಫಿನಾಯಿಲ್​ಗೆ ಅರವತ್ತು ರೂಪಾಯಿಯಂತೆ ಎಲ್ಲಾ ಕಾರಾಗೃಹಗಳಿಗೆ ರವಾನೆ ಮಾಡಲಾಗುತ್ತಿದೆ. ಜೊತೆಗೆ ಸಾರ್ವಜನಿಕರು ಜೈಲಿಗೆ ಬಂದು ಖರೀದಿ ಮಾಡ್ತಿದ್ದು ಕೈದಿಗಳ ಹರ್ಷಕ್ಕೆ ಪಾರವೇ ಇಲ್ಲದಂತಾಗಿದೆ. ಕೇವಲ ಫೆನಾಯಿಲ್ ಅಷ್ಟೇ ಅಲ್ದೆ ಕೈದಿಗಳು ತಯಾರಿಸಿದ ಕಬ್ಬಿಣದ ಉಪಕರಣಗಳಿಗೂ ಡಿಮ್ಯಾಂಡ್‌ ಹೆಚ್ಚಿದ್ದು, ಕುರ್ಚಿ, ಟೇಬಲ್, ಬೀರು, ಬಾಕ್ಸ್, ಕಬಾರ್ಡ್ ಗಳನ್ನ ಮಾಡಲು ಸಜಾಬಂಧಿ ಕೈದಿಗಳು ಟೆಂಡರ್ ಪಡೆದಿದ್ದಾರೆ.

blank

ಇದನ್ನೂ ಓದಿ: ‘ನಿನಗಿಂತಲೂ ಚೆನ್ನಾಗಿ ಬದುಕಿ ತೋರಿಸ್ತೀನಿ’; ಮತ್ತೊಬ್ಬಳಿಗಾಗಿ ಪ್ರೀತಿ ತ್ಯಾಗ ಮಾಡಿದ ಯುವತಿಯ ಪಂಚ್​ ಡೈಲಾಗ್

ಪ್ರತಿನಿತ್ಯ ಜೈಲಲ್ಲಿ ಕೆಲಸದ ಸಮಯದಂತೆ ತಮ್ಮ ಉದ್ದಿಮೆ ಕೆಲಸದಲ್ಲಿ ನಿರತರಾಗುವ ಕೈದಿಗಳು, ಕೈದಿಗಳ ಸಮಯಪ್ರಜ್ಞೆ, ಕಾರ್ಯಪ್ರವೃತ್ತಿಗೆ ಹಿರಿಯ ಅಧಿಕಾರಿಗಳು ಶಹಬ್ಬಾಶ್ ಎನ್ನುತ್ತಿದ್ದಾರೆ. ಇತ್ತೀಚೆಗಷ್ಟೆ ಹೋಮ್ ಗಾರ್ಡ್ಸ್​​ಗೆ ಹದಿನೆಂಟು ಸಾವಿರ ಶರ್ಟ್ ಪ್ಯಾಂಟ್ ಹೊಲಿದಿದ್ದ ಕೈದಿಗಳು, ಇದೀಗ ಜೈಲಿನ ಗಾರ್ಮೆಂಟ್ಸ್ ನಲ್ಲಿ ತಯಾರಾಗುವ ಬಟ್ಟೆಗಳಿಗೂ ಬಹು ಬೇಡಿಕೆಯಂತೆ. ಮಾಸ್ಕ್, ಟವಲ್ ಸೇರಿದಂತೆ ಬಟ್ಟೆಗಳನ್ನು ಹೊಲಿಯಲು 40 ಹೊಲಿಗೆ ಯಂತ್ರದ ವ್ಯವಸ್ಥೆಯನ್ನ ಸಹ ಮಾಡಲಾಗಿದೆ.

blankಇದನ್ನೂ ಓದಿ: ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಅನುಮಾನಾಸ್ಪದ ಟ್ರಾಲಿ ಬ್ಯಾಗ್ ಪತ್ತೆ.. ಆತಂಕದಲ್ಲಿ ಜನರು

blankblank

 

 

Source: newsfirstlive.com Source link