ಬೆಂಗಳೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಮೇಲೆ ಕೊಟ್ಯಂತರ ರೂಪಾಯಿ ವಂಚನೆ ಆರೋಪ

ಬೆಂಗಳೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಮೇಲೆ ಕೊಟ್ಯಂತರ ರೂಪಾಯಿ ವಂಚನೆ ಆರೋಪ

ಬೆಂಗಳೂರು : ಬೃಹತ್ ಬೆಂಗಳೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಮೇಲೆ ವಂಚನೆ ಆರೋಪ ಕೇಳಿ ಬಂದಿದ್ದು, ಸೊಸೈಟಿ ಮಾಲೀಕ ನೂರಾರು ಜನರಿಂದ ಕೋಟ್ಯಂತರ ಹಣ ಪಡೆದು ಎಸ್ಕೇಪ್​ ಆಗಿದ್ದಾನೆ ಎಂದು ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

blank

ಬೆಂಗಳೂರಿನ ಟಿ.ದಾಸರಹಳ್ಳಿಯ ಶೆಟ್ಟಿಹಳ್ಳಿಯಲ್ಲಿ ಘಟನೆ ವರದಿಯಾಗಿದೆ. ಶರೀಶ್ ಸುಬ್ರಾಯ ಹೆಗಡೆ ಎಂಬುವವರ ಒಡೆತನದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಕಳೆದ ಕೆಲವು ದಿನಗಳಿಂದ ಸೊಸೈಟಿಗೆ ಬೀಗ ಜಡಿಯಲಾಗಿದ್ದು, ಮಾಲೀಕ ಹಾಗೂ ಸಿಬ್ಬಂದಿ ನಾಪತ್ತೆ ಹಿನ್ನೆಲೆ, ಗ್ರಾಹಕರು ಆತಂಕದಲ್ಲಿದ್ದಾರೆ.

ಇದನ್ನೂ ಓದಿ: ಸ್ಯಾಂಡಲ್​ವುಡ್​ಗೆ ಬಿಗ್​ ಶಾಕ್​: ರೌಡಿಸಂ ಪ್ರೇರಕ ದೃಶ್ಯಗಳಿಗೆ ಬ್ರೇಕ್​ ಹಾಕಲು ಪೊಲೀಸ್​ ಇಲಾಖೆ ಚಿಂತನೆ

blank

ಮೊದಲು ಜನರ ನಂಬಿಕೆ ಗಳಿಸಿದ್ದ ಸೊಸೈಟಿ ಗೋಲ್ಡ್ ಲೋನ್ ಕೂಡ ಕೊಡ್ತಿತ್ತು. ಇದೀಗ ಜನರ ಗೋಲ್ಡ್ ಸಮೇತ ಪರಾರಿಯಾಗಿರೋ ಶಂಕೆ ವ್ಯಕ್ತವಾಗಿದೆ. ಜೊತೆಗೆ ಸೊಸೈಟಿಯಲ್ಲಿ ಪಿಗ್ಮಿ ರೂಪದಲ್ಲಿ ಹಣ ಕಟ್ಟಿಸಿಕೊಂಡು ವಂಚನೆ ಮಾಡಿರೋ ಆರೋಪ ಕೇಳಿ ಬಂದಿದೆ. ಕೊಟ್ಟಿರುವ ಚೆಕ್ ಗಳು ಕೂಡ ಬೌನ್ಸ್ ಆಗಿದೆ ಎನ್ನಲಾಗಿದೆ. ಸುಮಾರು ಮೂರು ಸಾವಿರಕ್ಕೂ ಅಧಿಕ ಜನರಿಂದ ಹಣ ಕಟ್ಟಿಸಿಕೊಂಡು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ನ್ಯಾಯಕ್ಕಾಗಿ ಅಂಗಲಾಚುತ್ತಿರೋ ಸಾವಿರಾರು ಮಂದಿ ಹೂಡಿಕೆದಾರರು ನ್ಯಾಯ ಕೊಡಿಸುವಂತೆ ಬಾಗಲಗುಂಟೆ ಪೊಲೀಸರ ಮೊರೆ ಹೋಗಿದ್ದಾರೆ.

blank

 

Source: newsfirstlive.com Source link