ಕೋಚ್ ರವಿಶಾಸ್ತ್ರಿಗೆ ಕೊರೊನಾ ಪಾಸಿಟಿವ್; ಆಟಗಾರರಿಗೆ ಶುರುವಾಯ್ತು ಟೆನ್ಷನ್ 

ಕೋಚ್ ರವಿಶಾಸ್ತ್ರಿಗೆ ಕೊರೊನಾ ಪಾಸಿಟಿವ್; ಆಟಗಾರರಿಗೆ ಶುರುವಾಯ್ತು ಟೆನ್ಷನ್ 

ಇಂಡೋ- ಇಂಗ್ಲೆಂಡ್​ ನಡುವಿನ 4ನೇ ಟೆಸ್ಟ್​ ಪಂದ್ಯ ಕುತೂಹಲದ ಘಟ್ಟ ತಲುಪಿದ ಬೆನ್ನಲ್ಲೇ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ.

ಟೀಮ್​ ಇಂಡಿಯಾ ಹೆಡ್​ ಕೋಚ್​​ ರವಿಶಾಸ್ತ್ರಿಗೆ ಕೊರೊನಾ ಸೋಂಕು ಪಾಸಿಟಿವ್​ ಎಂದು ವರದಿಯಾಗಿದೆ. ಪಂದ್ಯದ 4ನೇ ದಿನದಾಟದ ಆರಂಭಕ್ಕೂ ಮುನ್ನ ಈ ಸುದ್ದಿ ಹೊರ ಬಿದ್ದಿರೋದು ಎರಡೂ ತಂಡಗಳ ಕ್ಯಾಂಪ್​ನಲ್ಲಿ ಆತಂಕ ಮೂಡಿಸಿದೆ.

ನಿನ್ನೆ ರಾತ್ರಿ ನಡೆಸಿದ ಪರೀಕ್ಷೆಯಲ್ಲಿ ರವಿಶಾಸ್ತ್ರಿಗೆ ಸೋಂಕು ಇರೋದು ದೃಢಪಟ್ಟಿದ್ದು, ಐಸೋಲೆಷನ್​ಗೆ ಒಳಗಾಗಿದ್ದಾರೆ. ರವಿಶಾಸ್ತ್ರಿ ಜೊತೆಗೆ ಬೌಲಿಂಗ್​ ಕೋಚ್​​ ಭರತ್​ ಅರುಣ್​, ಫೀಲ್ಡಿಂಗ್​ ಕೋಚ್​​ ಆರ್​ ಶ್ರೀಧರ್, ಫಿಸಿಯೋ ನಿತಿನ್​ ಪಟೇಲ್ ಕೂಡ ಸೆಲ್ಫ್​ ಕ್ವಾರಂಟೀನ್​ಗೆ ಒಳಗಾಗಿದ್ದಾರೆ.

Source: newsfirstlive.com Source link