‘ಎಲ್ಲಾ ಸರ್ಕಾರಗಳ ಅವಧಿಯಲ್ಲೂ ಸಿಲಿಂಡರ್ ಬೆಲೆ ಏರಿಕೆ ಆಗಿದೆ’-ನಳಿನ್ ಕುಮಾರ್ ಕಟೀಲ್

‘ಎಲ್ಲಾ ಸರ್ಕಾರಗಳ ಅವಧಿಯಲ್ಲೂ ಸಿಲಿಂಡರ್ ಬೆಲೆ ಏರಿಕೆ ಆಗಿದೆ’-ನಳಿನ್ ಕುಮಾರ್ ಕಟೀಲ್

ಮೈಸೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ವಿಚಾರ ಸಮರ್ಥಿಸಿಕೊಂಡಿದ್ದು, ಎಲ್ಲಾ ಸರ್ಕಾರಗಳ ಅವಧಿಯಲ್ಲೂ ಬೆಲೆ ಏರಿಕೆ ಆಗಿದೆ ಎಂದಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಲಿಂಡರ್ ಬೆಲೆ ಎಲ್ಲಾ ಸರ್ಕಾರಗಳ ಅವಧಿಯಲ್ಲೂ ಏರಿಕೆ ಕಂಡಿದೆ, ಅದೇ ರೀತಿಯಲ್ಲಿ ಬಿಜೆಪಿ ಸರ್ಕಾರದಲ್ಲೂ ಬೆಲೆ ಏರಿಕೆ ಆಗಿದೆ. ಆದರೆ ಮೋದಿ ಸರ್ಕಾರ ಅದನ್ನ ನಿಯಂತ್ರಿಸುವ ಪ್ರಯತ್ನ ಮಾಡ್ತಿದೆ ಎಂದಿದ್ದಾರೆ.

ಇದನ್ನೂ ಓದಿ:ಸಾರ್ವಜನಿಕ ಗಣೇಶೋತ್ಸವಕ್ಕೆ ಷರತ್ತುಬದ್ಧ ಗ್ರೀನ್​ಸಿಗ್ನಲ್

ಇನ್ನು ರಾಷ್ಟ್ರೀಯ ಶಿಕ್ಷಣ ನೀತಿಗೆ ಕಾಂಗ್ರೆಸ್ ವಿರೋಧ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಇಷ್ಟು ವರ್ಷ ಲಾರ್ಡ್ ಮೆಕಾಲೆ ಶಿಕ್ಷಣ ಪದ್ದತಿಯಲ್ಲಿ ಆಡಳಿತ ನಡೆಸಿದ್ರು. ಆದ್ದರಿಂದ ಸ್ವಾಭಿಮಾನ ದೇಶ ನಿರ್ಮಾಣ ಮಾಡೊದಕ್ಕೆ ಅವರಿಗೆ ಆಗಲಿಲ್ಲ. ವಿದೇಶಿ ಸಂಸ್ಕೃತಿಯಲ್ಲೇ ಬೆಳೆದು ಬಂದಿರುವ ಕಾಂಗ್ರೆಸ್ ಗೆ ಸ್ವದೇಶೀ ಚಿಂತನೆ ಇಲ್ಲ. ಹಾಗಾಗಿ ಎಲ್ಲವನ್ನೂ ವಿರೋಧ ಮಾಡೋದು ಕಾಂಗ್ರೆಸ್ ನ ನೀತಿ. ನರೇಂದ್ರ ಮೋದಿ ಬಂದಾಗಿಂದ ಮೋದಿಯ ಎಲ್ಲಾ ನೀತಿಯನ್ನು ವಿರೋಧ ಮಾಡ್ತಿದ್ದಾರೆ. ಯಾವುದೇ ತೀರ್ಮಾನಕ್ಕೆ ರಾಷ್ಟ್ರದ ಹಿತದೃಷ್ಟಿಯಿಂದಲೂ ಬೆಂಬಲ ನೀಡಿಲ್ಲ. ಸರ್ಜಿಕಲ್ ಸ್ಟ್ರೈಕ್ ಆದಾಗಲೂ ವಿರೋಧ ಮಾಡಿದ್ರೂ, ಚೀನಾ ಮೇಲೆ ಆಕ್ರಮಣವನ್ನೂ ವಿರೋಧ ಮಾಡಿದ್ರು. ಇವರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ ಎಂದು ಕಟೀಲ್​ ವಾಗ್ದಾಳಿ ನಡೆಸಿದ್ದಾರೆ.

Source: newsfirstlive.com Source link