ಓದಿರೋ ಹೆಣ್ಣಕ್ಕಳನ್ನ ಮಾತಾಡ್ಸೋದೆ ಕಷ್ಟ- ಸಿಎಂ ಬೊಮ್ಮಾಯಿ ಹಾಸ್ಯ ಚಟಾಕಿ

ಓದಿರೋ ಹೆಣ್ಣಕ್ಕಳನ್ನ ಮಾತಾಡ್ಸೋದೆ ಕಷ್ಟ- ಸಿಎಂ ಬೊಮ್ಮಾಯಿ ಹಾಸ್ಯ ಚಟಾಕಿ

ಬೆಂಗಳೂರು: ಸುಪ್ರೀಂ ಕೋರ್ಟ್​ ನ್ಯಾಯಮೂರ್ತಿಯಾಗಿ ಪದೋನ್ನತಿ ಹೊಂದಿದ ಬಿ.ವಿ.ನಾಗರತ್ನ ರವರ ಸಾಧನೆ ಮೆಚ್ಚುವಂತದ್ದು ಅವರ ಈ ಸಾಧನೆ ಹೃದಯ ತುಂಬಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಈ ವೇಳೆ ಮಾತನಾಡಿದ ಅವರು ಸಾಮನ್ಯವಾಗಿ ಅಕ್ಷರಸ್ಥ ಹೆಣ್ಣು ಮಕ್ಕಳನ್ನು ಮಾತಾಡಿಸೋದು ತುಂಬ ಕಷ್ಟ, ಅದರಲ್ಲೂ ಈ ಜಡ್ಜ್​ ಆದವರನ್ನು ಮಾತಾಡಿಸೋದು ಇನ್ನು ಕಷ್ಟ ಎಂದು ನಗೆ ಚಟಾಕಿ ಹಾರಿಸಿದ್ದಾರೆ.. ಮುಂದುವರೆದು ಮಾತನಾಡಿದ ಅವರು ನನಗೆ ಈಗ ಎರಡು ಬಾರಿ ಸಿಹಿ ತಿಂದಂತಾಗಿದೆ ಎಂದಿರುವ ಅವರು ಮುಂದೆ ನಾಗರತ್ನ ಅವರು ಸುಪ್ರೀಂ ಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಆದಾಗ ಮೂರು ಬಾರಿ ಸಿಹಿ ತಿಂದಂತಾಗುತ್ತದೆ ಎಂದರು.

ಇದನ್ನೂ ಓದಿ:  ಪರಪ್ಪನ ಅಗ್ರಹಾರದ ಕೈದಿಗಳು ತಯಾರಿಸಿದ ‘ಆ’ ಉತ್ಪನ್ನಗಳಿಗೆ ಬಂತು ಭರ್ಜರಿ ಬೇಡಿಕೆ!

ನಾಗರಿಕತೆ, ಸಂಸ್ಕೃತಿ ಎರಡು ಬೇರೆ ಬೇರೆ, ನಾಗರಿಕತೆ ಬೇರೆ ಬೇರೆಯಾಗಿ ಬೆಳೆಯುತ್ತಿದೆ ಆದರೆ ನ್ಯಾಯಾಂಗ ತನ್ನ ಸಂಸ್ಕೃತಿಯನ್ನು ಉಳಿಸಿಕೊಂಡು ಹೋದಾಗ ಮಾತ್ರ ನಮ್ಮ ದೇಶ ಸುಭದ್ರವಾಗಿರುತ್ತೆ ಎಂದಿದ್ದಾರೆ.

Source: newsfirstlive.com Source link