ರಾತ್ರೋರಾತ್ರಿ ದೇಗುಲದ ಹುಂಡಿ ಒಡೆದು ಹಣ, ಬೆಲೆ ಬಾಳುವ ವಸ್ತುಗಳನ್ನ ಹೊತ್ತೊಯ್ದ ಕಳ್ಳರು

ರಾತ್ರೋರಾತ್ರಿ ದೇಗುಲದ ಹುಂಡಿ ಒಡೆದು ಹಣ, ಬೆಲೆ ಬಾಳುವ ವಸ್ತುಗಳನ್ನ ಹೊತ್ತೊಯ್ದ ಕಳ್ಳರು

ಬಳ್ಳಾರಿ: ದೇಗುಲದ ಹುಂಡಿ ಒಡೆದು ಹಣ ಮತ್ತು ಬೆಲೆ ಬಾಳುವ ವಸ್ತುಗಳನ್ನ ಕಳ್ಳತನ ಮಾಡಿರುವ ಘಟನೆ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹೊಸಕೇರಿ ಗ್ರಾಮದಲ್ಲಿ ನಡೆದಿದೆ.

ರಾತ್ರೋರಾತ್ರಿ ಗ್ರಾಮಕ್ಕೆ ನುಗ್ಗಿದ ಖದೀಮರು, ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಹುಂಡಿ ಒಡೆದು ಬೆಲೆ ಬಾಳುವ ವಸ್ತುಗಳನ್ನ ಕಳ್ಳತನ ಮಾಡಿ ಕೈಚಳಕ ತೋರಿದ್ದಾರೆ ಎನ್ನಲಾಗಿದೆ. ಜೊತೆಗೆ ಹಗರಿಬೊಮ್ಮನಹಳ್ಳಿ ರಸ್ತೆಯ ಎರಡ್ಮೂರು ದೇವಾಲಯಗಳಲ್ಲಿಯೂ ಕಳ್ಳತನ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣ ಕುರಿತು ಸದ್ಯ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿಗುಡೇಕೋಟೆ ಕರಡಿ ಧಾಮಕ್ಕೆ ನಟ ಪುನೀತ್​ ರಾಜ್​​ಕುಮಾರ್ ಭೇಟಿ

Source: newsfirstlive.com Source link