‘292 ರೂ. ಇದ್ದ LPG ಗ್ಯಾಸ್‌ ಸಿಲಿಂಡರ್‌ ಬೆಲೆ 981 ರೂಗೆ ಏರಿಕೆ ಮಾಡಿದ್ದೇ ಕಾಂಗ್ರೆಸ್​​’- ಸಿ.ಟಿ ರವಿ

‘292 ರೂ. ಇದ್ದ LPG ಗ್ಯಾಸ್‌ ಸಿಲಿಂಡರ್‌ ಬೆಲೆ 981 ರೂಗೆ ಏರಿಕೆ ಮಾಡಿದ್ದೇ ಕಾಂಗ್ರೆಸ್​​’- ಸಿ.ಟಿ ರವಿ

ಚಿಕ್ಕಮಗಳೂರು: 292 ರೂಪಾಯಿ ಇದ್ದ LPG ಗ್ಯಾಸ್‌ ಸಿಲಿಂಡರ್‌ ಬೆಲೆ 981 ರೂಪಾಯಿ ಮಾಡಿದ್ದು ಕಾಂಗ್ರೆಸ್ ಸರ್ಕಾರ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ. ಈ ಸಂಬಂಧ ಮಾತಾಡಿದ ಸಿ.ಟಿ ರವಿ, 2004ರಲ್ಲಿ 292 ರೂಪಾಯಿ ಇದ್ದ LPG ಗ್ಯಾಸ್‌ ಸಿಲಿಂಡರ್‌ ಬೆಲೆ ಬಳಿಕ 981 ರೂಪಾಯಿ ಆಗಲು ಕಾಂಗ್ರೆಸ್​ ನೇತೃತ್ವದ ಯುಪಿಎ ಸರ್ಕಾರ ಕಾರಣ ಎಂದು ಆರೋಪಿಸಿದರು.  

ಗ್ಯಾಸ್​ ಬೆಲೆ ಏರಿಕೆ ತಾತ್ಕಲಿಕ ಅನಿಸುತ್ತದೆ. ಇಡೀ ಜಗತ್ತು ಕೊರೊನಾದಿಂದ ತತ್ತರಿಸಿದೆ. ಹಾಗಾಗಿ ಗ್ಲೋಬಲ್​​ ಕ್ರೈಸಿಸ್​​ ಉಂಟಾಗಿದೆ. ಹೀಗಾಗಿ ದೇಶದಲ್ಲಿ ಗ್ಯಾಸ್​​ ಮತ್ತು ದಿನನಿತ್ಯ ಬೆಲೆಗಳ ದರ ಏರಿಕೆ ಮಾಡಲಾಗಿದೆ ಎಂದರು.

ಕಾಂಗ್ರೆಸ್​ನವರಿಗೆ ಗ್ಯಾಸ್​​​ ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡುವ ಹಕ್ಕಿಲ್ಲ. ಇವರು ಹೋರಾಟ ಮಾಡುವಷ್ಟು ಬೆಲೆ ಏರಿಕೆಯಾಗಿಲ್ಲ. ಕೃಷಿ ಪ್ರಧಾನ ದೇಶದಲ್ಲಿ ಶೇಕಡ 20ರಷ್ಟು ಮಾತ್ರ ತೈಲ ಉತ್ಪಾದನೆ ಆಗುತ್ತಿದೆ. ಮಿಕ್ಕ ಶೇಕಡ 80ರಷ್ಟು ವಿದೇಶಗಳಿಂದ ದಿನನಿತ್ಯ ಮತ್ತು ತೈಲವನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ: ಕೋಚ್ ರವಿಶಾಸ್ತ್ರಿಗೆ ಕೊರೊನಾ ಪಾಸಿಟಿವ್; ಆಟಗಾರರಿಗೆ ಶುರುವಾಯ್ತು ಟೆನ್ಷನ್

ನಮ್ಮ ಸರ್ಕಾರ ಭ್ರಷ್ಟಾಚಾರ ಮಾಡೋದಿಲ್ಲ ಎಂದು ದೇಶದ ಜನರಿಗೆ ವಿಶ್ವಾಸ ಇದೆ. ಕಾಂಗ್ರೆಸ್​ ಅಧಿಕಾರದಲ್ಲಿದ್ದಾಗಲೇ ಹಿಂದೆ ಗ್ಯಾಸ್​​ ಬೆಲೆ ಏರಿಕೆಯಾಗಿತ್ತು ಎಂದು ಸಮರ್ಥಿಸಿಕೊಂಡರು.

Source: newsfirstlive.com Source link