ಬೈಕ್​ ಆಯ್ತು, ಇದೀಗ ಆಟೋದಲ್ಲೂ ವ್ಹೀಲಿಂಗ್​ ಹಾವಳಿ

ಬೈಕ್​ ಆಯ್ತು, ಇದೀಗ ಆಟೋದಲ್ಲೂ ವ್ಹೀಲಿಂಗ್​ ಹಾವಳಿ

ಬೆಂಗಳೂರು: ಇಷ್ಟು ದಿನ ರೋಡ್​ನಲ್ಲಿ ಅಡ್ಡಾದಿಡ್ಡಿ ಬೈಕ್​ ಓಡಿಸುತ್ತಾ ಬೈಕ್ ವೀಲಿಂಗ್ ಮಾಡಿ ಶೋ ಕೊಡೋವರನ್ನ ನೋಡಿದ್ವಿ. ಆದರೆ ಈಗ ಆಟೋದಲ್ಲಿ ಕೂಡ ವೀಲಿಂಗ್​ ಮಾಡಲು ಶುರು ಮಾಡಿದ್ದು, ಆಟೋದಲ್ಲಿ ಡೆಡ್ಲಿ ವೀಲಿಂಗ್ ಜೊತೆ ಸ್ಟಂಟ್ ಮಾಡೋ ಪುಂಡರ ವಿಡಿಯೋವೊಂದು ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ವೈರಲ್​ ಆಗಿದೆ.

blank

ಇದನ್ನೂ ಓದಿ: ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಅನುಮಾನಾಸ್ಪದ ಟ್ರಾಲಿ ಬ್ಯಾಗ್ ಪತ್ತೆ.. ಆತಂಕದಲ್ಲಿ ಜನರು

ಹೌದು, ರಾತ್ರಿ ವೇಳೆ ಹೈವೆಗಳಲ್ಲಿ ಆಟೋದಲ್ಲಿ ಡೆಡ್ಲಿ ವೀಲಿಂಗ್ ಸಾಹಸ ಮಾಡುತ್ತಿರುವ ಪುಂಡರು, ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಆಟಾಟೋಪ ನಡೆಸಿದ್ದಾರೆ. ಆಟೋದಲ್ಲಿ ಡೆಡ್ಲಿ ವೀಲಿಂಗ್ ಜೊತೆ ಸ್ಟಂಟ್ ಮಾಡೋ ಪುಂಡರು ನಂತರ ಅದನ್ನ ಫೇಸ್​ಬುಕ್​​ಗೆ ಪೋಸ್ಟ್ ಮಾಡಿ ಖುಷಿ ಪಡ್ತಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಿರುವ ವೀಡಿಯೋಗಳ ಆಧಾರದ ಮೇಲೆ ವೀಲಿಂಗ್ ಮಾಡಿರುವ ಪುಂಡರಿಗೆ ಸಂಚಾರಿ ಪೊಲೀಸರು ಶೋಧ ಆರಂಭಿಸಿದ್ದು ವೀಲಿಂಗ್ ಮಾಡಿದ ಪುಂಡರಿಗೆ ನಡುಕ ಶುರುವಾಗಿದೆ.

blank

Source: newsfirstlive.com Source link